AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿರೋ ಮನೆಗಳನ್ನು ಮಾರಾಟ ಮಾಡುತ್ತಿದ್ದಾರೆ ಪ್ರಿಯಾಂಕಾ ಚೋಪ್ರಾ; ಹರಿದು ಬರುತ್ತಿದೆ ದೊಡ್ಡ ಮೊತ್ತದ ಹಣ

ಪ್ರಿಯಾಂಕಾ ಬಾಲಿವುಡ್​ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಅವರು ಮುಂಬೈನಲ್ಲೇ ಸೆಟಲ್​ ಆಗಿದ್ದರು. ಈ ಸಂದರ್ಭದಲ್ಲಿ ಸಾಕಷ್ಟು ಮನೆಗಳನ್ನು ಪ್ರಿಯಾಂಕಾ ಹೊಂದಿದ್ದರು.

ಭಾರತದಲ್ಲಿರೋ ಮನೆಗಳನ್ನು ಮಾರಾಟ ಮಾಡುತ್ತಿದ್ದಾರೆ ಪ್ರಿಯಾಂಕಾ ಚೋಪ್ರಾ; ಹರಿದು ಬರುತ್ತಿದೆ ದೊಡ್ಡ ಮೊತ್ತದ ಹಣ
ಪ್ರಿಯಾಂಕಾ ಚೋಪ್ರಾ
TV9 Web
| Edited By: |

Updated on: Jul 23, 2021 | 4:23 PM

Share

ನಟಿ ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕದ ಪಾಪ್​ ಸಿಂಗರ್​ ನಿಕ್​ ಜೋನಸ್​ ಅವರನ್ನು ಮದುವೆ ಆಗಿ ಅಮೆರಿಕದಲ್ಲಿ ಸೆಟಲ್​ ಆಗಿದ್ದಾರೆ. ಅಷ್ಟೇ ಅಲ್ಲ, ಪ್ರಿಯಾಂಕಾ ಅಮೆರಿಕದಲ್ಲಿ ಹೋಟೆಲ್​ ಉದ್ಯಮ ಕೂಡ ಆರಂಭಿಸಿದ್ದಾರೆ. ಈ ಮಧ್ಯೆ ಪ್ರಿಯಾಂಕಾ ಅವರು ಭಾರತದಲ್ಲಿ ತಾವು ಹೊಂದಿರುವ ಮನೆಗಳನ್ನು ಮಾರಾಟ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.

ಪ್ರಿಯಾಂಕಾ ಬಾಲಿವುಡ್​ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಅವರು ಮುಂಬೈನಲ್ಲೇ ಸೆಟಲ್​ ಆಗಿದ್ದರು. ಈ ಸಂದರ್ಭದಲ್ಲಿ ಸಾಕಷ್ಟು ಮನೆಗಳನ್ನು ಪ್ರಿಯಾಂಕಾ ಹೊಂದಿದ್ದರು. ಈಗ ಅವರು ತಮ್ಮ ಒಡೆತನದ ಎರಡು ಮನೆ ಮಾರಾಟ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಮುಂಬೈನ ಪಶ್ಚಿಮ ಅಂಧೇರಿಯ ವರ್ಸೋವಾದಲ್ಲಿರುವ ಅಪಾರ್ಟ್​ಮೆಂಟ್​ನ ಎರಡು ಫ್ಲಾಟ್​ಗಳನ್ನು ಅವರು ಮಾರಿದ್ದಾರೆ.

ವರ್ಸೋವಾದಲ್ಲಿರುವ ಅಪಾರ್ಟ್​ಮೆಂಟ್​ನ ಏಳನೇ ಫ್ಲೋರ್​ನಲ್ಲಿರುವ 888 ಚದರ ಅಡಿ ಫ್ಲಾಟ್​ಅನ್ನು ಮೂರು ಕೋಟಿ ರೂಪಾಯಿಗೆ ಹಾಗೂ ಅದೇ ಫ್ಲೋರ್​ನಲ್ಲಿರುವ 1219 ಚದರ ಅಡಿ ಫ್ಲಾಟ್​ ಅನ್ನು 4 ಕೋಟಿ ರೂಪಾಯಿಗೆ ಮಾರಲಾಗಿದೆ. ಇದಕ್ಕೆ ಅವರು ಅನುಕ್ರಮವಾಗಿ 9 ಲಕ್ಷ ಹಾಗೂ 12 ಲಕ್ಷ ರೂಪಾಯಿ ಸ್ಟಾಂಪ್​ ಡ್ಯೂಟಿ ಕಟ್ಟಿದ್ದಾರೆ.

