AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಿಕ್ಷುಕರಿಗೆ 1 ರೂಪಾಯಿಯೂ ಕೊಡದೇ ಮುಂದೆ ಸಾಗಿದ ಸೈಫ್​ ಮಗ ಇಬ್ರಾಹಿಂ ಅಲಿ ಖಾನ್; ವಿಡಿಯೋ ವೈರಲ್​

Ibrahim Ali Khan: ಬಡ ಮಹಿಳೆಯರು ಬಂದು ಸಹಾಯಕ್ಕಾಗಿ ಅಂಗಲಾಚಿದಾಗ ಇಬ್ರಾಹಿಂ ಅಲಿ ಖಾನ್ ಒಂದು ರೂಪಾಯಿಯನ್ನೂ ನೀಡಲಿಲ್ಲ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಭಿಕ್ಷುಕರಿಗೆ 1 ರೂಪಾಯಿಯೂ ಕೊಡದೇ ಮುಂದೆ ಸಾಗಿದ ಸೈಫ್​ ಮಗ ಇಬ್ರಾಹಿಂ ಅಲಿ ಖಾನ್; ವಿಡಿಯೋ ವೈರಲ್​
ಇಬ್ರಾಹಿಂ ಅಲಿ ಖಾನ್
TV9 Web
| Edited By: |

Updated on:May 09, 2022 | 10:18 AM

Share

ಖ್ಯಾತ ನಟ ಸೈಫ್​ ಅಲಿ ಖಾನ್​ (Sai Ali Khan) ಅವರ ಇಡೀ ಕುಟುಂಬವೇ ಚಿತ್ರರಂಗದಲ್ಲಿ ತೊಡಗಿಕೊಂಡಿದೆ. ಸೈಫ್​ ಪುತ್ರ ಇಬ್ರಾಹಿಂ ಅಲಿ ಖಾನ್​ ಇನ್ನೂ ನಟನೆಗೆ ಎಂಟ್ರಿ ನೀಡಿಲ್ಲ. ಹಾಗಿದ್ದರೂ ಕೂಡ ಅವರು ಸಖತ್​ ಫೇಮಸ್​ ಆಗಿದ್ದಾರೆ. ಅವರು ಹೋದಲ್ಲಿ ಬಂದಲ್ಲಿ ಪಾಪರಾಜಿ ಕ್ಯಾಮೆರಾಗಳು ಮುತ್ತಿಕೊಳ್ಳುತ್ತವೆ. ಸ್ಟಾರ್​ ಕಿಡ್​ ಎಂಬ ಕಾರಣಕ್ಕೆ ಅವರು ಆಗಾಗ ಸುದ್ದಿ ಆಗುತ್ತಾರೆ. ಇಬ್ರಾಹಿಂ ಅಲಿ ಖಾನ್​ (Ibrahim Ali Khan) ಅವರ ಖಾಸಗಿ ಜೀವನದ ವಿಷಯಗಳು ಕೂಡ ಹೆಚ್ಚು ಹೈಲೈಟ್​ ಆಗುತ್ತಿವೆ. ಇತ್ತೀಚೆಗೆ ಅವರು ಮುಂಬೈನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಜಾಸ್ತಿ ಆಗಿದೆ. ನಟಿ ಪಲಕ್​ ತಿವಾರಿ (Palak Tiwari) ಜೊತೆ ಅವರ ಸುತ್ತಾಟ ಹೆಚ್ಚಾಗಿದೆ. ಅವರ ಕೆಲವು ವಿಡಿಯೋಗಳು ಕೂಡ ವೈರಲ್​ ಆಗುತ್ತಿವೆ. ಈ ಜೋಡಿಯ ಮಧ್ಯೆ ಏನೋ ನಡೆಯುತ್ತಿದೆ ಎಂದು ಗಾಸಿಪ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಇಬ್ರಾಹಿಂ ಅಲಿ ಖಾನ್​ ಅವರ ಒಂದು ವರ್ತನೆಗೆ ನೆಟ್ಟಿಗರಿಂದ ಸಖತ್​ ಟೀಕೆ ವ್ಯಕ್ತವಾಗುತ್ತಿದೆ. ಭಿಕ್ಷುಕರು ಹಣ ಕೇಳಿದಾಗ ಇಬ್ರಾಹಿಂ ಒಂದು ರೂಪಾಯಿಯನ್ನೂ ನೀಡಿದೇ ಮುಂದೆ ಸಾಗಿರುವ ವಿಡಿಯೋ ಈಗ ವೈರಲ್​ ಆಗಿದೆ.

