‘ಪ್ರಿಯಾಂಕಾ ಚೋಪ್ರಾ ದಾಂಪತ್ಯ ಜೀವನ ಹತ್ತು ವರ್ಷಗಳಲ್ಲಿ ಕೊನೆಯಾಗಲಿದೆ’; ಭವಿಷ್ಯ ನುಡಿದ ವಿವಾದಿತ ನಟ
ಸಲ್ಮಾನ್ ವಿರುದ್ಧ ಯಾವುದೇ ಹೇಳಿಕೆಯನ್ನು ನೀಡುವಂತಿಲ್ಲ ಎಂದು ಕೋರ್ಟ್ ಆದೇಶ ನೀಡಿದ ನಂತರದಲ್ಲಿ ಕಮಾಲ್ ತೆಪ್ಪಗಾಗಿದ್ದರು. ಇದಾದ ಬೆನ್ನಲ್ಲೇ ಪ್ರಿಯಾಂಕಾ ಬಗ್ಗೆ ಕಮಾಲ್ ಮಾತನಾಡೋಕೆ ಆರಂಭಿಸಿದ್ದಾರೆ.
ನಟಿ ಪ್ರಿಯಾಂಕಾ ಚೋಪ್ರಾ ಅಮೆರಿಕದ ಪಾಪ್ ಸಿಂಗರ್ ನಿಕ್ ಜೋನಸ್ ಅವರನ್ನು ವರಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಇದಕ್ಕೆ ಕಾರಣ, ಪ್ರಿಯಾಂಕಾಗಿಂತ ನಿಕ್ ವಯಸ್ಸಿನಲ್ಲಿ ತುಂಬಾನೇ ಸಣ್ಣವರು. ಇಬ್ಬರು ಸುಖ ಸಂಸಾರ ನಡೆಸುತ್ತಿದ್ದಾರೆ. ವಯಸ್ಸಿನ ಅಂತರ ಇವರ ದಾಂಪತ್ಯಕ್ಕೆ ಅಡ್ಡಿ ಮಾಡಿಲ್ಲ. ಆದರೆ ಮುಂದಿನ 10 ವರ್ಷಗಳಲ್ಲಿ ನಿಕ್ ಹಾಗೂ ಪ್ರಿಯಾಂಕಾ ದಾಂಪತ್ಯ ಜೀವನ ಮುರಿದು ಬೀಳಲಿದೆ ಎಂದು ವಿವಾದಿತ ನಟ ಕಮಾಲ್ ಆರ್. ಖಾನ್ ಭವಿಷ್ಯ ನುಡಿದಿದ್ದಾರೆ.
ಇತ್ತೀಚೆಗೆ ಸಲ್ಮಾನ್ ಖಾನ್ ಅವರ ಬೀಯಿಂಗ್ ಹ್ಯೂಮನ್ ಬ್ರ್ಯಾಂಡ್ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ಕಮಾಲ್ ಸುದ್ದಿಯಾಗಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಸಲ್ಲು ಕೋರ್ಟ್ ಮೆಟ್ಟಿಲನ್ನೂ ಏರಿದ್ದರು. ಸಲ್ಮಾನ್ ವಿರುದ್ಧ ಯಾವುದೇ ಹೇಳಿಕೆಯನ್ನು ನೀಡುವಂತಿಲ್ಲ ಎಂದು ಕೋರ್ಟ್ ಆದೇಶ ನೀಡಿದ ನಂತರದಲ್ಲಿ ಕಮಾಲ್ ತೆಪ್ಪಗಾಗಿದ್ದರು. ಇದಾದ ಬೆನ್ನಲ್ಲೇ ಪ್ರಿಯಾಂಕಾ ಬಗ್ಗೆ ಕಮಾಲ್ ಮಾತನಾಡೋಕೆ ಆರಂಭಿಸಿದ್ದಾರೆ.
‘ಮುಂದಿನ 10 ವರ್ಷಗಳಲ್ಲಿ ನಿಕ್ ಅವರು ಪ್ರಿಯಾಂಕಾ ಅವರಿಂದ ವಿಚ್ಛೇದನ ಪಡೆಯುತ್ತಾರೆ’ ಎಂದು ಕಮಾಲ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದು ಪಿಂಕಿ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಕಮಾಲ್ಗೆ ಫ್ಯಾನ್ಸ್ ಛೀಮಾರಿ ಹಾಕೋಕೆ ಆರಂಭಿಸಿದ್ದಾರೆ.
‘ಕಮಾಲ್ ಅವರೇ ನಿಮಗೆ ಬೇರೆಯವರ ಬಗ್ಗೆ ಮಾತನಾಡುವ ಹಕ್ಕಿಲ್ಲ. ಜೋಕ್ ಮಾಡುವುದಕ್ಕೂ ಮೊದಲು ಮಿತಿ ತಿಳಿದಿರಲಿ’ ಎಂದು ಕೆಲವರು ಮಾತಿನಲ್ಲೇ ಛಾಟಿ ಬೀಸಿದ್ದಾರೆ. ಇತ್ತೀಚೆಗೆ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಮಕ್ಕಳ ಬಗ್ಗೆ ಕಮಾಲ್ ಟ್ವೀಟ್ ಮಾಡಿ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದ್ದರು. ‘ಸೈಫ್ ಹಾಗೂ ಕರೀನಾ ದಂಪತಿ ಮಕ್ಕಳಿಗೆ ಒಳ್ಳೆಯ ಹೆಸರನ್ನು ನೀಡಿಲ್ಲ. ಹೀಗಾಗಿ, ಅವರು ಜೀವನದಲ್ಲಿ ಯಶಸ್ಸು ಕಾಣುವುದಿಲ್ಲ’ ಎಂದು ಕಮಾಲ್ ಹೇಳಿದ್ದರು.
ಸಲ್ಮಾನ್ ನಟನೆ ‘ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಸಿನಿಮಾ ಬಗ್ಗೆ ಕಮಾಲ್ ಕೆಟ್ಟ ವಿಮರ್ಶೆ ನೀಡಿದ್ದರು. ಇದಕ್ಕಾಗಿಯೇ ಇವರ ವಿರುದ್ಧ ಸಲ್ಲು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು ಎನ್ನಲಾಗಿತ್ತು. ಆದರೆ, ಸಲ್ಮಾನ್ ಖಾನ್ ವಿರುದ್ಧ ವೈಯಕ್ತಿಯವಾಗಿ ಕಮಾಲ್ ಆರೋಪ ಮಾಡಿದ್ದರು ಎಂಬುದು ನಂತರದಲ್ಲಿ ತಿಳಿದು ಬಂದಿತ್ತು.
ಇದನ್ನೂ ಓದಿ: ಇನ್ಸ್ಟಾಗ್ರಾಮ್ ಒಂದು ಪೋಸ್ಟ್ಗೆ ವಿರಾಟ್ ಕೊಹ್ಲಿ, ಪ್ರಿಯಾಂಕಾ ಚೋಪ್ರಾ ಪಡೆಯೋ ಹಣ ಇಷ್ಟೊಂದಾ?
ಪ್ರಿಯಾಂಕಾ ಚೋಪ್ರಾರನ್ನು ನೆಟ್ಟಿಗರು ‘ಟ್ಯಾಕಿ’ ಎಂದು ಕರೆದು ಟ್ರಾಲ್ ಮಾಡಿದ್ದೇಕೆ?
Published On - 5:44 pm, Mon, 12 July 21