AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Wimbledon 2021: ಮಿಶ್ರ ಡಬಲ್ಸ್​ನ ಮೊದಲ ಸುತ್ತು ಗೆದ್ದ ಸಾನಿಯಾ ಮಿರ್ಜಾ- ರೋಹನ್ ಬೋಪಣ್ಣ ಜೋಡಿ

Wimbledon 2021: ಮಹಿಳಾ ಡಬಲ್ಸ್‌ನಲ್ಲಿ ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದ ನಂತರ, ಸಾನಿಯಾ ಈಗ ಮಿಶ್ರ ಡಬಲ್ಸ್‌ನಲ್ಲೂ ಜಯ ಸಾಧಿಸಿದ್ದಾರೆ.

Wimbledon 2021: ಮಿಶ್ರ ಡಬಲ್ಸ್​ನ ಮೊದಲ ಸುತ್ತು ಗೆದ್ದ ಸಾನಿಯಾ ಮಿರ್ಜಾ- ರೋಹನ್ ಬೋಪಣ್ಣ ಜೋಡಿ
ಸಾನಿಯಾ ಮಿರ್ಜಾ- ರೋಹನ್ ಬೋಪಣ್ಣ ಜೋಡಿ
Follow us
ಪೃಥ್ವಿಶಂಕರ
|

Updated on: Jul 02, 2021 | 9:06 PM

ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ವಿಂಬಲ್ಡನ್ 2021 ರಲ್ಲಿ ಶುಭಾರಂಭ ಮಾಡಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದ ನಂತರ, ಸಾನಿಯಾ ಈಗ ಮಿಶ್ರ ಡಬಲ್ಸ್‌ನಲ್ಲೂ ಜಯ ಸಾಧಿಸಿದ್ದಾರೆ. ಭಾರತೀಯ ಪಾಲುದಾರ ಮತ್ತು ಡಬಲ್ಸ್ ದಂತಕಥೆ ರೋಹನ್ ಬೋಪಣ್ಣ ಅವರೊಂದಿಗೆ ಸಾನಿಯಾ ಈ ಬಾರಿ ಮಿಶ್ರ ಡಬಲ್ಸ್‌ನ ಮೊದಲ ಸುತ್ತನ್ನು ಗೆದ್ದಿದ್ದಾರೆ. ತಮಾಷೆಯೆಂದರೆ, ಈ ಭಾರತೀಯ ಜೋಡಿ ಮತ್ತೊಂದು ಭಾರತೀಯ ಜೋಡಿ ಅಂಕಿತಾ ರೈನಾ ಮತ್ತು ರಾಮ್‌ಕುಮಾರ್ ರಾಮನಾಥನ್ ಎದುರು ಸ್ಪರ್ಧಿಸಿದ್ದು, ಇದರಲ್ಲಿ ಸಾನಿಯಾ ಮತ್ತು ಬೋಪಣ್ಣ ತಮ್ಮ ಅನುಭವದ ಆಧಾರದ ಮೇಲೆ ಸುಲಭವಾಗಿ ಗೆದ್ದಿದ್ದಾರೆ.

ಜುಲೈ 2 ರ ಶುಕ್ರವಾರ ಪ್ರಾರಂಭವಾದ ಮಿಶ್ರ ಡಬಲ್ಸ್ ಪಂದ್ಯಗಳಲ್ಲಿ ಭಾರತದ ಎರಡೂ ಜೋಡಿಗಳು ಮುಖಾಮುಖಿಯಾಗಿದ್ದರು. ಈ ಚಾಂಪಿಯನ್‌ಶಿಪ್‌ನಲ್ಲಿ ಎರಡೂ ಜೋಡಿಗಳಿಗೆ ಯಾವುದೇ ಆದ್ಯತೆ ನೀಡಲಾಗಿಲ್ಲ. ಬೋಪಣ್ಣ ಮತ್ತು ಸಾನಿಯಾ ಪಂದ್ಯಕ್ಕೆ ಬಲವಾದ ಆರಂಭವನ್ನು ನೀಡಿದರು ಮತ್ತು ಮೊದಲ ಸೆಟ್‌ನಲ್ಲಿ ಅಂಕಿತಾ-ರಾಮನಾಥನ್ ಅವರನ್ನ ಚೇತರಿಸಿಕೊಳ್ಳಲು ಸಹ ಅವಕಾಶ ನೀಡಲಿಲ್ಲ. ಸಾನಿಯಾ ಮತ್ತು ಬೋಪಣ್ಣ ತಮ್ಮ ಎದುರಾಳಿಗಳಿಗೆ ಕೇವಲ ಎರಡು ಗೇಮ್​ಗಳಲ್ಲಿ ಗೆಲ್ಲಲು ಅವಕಾಶ ಮಾಡಿಕೊಟ್ಟರು ಮತ್ತು ಮೊದಲ ಸೆಟ್ ಅನ್ನು 6-2ರಿಂದ ಗೆದ್ದರು.

