ರಾಜ್ ಕುಂದ್ರಾ ನಡೆಸುತ್ತಿದ್ದ ದಂಧೆ ಬಗ್ಗೆ ಶಿಲ್ಪಾ ಶೆಟ್ಟಿಗೆ ಇತ್ತು ಮಾಹಿತಿ? ಪೊಲೀಸರಿಂದ ವಿಚಾರಣೆ
ನೀಲಿ ಸಿನಿಮಾಗಳನ್ನು ಮಾಡಿ ಅದನ್ನು ಬೇರೆಬೇರೆ ಆ್ಯಪ್ಗಳಲ್ಲಿ ಅಪ್ಲೋಡ್ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ರಾಜ್ ಕುಂದ್ರಾ ಅವರನ್ನು ಬಂಧಿಸಿದ್ದರು. ಈಗ ಅವರನ್ನು ಜುಲೈ 27ವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಅಶ್ಲೀಲ ಸಿನಿಮಾ ಚಿತ್ರೀಕರಣ ಪ್ರಕರಣದಲ್ಲಿ ಮುಂಬೈ ಪೊಲೀಸ್ ಅಪರಾಧ ವಿಭಾಗವು ಶಿಲ್ಪಾ ಶೆಟ್ಟಿ, ಉದ್ಯಮಿ ರಾಜ್ ಕುಂದ್ರಾ (Raj Kundra) ಅವರನ್ನು ಬಂಧಿಸಿ ನಾಲ್ಕು ದಿನ ಕಳೆದಿದೆ. ಈಗ ಮುಂಬೈನ ಜುಹುದಲ್ಲಿರುವ ಶಿಲ್ಪಾ ಶೆಟ್ಟಿ (Shilpa Shetty) ಮನೆ ಮೇಲೆ ಕ್ರೈಮ್ ಬ್ರ್ಯಾಂಚ್ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಜತೆಗೆ ಅವರ ನಿವಾಸದಲ್ಲೇ ವಿಚಾರಣೆ ಆರಂಭಿಸಿದ್ದಾರೆ.
ನೀಲಿ ಸಿನಿಮಾಗಳನ್ನು ಮಾಡಿ ಅದನ್ನು ಬೇರೆಬೇರೆ ಆ್ಯಪ್ಗಳಲ್ಲಿ ಅಪ್ಲೋಡ್ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ರಾಜ್ ಕುಂದ್ರಾ ಅವರನ್ನು ಬಂಧಿಸಿದ್ದರು. ಈಗ ಅವರನ್ನು ಜುಲೈ 27ವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಅಪರಾಧ ವಿಭಾಗದ ಒಂದು ತಂಡ ಜುಹುದಲ್ಲಿರುವ ರಾಜ್ ಕುಂದ್ರಾ ಅವರ ಒಡೆತನದ ಬಂಗಲೆ ಮೇಲೆ ದಾಳಿ ನಡೆಸಿದೆ. ಪರಿಶೀಲನೆ ನಂತರದಲ್ಲಿ ಶಿಲ್ಪಾ ಶೆಟ್ಟಿ ವಿಚಾರಣೆ ನಡೆದಿದೆ. ಈ ದಾಳಿ ತನಿಖೆ ದೃಷ್ಟಿಯಲ್ಲಿ ಬಹಳ ಮಹತ್ವ ಪಡೆದುಕೊಂಡಿದೆ.
ಪತಿ ರಾಜ್ ಕುಂದ್ರಾ ನಡೆಸುತ್ತಿದ್ದ ದಂಧೆ ಬಗ್ಗೆ ಮೊದಲೆ ಮಾಹಿತಿ ಇತ್ತೇ? ಅವರ ಉದ್ಯಮದ ಬಗ್ಗೆ ನಿಮಗೆ ಏನೆಲ್ಲ ತಿಳಿದಿದೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಶಿಲ್ಪಾ ಶೆಟ್ಟಿಗೆ ಕೇಳಲಾಗಿದೆ. ಶಿಲ್ಪಾ ಶೆಟ್ಟಿಗೆ ಈ ಬಗ್ಗೆ ಮೊದಲೇ ತಿಳಿದಿತ್ತೇ? ತಿಳಿದಿದ್ದರೆ ಅವರು ಸುಮ್ಮನಿದ್ದಿದ್ದು ಏಕೆ ಅನ್ನೋದು ಸದ್ಯದ ಕುತೂಹಲ. ಇನ್ನು, ಈ ಅಧಿಕಾರಿಗಳು ಶೀಘ್ರವೇ ಶಿಲ್ಪಾ ಶೆಟ್ಟಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ಮಾಡಲಿದ್ದಾರೆ ಎನ್ನಲಾಗಿದೆ.
ರಾಜ್ ಕುಂದ್ರಾ ತನಿಖೆಗೆ ಸೂಕ್ತ ಸಹಕಾರ ನೀಡಿಲ್ಲ ಎನ್ನಲಾಗಿದೆ. ಹೀಗಾಗಿ, ಪೊಲೀಸರಿಗೆ ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿದೆ. ಈ ಕಾರಣಕ್ಕೆ ಹೆಚ್ಚುವರಿಯಾಗಿ 7 ದಿನಗಳ ಕಾಲ ರಾಜ್ ಕುಂದ್ರಾ ವಶಕ್ಕೆ ನೀಡಬೇಕು ಎಂದು ನ್ಯಾಯಾಲಯದಲ್ಲಿ ಪೊಲೀಸರು ಅನುಮತಿ ಕೇಳಿದ್ದರು. ಅಂತಿಮವಾಗಿ ನ್ಯಾಯಾಲಯ ರಾಜ್ ಕುಂದ್ರಾ ಅವರನ್ನು ನಾಲ್ಕು ದಿನ ಮಾತ್ರ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲು ಅನುಮತಿ ನೀಡಿದೆ.
ರಾಜ್ ಕು0ದ್ರಾ ಅವರನ್ನು ವಶಕ್ಕೆ ಪಡೆದಿರೋದು ಅಕ್ರಮ ಎಂದು ಅವರ ಪರ ವಕೀಲರು ಹೇಳಿದ್ದಾರೆ. ‘ರಾಜ್ ಕುಂದ್ರಾ ಅವರ ಕಂಪನಿ ಅಡಿಯಲ್ಲಿ ಸಿದ್ಧವಾದವು ನೀಲಿಚಿತ್ರ ಎಂದು ಹೇಳೋಕೆ ಪುರಾವೆ ಇಲ್ಲ. ಹೀಗಿರುವಾಗ ಅವರ ಬಂಧನ ಮಾಡಿದ್ದು ಏಕೆ? ಇದು ಸರಿಯಲ್ಲ. ಇದನ್ನು ನಾವು ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡುತ್ತೇವೆ’ ಎಂದು ವಕೀಲರು ಹೇಳಿದ್ದಾರೆ.
ಇದನ್ನೂ ಓದಿ: Big Breaking: ಶಿಲ್ಪಾ ಶೆಟ್ಟಿ ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ; ರಾಜ್ ಕುಂದ್ರಾ ಪೋಲಿಸ್ ಕಸ್ಟಡಿ ಅವಧಿ ವಿಸ್ತರಣೆ
Published On - 7:21 pm, Fri, 23 July 21