ಇನ್ನು, ಪಶ್ಚಿಮ ಅಂಧೇರಿಯ ಓಶಿವರಾದಲ್ಲಿರುವ ಕಟ್ಟಡವನ್ನು ಬಾಡಿಗೆಗೆ ನೀಡಿದ್ದಾರೆ. ಈ ಕಟ್ಟಡದಿಂದ ಅವರಿಗೆ ಪ್ರತಿ ತಿಂಗಳು 2.11 ಲಕ್ಷ ರೂಪಾಯಿ ಬಾಡಿಗೆ ಬರುತ್ತಿದೆ. ಈ ವರ್ಷದ ಆರಂಭದಲ್ಲಿ ಮುಂಬೈನ ಲೋಂಖಂಡ್​ವಾಲಾದ ಕಾಂಪ್ಲೆಕ್ಸ್​ನಲ್ಲಿರುವ ಮನೆಯನ್ನು 2 ಕೋಟಿ ರೂಪಾಯಿಗೆ ಪ್ರಿಯಾಂಕಾ ಮಾರಾಟ ಮಾಡಿದ್ದರು.

ಪ್ರಿಯಾಂಕಾ ಚೋಪ್ರಾ ಜುಲೈ 18ರಂದು 39ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದಂದು ಅವರ ಕುಟುಂಬದವರು, ಗೆಳೆಯರಿಂದ ಸಾಕಷ್ಟು ಗಿಫ್ಟ್​ ಸಿಕ್ಕಿದೆ. ಇದರಲ್ಲಿ ಅವರ ಪತಿ ನೀಡಿದ ವೈನ್​ ಬಾಟಲಿ ವಿಶೇಷವಾಗಿತ್ತು. ನಿಕ್​ 1982 ಶಟೊ ಮೂಟೌನ್​ ರೋಥ್‌ಚೈಲ್ಡ್ ವೈನ್​ ಬಾಟಲಿಯನ್ನು ಪ್ರಿಯಾಂಕಾಗೆ ನೀಡಿದ್ದರು. ಈ ಫೋಟೋವನ್ನು ಪ್ರಿಯಾಂಕಾ ಚೋಪ್ರಾ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಾಕಿ ಸಂಭ್ರಮಿಸಿದ್ದರು. 750 ಎಂಎಲ್​ ಬಾಟಲಿಯ ಈ ವೈನ್​ಗೆ 1,31,375 ರೂಪಾಯಿ ಎನ್ನಲಾಗಿದೆ.

ಇದನ್ನೂ ಓದಿ: 750 ಎಂಎಲ್​ ವೈನ್​ಗೆ 1.31 ಲಕ್ಷ ರೂಪಾಯಿ; ಪ್ರಿಯಾಂಕಾಗೆ ಪತಿಯಿಂದ ಸಿಕ್ಕ ಈ ವಿಶೇಷ ಗಿಫ್ಟ್​ ಏಕಿಷ್ಟು ದುಬಾರಿ?

‘ಪ್ರಿಯಾಂಕಾ ಚೋಪ್ರಾ ದಾಂಪತ್ಯ ಜೀವನ ಹತ್ತು ವರ್ಷಗಳಲ್ಲಿ ಕೊನೆಯಾಗಲಿದೆ’; ಭವಿಷ್ಯ ನುಡಿದ ವಿವಾದಿತ ನಟ

ಗಿಲ್ಲಿ ನನಗೆ ಹೊಡೆದಾಗ ಖುಷಿ ಆಗುತ್ತಿತ್ತು, ಎಂಜಾಯ್ ಮಾಡಿದೆ: ರಕ್ಷಿತಾ
ಗಿಲ್ಲಿ ನನಗೆ ಹೊಡೆದಾಗ ಖುಷಿ ಆಗುತ್ತಿತ್ತು, ಎಂಜಾಯ್ ಮಾಡಿದೆ: ರಕ್ಷಿತಾ
ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು
ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ
ಲಕ್ಕುಂಡಿ: ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ದೇವಸ್ಥಾನ ಪತ್ತೆ!
ಲಕ್ಕುಂಡಿ: ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ದೇವಸ್ಥಾನ ಪತ್ತೆ!
ಶ್ರೀಕೃಷ್ಣಮಠದಲ್ಲಿ ವಸ್ತ್ರಸಂಹಿತೆ ಜಾರಿ: ಇಲ್ಲಿದೆ ಭಕ್ತರಿಗೆ ಕೆಲ ಸೂಚನೆ
ಶ್ರೀಕೃಷ್ಣಮಠದಲ್ಲಿ ವಸ್ತ್ರಸಂಹಿತೆ ಜಾರಿ: ಇಲ್ಲಿದೆ ಭಕ್ತರಿಗೆ ಕೆಲ ಸೂಚನೆ