ಎರಡನೇ ಸೆಟ್‌ನಲ್ಲಿ ಕಠಿಣ ಸ್ಪರ್ಧೆ ಆದಾಗ್ಯೂ, ಎರಡನೇ ಸೆಟ್ ಕಠಿಣ ಸ್ಪರ್ಧೆಯಾಗಿತ್ತು. ಈ ಬಾರಿ ಅಂಕಿತಾ-ರಾಮನಾಥನ್ ಜೋಡಿ ತಮ್ಮ ಹೆಚ್ಚು ಅನುಭವಿ ಎದುರಾಳಿಗಳಿಗೆ ಕಠಿಣ ಸವಾಲನ್ನು ನೀಡಿತು. ಎರಡೂ ಜೋಡಿಗಳು 6-6 ಗೇಮ್​ಗಳನ್ನು ಗೆದ್ದವು, ನಂತರ ನಿರ್ಧಾರವನ್ನು ಟೈ-ಬ್ರೇಕರ್ ಆಗಿ ಸೆಳೆಯಲಾಯಿತು. 3ನೇ ಸೆಟ್​ನಲ್ಲಿ ಸಾನಿಯಾ-ಬೋಪಣ್ಣ ಟೈಬ್ರೇಕರ್ ಅನ್ನು 7-5ರಿಂದ ಗೆದ್ದು ಪಂದ್ಯವನ್ನು 6-2, 7-6 (7-5) ಸೆಟ್‌ಗಳಿಂದ ಎರಡನೇ ಸುತ್ತಿಗೆ ತಲುಪಿಸಿದರು. ಎರಡನೇ ಸುತ್ತಿನಲ್ಲಿ ಅವರು ಅಗ್ರ ಶ್ರೇಯಾಂಕಿತ ಫ್ರೆಂಚ್ ಜೋಡಿ ನಿಕೊಲೊ ಮಾಹುತ್ ಮತ್ತು ಕ್ರಿಸ್ಟಿನಾ ಮ್ಲೆಡೆನೋವಿಕ್ ಅವರನ್ನು ಎದುರಿಸಲಿದ್ದಾರೆ.

ಸಾನಿಯಾ ಮಿರ್ಜಾ ಮಾತ್ರ ಮಿಂಚುತ್ತಿದ್ದಾರೆ ಟೂರ್ನಿಯಲ್ಲಿ ತನ್ನ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಎರಡನೇ ಸುತ್ತಿಗೆ ತಲುಪಿದ ಏಕೈಕ ಭಾರತೀಯ ಆಟಗಾರ್ತಿ ಸಾನಿಯಾ. ಮಹಿಳಾ ಡಬಲ್ಸ್‌ನಲ್ಲಿ ಅಮೆರಿಕದ ಪಾಲುದಾರ ಬೆಥನಿ ಮ್ಯಾಟೆಕ್-ಸ್ಯಾಂಡ್ಸ್ ಅವರೊಂದಿಗೆ ಎರಡನೇ ಸುತ್ತಿಗೆ ಪ್ರವೇಶ ಪಡೆದರು. ಮಹಿಳಾ ಡಬಲ್ಸ್‌ನಲ್ಲಿ, ಅಂಕಿತಾ ರೈನಾ ಮೊದಲ ಸುತ್ತಿನಲ್ಲಿ ಸೋಲನ್ನು ಎದುರಿಸಬೇಕಾಯಿತು ಮತ್ತು ಮಿಶ್ರ ಡಬಲ್ಸ್‌ನ ಸೋಲಿನೊಂದಿಗೆ, ಅವರ ಪ್ರಯಾಣವು ಕೊನೆಗೊಂಡಿದೆ. ಮತ್ತೊಂದೆಡೆ ರೋಹನ್ ಬೋಪಣ್ಣ ಪುರುಷರ ಡಬಲ್ಸ್‌ನಲ್ಲಿ ಭಾರತದ ತಂಡದ ಆಟಗಾರ ದಿವಿಜ್ ಶರಣ್ ಎದುರು ಮೊದಲ ಸುತ್ತಿನಲ್ಲಿಯೇ ಸೋಲು ಕಂಡರು. ಆದಾಗ್ಯೂ, ಅವರ ಭರವಸೆಗಳು ಈಗ ಸಾನಿಯಾ ಅವರೊಂದಿಗೆ ಮಿಶ್ರ ಡಬಲ್ಸ್‌ನಲ್ಲಿ ಉಳಿದಿವೆ.

ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
ಹೀಗೂ ಉಂಟೆ... ಅಳತೆ ಮೀರಿದ ಬ್ಯಾಟ್ ಬಳಸಲು ರವೀಂದ್ರ ಜಡೇಜಾ ಸರ್ಕಸ್
ಹೀಗೂ ಉಂಟೆ... ಅಳತೆ ಮೀರಿದ ಬ್ಯಾಟ್ ಬಳಸಲು ರವೀಂದ್ರ ಜಡೇಜಾ ಸರ್ಕಸ್
Daily Devotional: ಮಂಗಳವಾರ ಹಾಗೂ ಶುಕ್ರವಾರ ಹಣವನ್ನು ಕೊಡಬಹುದಾ?
Daily Devotional: ಮಂಗಳವಾರ ಹಾಗೂ ಶುಕ್ರವಾರ ಹಣವನ್ನು ಕೊಡಬಹುದಾ?
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭಫಲ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭಫಲ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