ಇಬ್ರಾಹಿಂ ಅಲಿ ಖಾನ್​ ಹಾಗೂ ಅವರ ಗೆಳತಿ ಪಲಕ್​ ತಿವಾರಿ ಅವರು ಇನ್ನಿತರ ಸ್ನೇಹಿತರ ಜೊತೆ ಸೇರಿ ವೀಕೆಂಡ್​ನಲ್ಲಿ​ ಎಂಜಾಯ್​ ಮಾಡಿದ್ದಾರೆ. ಮುಂಬೈನ ಒಂದು ರೆಸ್ಟೊರೆಂಟ್​​ಗೆ ತೆರಳಿ ಎಲ್ಲರೂ ಪಾರ್ಟಿ ಮಾಡಿದ್ದಾರೆ. ಊಟ ಸವಿದ ಬಳಿಕ ರೆಸ್ಟೊರೆಂಟ್​ನಿಂದ ಹೊರಬರುವಾಗ ಅವರ ಫೋಟೋ ಮತ್ತು ವಿಡಿಯೋ ಸೆರೆಹಿಡಿಯಲು ಪಾಪರಾಜಿಗಳು ಸುತ್ತುವರಿದರು. ಅದೇ ಸಂದರ್ಭದಲ್ಲಿ ಕೆಲವು ಭಿಕ್ಷುಕರು ಕೂಡ ಅಲ್ಲಿದ್ದರು. ಅವರು ಹಣ ನೀಡುವಂತೆ ಅಂಗಲಾಚಿದಾಗ ಸ್ಟಾರ್​ ಕಿಡ್​ಗಳು ಒಂದು ರೂಪಾಯಿಯನ್ನೂ ನೀಡಲಿಲ್ಲ.

ಇದನ್ನೂ ಓದಿ
Image
ಸೈಫ್ ಮಗನನ್ನು ಕಂಡು ​ಶಾರುಖ್ ಪುತ್ರ ಅಂತ ಕರೆದ ಫ್ಯಾನ್ಸ್​​; ಇಬ್ರಾಹಿಂ ಅಲಿ ಖಾನ್​ ಪ್ರತಿಕ್ರಿಯೆ ಹೇಗಿತ್ತು?
Image
ಪ್ರೀತಿ ಜಿಂಟಾ ಮುಂದೆ ಸೈಫ್​ ಅಲಿ ಖಾನ್​ ಸ್ಟಂಟ್​ ಎಡವಟ್ಟು​; ಸತ್ತು ಹೋಗ್ತಾರೆ ಅಂತ ಭಾವಿಸಿದ್ದ ನಟಿ
Image
ಸೈಫ್​ ಅಲಿ ಖಾನ್​ ಪುತ್ರ ಇಬ್ರಾಹಿಂ ಜತೆ ಪಲಕ್​ ತಿವಾರಿ ಡೇಟಿಂಗ್​; ಕ್ಯಾಮೆರಾ ಕಂಡ ತಕ್ಷಣ ಮುಖ ಮುಚ್ಚಿಕೊಂಡ ನಟಿ
Image
ಶಿವನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಸಾರಾ ಅಲಿ ಖಾನ್​; ಸೈಫ್​ ಪುತ್ರಿಯ ಫೋಟೋ ವೈರಲ್​

