ಟೈಗರ್​ ಶ್ರಾಫ್​ ಮಸಲ್ಸ್​ ನೋಡಿ ಫಿದಾ ಆದ ಅಭಿಮಾನಿಗಳು; ಇಲ್ಲಿದೆ ವಿಡಿಯೋ

ಟೈಗರ್​ ಶ್ರಾಫ್​ ಮಸಲ್ಸ್​ ನೋಡಿ ಫಿದಾ ಆದ ಅಭಿಮಾನಿಗಳು; ಇಲ್ಲಿದೆ ವಿಡಿಯೋ
ಟೈಗರ್​ ಶ್ರಾಫ್​ ಮಸಲ್ಸ್​ ನೋಡಿ ಫಿದಾ ಆದ ಅಭಿಮಾನಿಗಳು; ಇಲ್ಲಿದೆ ವಿಡಿಯೋ

‘ಹೀರೋಪಂತಿ 2’ ಸಿನಿಮಾದಲ್ಲಿ ಟೈಗರ್​ ಶ್ರಾಫ್​ ನಟಿಸುತ್ತಿದ್ದಾರೆ. ಮೊದಲ ಶೆಡ್ಯೂಲ್​ ಮುಂಬೈನಲ್ಲಿ ನೆರವೇರಿತ್ತು. ಅಹ್ಮದ್​ ಖಾನ್​ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್​ ದೃಶ್ಯಗಳು ಇರಲಿವೆಯಂತೆ.

TV9kannada Web Team

| Edited By: Rajesh Duggumane

Jul 23, 2021 | 9:50 PM

ನಟ ಟೈಗರ್ ಶ್ರಾಫ್​ ಫಿಟ್​ನೆಸ್​ಗೆ ಸಾಕಷ್ಟು ಪ್ರಾಮುಖ್ಯತೆ ಕೊಡುತ್ತಾರೆ. ಈ ಕಾರಣಕ್ಕೆ ಅವರು ನಿತ್ಯ ಹಲವು ಗಂಟೆ ಕಾಲ ಜಿಮ್​ನಲ್ಲಿ ಕಳೆಯುತ್ತಾರೆ. ಅನೇಕ ಬಾರಿ ಅವರು ಜಿಮ್​ನಲ್ಲಿ ಕಳೆದಿರುವ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈಗ ಅವರು ಹೊಸ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಟೈಗರ್​ ಶ್ರಾಫ್​ ಬಾಡಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

‘ಹೀರೋಪಂತಿ 2’ ಸಿನಿಮಾದಲ್ಲಿ ಟೈಗರ್​ ಶ್ರಾಫ್​ ನಟಿಸುತ್ತಿದ್ದಾರೆ. ಮೊದಲ ಶೆಡ್ಯೂಲ್​ ಮುಂಬೈನಲ್ಲಿ ನೆರವೇರಿತ್ತು. ಅಹ್ಮದ್​ ಖಾನ್​ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್​ ದೃಶ್ಯಗಳು ಇರಲಿವೆಯಂತೆ. ಈ ಚಿತ್ರಕ್ಕಾಗಿ ಟೈಗರ್​ ಶ್ರಾಫ್​ ಜಿಮ್​ನಲ್ಲಿ ಎಕ್ಸ್​ಟ್ರಾ ವರ್ಕೌಟ್​ ಮಾಡಿದ್ದಾರೆ. ಈ ವಿಡಿಯೋವನ್ನು ಟೈಗರ್​ ಶ್ರಾಫ್​ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬಾಲಿವುಡ್​ನ ಖ್ಯಾತ ನಿರ್ಮಾಪಕ ಸಾಜಿದ್​ ನಾಡಿಯದ್ವಾಲಾ ಅವರು ಹೀರೋಪಂತಿ ಸಿನಿಮಾ ಮೂಲಕ ಟೈಗರ್​ ಶ್ರಾಫ್​ ಅವರನ್ನು ಲಾಂಚ್​ ಮಾಡಿದ್ದರು. ಈಗ ಈ ಸರಣಿಯಲ್ಲಿ ಎರನೇ ಸಿನಿಮಾ ಮೂಡಿ ಬರುತ್ತಿದೆ. ಈಗ ಈ ಸಿನಿಮಾಗೆ ಹಾಲಿವುಡ್ ಸ್ಟಂಟ್​ ಡೈರೆಕ್ಟರ್​ ಜತೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಪ್ರಮುಖ ಆ್ಯಕ್ಷನ್​ ಹಾಗೂ ಹಾಡನ್ನು ಮಾಸ್ಕೋವ್​ ಹಾಗೂ ಪೀಟರ್ಸ್​ಬರ್ಗ್​ನಲ್ಲಿ ಶೂಟ್​ ಮಾಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೆಳಿವೆ.

ಇತ್ತೀಚೆಗೆ ಟೈಗರ್​ ಶ್ರಾಫ್​ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು. ಲಾಕ್​ಡೌನ್ ವೇಳೆ ನಟಿ ದಿಶಾ ಪಟಾನಿ ಮತ್ತು ಟೈಗರ್​ ಶ್ರಾಫ್ ಅನವಶ್ಯಕವಾಗಿ ತಿರುಗಾಡುತ್ತಿರುವುದು ಗಮನಕ್ಕೆ ಬಂದಿತ್ತು. ಹೀಗಾಗಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದರು.

ಇದನ್ನೂ ಓದಿ: ಲಾಕ್​ಡೌನ್​ ಮಧ್ಯೆಯೂ ಟೈಗರ್-ದಿಶಾ ರೊಮ್ಯಾಂಟಿಕ್​ ರೈಡ್​; ಇವರನ್ನು ತಡೆದ ಪೊಲೀಸರು, ಮುಂದೇನಾಯ್ತು?

ಟೈಗರ್​ ಶ್ರಾಫ್​ ಸಿನಿಮಾಗೆ ಜೇಮ್ಸ್​ ಬಾಂಡ್​ ಸ್ಟಂಟ್​ ಡೈರೆಕ್ಟರ್​; ರಷ್ಯಾದಲ್ಲಿ ನಡೆಯಲಿದೆ ಶೂಟ್​

Follow us on

Related Stories

Most Read Stories

Click on your DTH Provider to Add TV9 Kannada