ಇನ್​ಸ್ಟಾಗ್ರಾಮ್​ ಒಂದು ಪೋಸ್ಟ್​ಗೆ ವಿರಾಟ್​ ಕೊಹ್ಲಿ, ಪ್ರಿಯಾಂಕಾ ಚೋಪ್ರಾ ಪಡೆಯೋ ಹಣ ಇಷ್ಟೊಂದಾ?

ಈ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ 27ನೇ ಸ್ಥಾನದಲ್ಲಿದ್ದಾರೆ. ಪ್ರತಿ ಪ್ರಮೋಷನಲ್​ ಪೋಸ್ಟ್​ಗೆ ಅವರು 3 ಕೋಟಿ ರೂಪಾಯಿ ಪಡೆದುಕೊಳ್ಳುತ್ತಿದ್ದಾರೆ.

ಇನ್​ಸ್ಟಾಗ್ರಾಮ್​ ಒಂದು ಪೋಸ್ಟ್​ಗೆ ವಿರಾಟ್​ ಕೊಹ್ಲಿ, ಪ್ರಿಯಾಂಕಾ ಚೋಪ್ರಾ ಪಡೆಯೋ ಹಣ ಇಷ್ಟೊಂದಾ?
ಪ್ರಿಯಾಂಕಾ ಚೋಪ್ರಾ- ವಿರಾಟ್​ ಕೊಹ್ಲಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jul 02, 2021 | 8:49 PM

ಸೆಲೆಬ್ರಿಟಿಗಳನ್ನು ಸಾಕಷ್ಟು ಬ್ರ್ಯಾಂಡ್​ಗಳು ತಮ್ಮ ರಾಯಭಾರಿಯನ್ನಾಗಿ ಮಾಡಿಕೊಳ್ಳುತ್ತವೆ. ಸೆಲೆಬ್ರಿಟಿಗಳು ಟಿವಿ ಜಾಹೀರಾತಿನಲ್ಲಿ ಬರೋದು ಮಾತ್ರವಲ್ಲ, ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಬ್ರ್ಯಾಂಡ್​ ಪ್ರಮೋಷನ್​ ಕೂಡ ಮಾಡುತ್ತಾರೆ. ಇದಕ್ಕಾಗಿ ಅವರು ದೊಡ್ಡ ಮೊತ್ತದ ಹಣ ಪಡೆಯುತ್ತಾರೆ. ಈಗ ಇನ್​ಸ್ಟಾಗ್ರಾಂ ಶ್ರೀಮಂತರ ಪಟ್ಟಿಯನ್ನು ‘ಹೋಪರ್’ ಸಂಸ್ಥೆ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದಿಂದ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ವಿರಾಟ್​ ಕೊಹ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಈ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ 27ನೇ ಸ್ಥಾನದಲ್ಲಿದ್ದಾರೆ. ಪ್ರತಿ ಪ್ರಮೋಷನಲ್​ ಪೋಸ್ಟ್​ಗೆ ಅವರು 3 ಕೋಟಿ ರೂಪಾಯಿ ಪಡೆದುಕೊಳ್ಳುತ್ತಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಪ್ರಿಯಾಂಕಾ ಬರೋಬ್ಬರಿ 6.4 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ. ಕಳೆದ ಬಾರಿ ಈ ಲಿಸ್ಟ್​ನಲ್ಲಿ ಪ್ರಿಯಾಂಕಾ 19 ಸ್ಥಾನದಲ್ಲಿದ್ದರು. ಆದರೆ, ಅವರು ಪ್ರತಿ ಪೋಸ್ಟ್​ಗೆ ತೆಗೆದುಕೊಳ್ಳುತ್ತಿದ್ದ ಸಂಭಾವನೆ 2 ಕೋಟಿ ರೂಪಾಯಿ ಮಾತ್ರ ಆಗಿತ್ತು. ಈಗ ಈ ಪಟ್ಟಿಯಲ್ಲಿ ಅವರ ಸ್ಥಾನ ಕುಸಿದರೂ ಸಂಭಾವನೆ ಹೆಚ್ಚಿದೆ.

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಈ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಇವರು 23ನೇ ಸ್ಥಾನದಲ್ಲಿದ್ದರು. 13.2 ಕೋಟಿ ಹಿಂಬಾಲಕರನ್ನು ಹೊಂದಿರುವ ಕೊಹ್ಲಿ ಪ್ರತಿ ಪೋಸ್ಟ್​ಗೆ 5 ಕೋಟಿ ರೂ ಚಾರ್ಜ್​ ಮಾಡುತ್ತಿದ್ದಾರೆ. ಅಂದಹಾಗೆ, 29.5 ಕೋಟಿ ಹಿಂಬಾಲಕರಿರುವ ಫುಟ್​ಬಾಲರ್​ ಕ್ರಿಸ್ಟಿಯಾನೋ ರೊನಾಲ್ಡೋ ಲಿಸ್ಟ್​ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಪ್ರತಿ ಪ್ರಮೋಷನಲ್​ ಪೋಸ್ಟ್​ಗೆ ಇವರು ಗಿಟ್ಟಿಸಿಕೊಳ್ಳುವ ಸಂಭಾವನೆ ಬರೋಬ್ಬರಿ 11 ಕೋಟಿ ರೂಪಾಯಿ.

ಪ್ರಿಯಾಂಕಾ ಹಾಗೂ ಕೊಹ್ಲಿ ಇಬ್ಬರ ಖ್ಯಾತಿ ಕೂಡ ಹೆಚ್ಚಿರುವುದರಿಂದ ಇನ್​ಸ್ಟಾಗ್ರಾಂ ಪ್ರಮೋಷನ್​ ಸಂಭಾವನೆ ಹೆಚ್ಚಿದೆ. ಅಮೆರಿಕದ ಪಾಪ್​ ಸಿಂಗರ್​ ನಿಕ್​ ಜೋನಸ್​ ಅವರನ್ನು ವರಿಸಿದ ನಂತರದಲ್ಲಿ ಪ್ರಿಯಾಂಕಾ ಅಮೆರಿಕದಲ್ಲಿ ಸೆಟಲ್​ ಆಗಿದ್ದಾರೆ. ಇತ್ತೀಚೆಗೆ ಅವರು ನ್ಯೂಯಾರ್ಕ್​ನಲ್ಲಿ ಹೋಟೆಲ್​ ಕೂಡ ಆರಂಭಿಸಿದ್ದರು. ಇನ್ನು, ವಿರಾಟ್​ ಕೊಹ್ಲಿ ಭಾರತ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ. ಅವರ ಖ್ಯಾತಿ ಹೆಚ್ಚಿರುವುದಕ್ಕೆ ಸಹಜವಾಗಿಯೇ ಸಂಭಾವನೆ ಹೆಚ್ಚಾಗಿದೆ.

ಇದನ್ನೂ ಓದಿ: ವಮಿಕಾ ನೋಡೋಕೆ ಹೇಗಿದ್ದಾಳೆ? ವಿರಾಟ್​ ಕೊಹ್ಲಿ ಸಹೋದರಿ ವಿವರಿಸಿದ್ದಿಷ್ಟು

ನ್ಯೂಯಾರ್ಕ್​ನಲ್ಲಿ ಪ್ರಿಯಾಂಕಾ ಚೋಪ್ರಾ ಆರಂಭಿಸಿದ ಐಷಾರಾಮಿ ರೆಸ್ಟೋರೆಂಟ್ ​ಹೇಗಿದೆ ನೋಡಿ

Published On - 7:57 pm, Fri, 2 July 21

ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