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮಗುವನ್ನು ಎತ್ತಿಕೊಂಡು ಬಂದ ಮಹಿಳೆಯರು ‘ದಯವಿಟ್ಟು ನಮಗೆ ಹಣ ನೀಡಿ. ನಾವು ಕೂಡ ಊಟ ಮಾಡುತ್ತೇವೆ’ ಎಂದು ಬೇಡುತ್ತಿರುವುದು ಸ್ಪಷ್ಟವಾಗಿ ಗೊತ್ತಾಗಿದೆ. ಇಬ್ರಾಹಿಂ ಅಲಿ ಖಾನ್​ ಅವರು ಕುಳಿತ ಕಾರಿನ ಕಿಟಿಕಿ ಪಕ್ಕದಲ್ಲೇ ನಿಂತು ಆ ಮಹಿಳೆಯರು ಭಿಕ್ಷೆ ಬೇಡಿದರು. ಅವರಿಗೆ ಇಬ್ರಾಹಿಂ ಸಹಾಯ ಮಾಡಲಿಲ್ಲ. ಮಹಿಳೆಯ ಮುಖ ನೋಡಿ, ನಗುನಗುತ್ತ ಅವರು ಹೊರಟು ಹೋದರು. ಈ ವಿಡಿಯೋ ನೋಡಿದ ನೆಟ್ಟಿಗರು ಇಬ್ರಾಹಿಂ ಅಲಿ ಖಾನ್​ ವರ್ತನೆಗೆ ಛೀಮಾರಿ ಹಾಕಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವ ಸೆಲೆಬ್ರಿಟಿಗಳು ಹಸಿದ ಆ ಮಹಿಳೆಯರಿಗೆ ಕನಿಷ್ಠ ನೂರು ರೂಪಾಯಿಯನ್ನಾದರೂ ಕೊಡಬಹುದಿತ್ತು ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ.

ಇಬ್ರಾಹಿಂ ಅಲಿ ಖಾನ್​ ಮತ್ತು ಪಲಕ್​ ತಿವಾರಿ ಅವರು ಹೀಗೆ ಜೊತೆಯಾಗಿ ಸುತ್ತಾಡುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ಕೂಡ ಅವರು ಪಾಪರಾಜಿ ಕ್ಯಾಮೆರಾಗಳ ಕಣ್ಣಿಗೆ ಬಿದ್ದಿದ್ದುಂಟು. ಆ ಸಂದರ್ಭದಲ್ಲಿ ಪಲಕ್​ ತಿವಾರಿ ಅವರು ಮುಖ ಮುಚ್ಚಿಕೊಂಡಿದ್ದರು. ಆದರೆ ಈಗ ಅವರ ಆತ್ಮವಿಶ್ವಾಸ ಹೆಚ್ಚಿದಂತಿದೆ. ಈ ಬಾರಿ ಅವರು ಮುಖ ಮುಚ್ಚಿಕೊಂಡಿಲ್ಲ. ಧೈರ್ಯವಾಗಿ ಕ್ಯಾಮೆರಾಗಳ ಕಡೆಗೆ ನೋಡಿ, ಎಲ್ಲರಿಗೂ ವಿಶ್​ ಮಾಡುತ್ತ ಅವರು ಮುಂದೆ ಸಾಗಿದ್ದಾರೆ.

ಇಬ್ರಾಹಿಂ ಅಲಿ ಖಾನ್​ ಅವರು ಇಂಗ್ಲೆಂಡ್​ನಲ್ಲಿ ಉನ್ನತ ಶಿಕ್ಷಣ ಮುಗಿಸಿ ಬಂದಿದ್ದಾರೆ. ಚಿತ್ರರಂಗದ ಬಗ್ಗೆ ಅವರಿಗೆ ಆಸಕ್ತಿ ಇದೆ. ಕರಣ್​ ಜೋಹರ್​ ನಿರ್ದೇಶನದ, ಆಲಿಯಾ ಭಟ್​ ಹಾಗೂ ರಣವೀರ್​ ಸಿಂಗ್​ ನಟನೆಯ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದಲ್ಲಿ ಇಬ್ರಾಹಿಂ ಅವರು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಅವರು ಡೈರೆಕ್ಟರ್​ ಆಗಿ ಮುಂದುವರಿಯುತ್ತಾರೋ ಅಥವಾ ಹೀರೋ ಆಗಿ ಬಾಲಿವುಡ್​ಗೆ ಎಂಟ್ರಿ ಕೊಡುತ್ತಾರೋ ಎಂಬ ಕೌತುಕ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:18 am, Mon, 9 May 22

ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್