ಅತಿ ಹಾಟ್​ ಫೋಟೋ ಹಂಚಿಕೊಂಡ ದಿಶಾ ಪಟಾನಿ; ಬಾಯ್​ಫ್ರೆಂಡ್​ ಟೈಗರ್​ ಶ್ರಾಫ್​ ಕಮೆಂಟ್​ ಏನು?

ಅತಿ ಹಾಟ್​ ಫೋಟೋ ಹಂಚಿಕೊಂಡ ದಿಶಾ ಪಟಾನಿ; ಬಾಯ್​ಫ್ರೆಂಡ್​ ಟೈಗರ್​ ಶ್ರಾಫ್​ ಕಮೆಂಟ್​ ಏನು?
ದಿಶಾ ಪಟಾನಿ, ಟೈಗರ್​ ಶ್ರಾಫ್

ದಿಶಾ ಪಟಾನಿ ಈಗ ರಜೆಯ ಮಜಾ ಸವಿಯುತ್ತಿರುವಂತಿದೆ. ಅಭಿಮಾನಿಗಳಿಗಾಗಿ ಅವರು ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

TV9kannada Web Team

| Edited By: Madan Kumar

Jan 09, 2022 | 3:52 PM

ನಟಿ ದಿಶಾ ಪಟಾನಿ (Disha Patani) ಅವರು ಬಾಲಿವುಡ್​ನಲ್ಲಿ ಸಖತ್​ ಬೇಡಿಕೆ ಹೊಂದಿದ್ದಾರೆ. ಅನೇಕ ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಸೋಶಿಯಲ್​ ಮೀಡಿಯಾದಲ್ಲಿ ಅವರು ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ. ಫಿಟ್​ನೆಸ್​ ಬಗ್ಗೆ ದಿಶಾ ಪಟಾನಿಗೆ ಎಲ್ಲಿಲ್ಲದ ಕಾಳಜಿ. ಪ್ರತಿ ದಿನ ಜಿಮ್​ನಲ್ಲಿ ವರ್ಕೌಟ್​ ಮಾಡುವ ಅವರು ಬಳುಕುವ ಬಳ್ಳಿಯಂತೆ ತಮ್ಮ ದೇಹವನ್ನು ಫಿಟ್​ ಆಗಿ ಇಟ್ಟುಕೊಂಡಿದ್ದಾರೆ. ಆಗಾಗ ಫೋಟೋಶೂಟ್​ ಮಾಡಿಸುವ ಮೂಲಕ ಮಿಂಚುತ್ತಾರೆ. ಹೊಸ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಾರೆ. ಈಗ ದಿಶಾ ಪಟಾನಿ ಅಪ್​ಲೋಡ್​ ಮಾಡಿಕೊಂಡಿರುವ ಒಂದು ಫೋಟೋ ಸಿಕ್ಕಾಪಟ್ಟೆ ಹಾಟ್​ ಆಗಿದೆ. ಅದಕ್ಕೆ ಅವರ ಬಾಯ್​ಫ್ರೆಂಡ್​ ಟೈಗರ್​ ಶ್ರಾಫ್​ (Tiger Shroff) ಕೂಡ ಕಮೆಂಟ್​ ಮಾಡಿದ್ದಾರೆ.​

ದಿಶಾ ಪಟಾನಿ ಈಗ ರಜೆಯ ಮಜಾ ಸವಿಯುತ್ತಿರುವಂತಿದೆ. ಅಭಿಮಾನಿಗಳಿಗಾಗಿ ಅವರು ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಯಾವುದೋ ಕಡಲ ಕಿನಾರೆಯಲ್ಲಿ ಅವರು ಬಿಕಿನಿ ಧರಿಸಿ ಕಾಲ ಕಳೆದಿದ್ದಾರೆ. ಈ ವೇಳೆ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. ಆ ಫೋಟೋಗಳನ್ನು ಕಂಡು ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿದೆ. ಪಡ್ಡೆಗಳ ನಿದ್ದೆ ಕದಿಯುವಂತಿರುವ ಈ ಫೋಟೋ ಈಗ ಸಖತ್​ ವೈರಲ್​ ಆಗಿದೆ.

