ಪ್ರಭಾಸ್-ದೀಪಿಕಾ ಸಿನಿಮಾಗೆ ಮತ್ತೋರ್ವ ನಟಿಯ ಎಂಟ್ರಿ; ಸಿಕ್ತು ವಿಶೇಷ ಸ್ವಾಗತ

‘ಪ್ರಾಜೆಕ್ಟ್​ ಕೆ’ ಸಿನಿಮಾ ಬಗ್ಗೆ ಈ ಮೊದಲಿನಿಂದಲೂ ಕುತೂಹಲ ಸೃಷ್ಟಿ ಆಗಿದೆ. ಈ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರೆಡಿ ಆಗುತ್ತಿದೆ. ನಾಗ್ ಅಶ್ವಿನ್ ಅವರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಪ್ರಭಾಸ್-ದೀಪಿಕಾ ಸಿನಿಮಾಗೆ ಮತ್ತೋರ್ವ ನಟಿಯ ಎಂಟ್ರಿ; ಸಿಕ್ತು ವಿಶೇಷ ಸ್ವಾಗತ
ದಿಶಾ ಪಟಾಣಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: May 08, 2022 | 4:21 PM

ಪ್ರಭಾಸ್ (Prabhas) ಹಾಗೂ ದೀಪಿಕಾ ಪಡುಕೋಣೆ (Deepika Padykone) ‘ಪ್ರಾಜೆಕ್ಟ್​ ಕೆ’ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ದೊಡ್ಡ ಬಜೆಟ್​ನಲ್ಲಿ ಸಿದ್ಧಗೊಳ್ಳುತ್ತಿದೆ. ಕನ್ನಡದ ಮೂಲಕ ಬಣ್ಣದ ಬದುಕು ಆರಂಭಿಸಿದ ದೀಪಿಕಾ ಅವರು ಈ ಚಿತ್ರದ ಮೂಲಕ ಮತ್ತೆ ದಕ್ಷಿಣ ಭಾರತಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಪ್ರಭಾಸ್ ವೃತ್ತಿ ಜೀವನಕ್ಕೆ ಈ ಸಿನಿಮಾ ತುಂಬಾನೇ ಮುಖ್ಯವಾಗಿದೆ. ಇವರ ಕಾಂಬಿನೇಷನ್​ ನೋಡಲು ಫ್ಯಾನ್ಸ್ ಕಾದು ಕೂತಿದ್ದಾರೆ. ಈಗ ಈ ತಂಡಕ್ಕೆ ಬಾಲಿವುಡ್ ನಟಿ ದಿಶಾ ಪಟಾಣಿ (Disha Patani) ಅವರ ಆಗಮನ ಆಗಿದೆ.

‘ಪ್ರಾಜೆಕ್ಟ್​ ಕೆ’ ಸಿನಿಮಾ ಬಗ್ಗೆ ಈ ಮೊದಲಿನಿಂದಲೂ ಕುತೂಹಲ ಸೃಷ್ಟಿ ಆಗಿದೆ. ಈ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರೆಡಿ ಆಗುತ್ತಿದೆ. ನಾಗ್ ಅಶ್ವಿನ್ ಅವರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾ ಸೆಟ್ಟೇರಿ ತುಂಬ ಸಮಯ ಕಳೆದಿದೆ. ದೀಪಿಕಾ, ಪ್ರಭಾಸ್ ಮಾತ್ರವಲ್ಲದೆ ಅಮಿತಾಭ್​ ಬಚ್ಚನ್ ಕೂಡ ಚಿತ್ರದಲ್ಲಿದ್ದಾರೆ. ಈಗ ದಿಶಾ ಪಟಾಣಿ ಕೂಡ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದಾರೆ.

ವಿಶೇಷ ಗಿಫ್ಟ್ ನೀಡುವ ಮೂಲಕ ‘ಪ್ರಾಜೆಕ್ಟ್​ ಕೆ’ಗೆ ದಿಶಾ ಅವರನ್ನು ವೆಲ್​ಕಮ್​ ಮಾಡಲಾಗಿದೆ. ವಿಶೇಷ ಹೂವಿನ ಗುಚ್ಚ ನೀಡಲಾಗಿದೆ. ಅಲ್ಲದೆ, ವಿಶೇಷ ಸಾಲುಗಳನ್ನು ಬರೆಯಲಾಗಿದೆ. ಈ ಫೋಟೋವನ್ನು ಇನ್​​ಸ್ಟಾಗ್ರಾಮ್ ಸ್ಟೇಟಸ್​ನಲ್ಲಿ ಹಂಚಿಕೊಂಡು ದಿಶಾ ಸಂತಸ ವ್ಯಕ್ತಪಡಿಸಿದ್ದಾರೆ. ದಿಶಾ ಪಟಾಣಿ  ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ
Image
ಅಮ್ಮನಿಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ರಾಶಿ ಖನ್ನಾ; ಇದರ ಬೆಲೆ ಎಷ್ಟು?
Image
ದಿಶಾ ಪಟಾನಿ ಬೋಲ್ಡ್​ ಫೋಟೋಗಳು; ಬೀಚ್​ನಲ್ಲಿ ಬಿಂದಾಸ್​ ಆಗಿ ಪೋಸ್​ ನೀಡಿದ ಬಾಲಿವುಡ್​ ಚೆಲುವೆ
Image
ದಿಶಾ ಪಟಾನಿ ಸ್ಥಿತಿ ನೋಡಲಾಗದೇ ಸೀರೆ, ಬುರ್ಕಾ, ಸ್ಕರ್ಟ್​ ತೊಡಿಸಿದ ನೆಟ್ಟಿಗರು; ಇಲ್ಲಿವೆ ಫನ್ನಿ ಫೋಟೋಗಳು
Image
ಅತಿ ಹಾಟ್​ ಫೋಟೋ ಹಂಚಿಕೊಂಡ ದಿಶಾ ಪಟಾನಿ; ಬಾಯ್​ಫ್ರೆಂಡ್​ ಟೈಗರ್​ ಶ್ರಾಫ್​ ಕಮೆಂಟ್​ ಏನು?

ದಿಶಾ ಪಟಾಣಿ ಈ ವರ್ಷವನ್ನು ಉತ್ತಮವಾಗಿ ಆರಂಭಿಸಿದ್ದಾರೆ. ‘ಏಕ್​ ವಿಲನ್​ ರಿಟರ್ನ್ಸ್​’ ಚಿತ್ರಕ್ಕೆ ಅವರು ನಾಯಕಿ. ಧರ್ಮ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿರುವ ‘ಯೋಧ’ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ. ಈಗ ‘ಪ್ರಾಜೆಕ್ಟ್​ ಕೆ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ದಿಶಾ ಅವರ ಪಾತ್ರ ಹೇಗಿದೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಮೂಡಿದೆ.

ದಿಶಾ ಪಟಾಣಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಹಾಟ್​ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಅವರು ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಅವರು ಹಲವು ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ. ಟೈಗರ್ ಶ್ರಾಫ್ ಜತೆ ಅವರು ರಿಲೇಶನ್​ಶಿಪ್​ನಲ್ಲಿ ಇದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