ದಿಶಾ ಪಟಾನಿ ಅವರು ನಟ ಟೈಗರ್​ ಶ್ರಾಫ್​ ಜೊತೆ ಡೇಟಿಂಗ್​ ನಡೆಸುತ್ತಿದ್ದಾರೆ ಎಂಬುದು ಮೊದಲಿನಿಂದಲೂ ಕೇಳಿಬರುತ್ತಿರುವ ಸುದ್ದಿ. ಅನೇಕ ಸಂದರ್ಭಗಳಲ್ಲಿ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದುಂಟು. ಆದರೆ ತಮ್ಮಿಬ್ಬರ ಪ್ರೀತಿಯನ್ನು ಅವರು ಈವರೆಗೆ ಬಹಿರಂಗವಾಗಿ ಹೇಳಿಕೊಂಡಿಲ್ಲ. ಈಗ ದಿಶಾ ಹಂಚಿಕೊಂಡಿರುವ ಫೋಟೋಗೆ ಟೈಗರ್​ ಶ್ರಾಫ್​ ಕಮೆಂಟ್​ ಮಾಡಿದ್ದಾರೆ. ಈ ಫೋಟೋ ಎಷ್ಟು ಹಾಟ್​ ಆಗಿದೆ ಎಂಬುದನ್ನು ಸೂಚಿಸಲು ಬೆಂಕಿಯ ಎಮೋಜಿಗಳನ್ನು ಅವರು ಕಮೆಂಟ್​ ಬಾಕ್ಸ್​ನಲ್ಲಿ ಹಾಕಿದ್ದಾರೆ.

2015ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ದಿಶಾ ಪಟಾನಿ ಅವರು ನಟಿಸಿರುವುದು ಕೆಲವೇ ಸಿನಿಮಾಗಳಲ್ಲಿ ಮಾತ್ರ. ಹಾಗಿದ್ದರೂ ಅವರ ಖ್ಯಾತಿ ದೇಶಾದ್ಯಂತ ಹಬ್ಬಿದೆ. ‘ಎಂ.ಎಸ್​. ಧೋನಿ: ದಿ ಅಲ್​ ಟೋಲ್ಡ್​ ಸ್ಟೋರಿ’, ‘ಬಾಘಿ’ ಮುಂತಾದ ಸಿನಿಮಾಗಳಿಂದ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿತು. ಅನೇಕ ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಅವರು ರಾಯಭಾರಿ ಆಗಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ದಿಶಾ ಪಟಾನಿ ಅವರನ್ನು 4.8 ಕೋಟಿಗೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ಹಲವು ಆಫರ್​ಗಳನ್ನು ಕೈಯಲ್ಲಿಟ್ಟುಕೊಂಡು ದಿಶಾ ಮುನ್ನುಗ್ಗುತ್ತಿದ್ದಾರೆ.

ಇದನ್ನೂ ಓದಿ:

ಲಾಕ್​ಡೌನ್​ ಮಧ್ಯೆಯೂ ಟೈಗರ್-ದಿಶಾ ರೊಮ್ಯಾಂಟಿಕ್​ ರೈಡ್​; ಇವರನ್ನು ತಡೆದ ಪೊಲೀಸರು, ಮುಂದೇನಾಯ್ತು?

ಟೈಗರ್​ ಶ್ರಾಫ್​ ಮಸಲ್ಸ್​ ನೋಡಿ ಫಿದಾ ಆದ ಅಭಿಮಾನಿಗಳು; ಇಲ್ಲಿದೆ ವಿಡಿಯೋ

Follow us on

Related Stories

Most Read Stories

Click on your DTH Provider to Add TV9 Kannada