AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಮಿಕಾ ನೋಡೋಕೆ ಹೇಗಿದ್ದಾಳೆ? ವಿರಾಟ್​ ಕೊಹ್ಲಿ ಸಹೋದರಿ ವಿವರಿಸಿದ್ದಿಷ್ಟು

ದಂಪತಿ ಫೋಟೋ ಅಪ್​ಲೋಡ್​ ಮಾಡಬಹುದು ಎಂದು ಕಾದು ಕೂತಿದ್ದ ಅಭಿಮಾನಿಗಳಿಗೆ ನಿರಾಸೆ ಕಾದಿತ್ತು. ಸದ್ಯಕ್ಕಂತೂ ಮಗುವಿನ ಮುಖವನ್ನು ತೋರಿಸುವ ಆಲೋಚನೆ ನಮಗಿಲ್ಲ ಎಂದು ದಂಪತಿ ವಿವರಿಸಿದ್ದರು.

ವಮಿಕಾ ನೋಡೋಕೆ ಹೇಗಿದ್ದಾಳೆ? ವಿರಾಟ್​ ಕೊಹ್ಲಿ ಸಹೋದರಿ ವಿವರಿಸಿದ್ದಿಷ್ಟು
ಪತ್ನಿ ಅನುಷ್ಕಾ ಮತ್ತು ಮಗಳೊಂದಿಗೆ ವಿರಾಟ್​ ಕೊಹ್ಲಿ
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​|

Updated on: Jun 21, 2021 | 7:20 AM

Share

ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಜನವರಿ 11ರಂದು ಹೆಣ್ಣು ಮಗುವನ್ನು ಬರಮಾಡಿಕೊಂಡರು. ಮಗುವಿನ ಮುಖವನ್ನು ಯಾರಿಗೂ ತೋರಿಸಬಾರದು ಎನ್ನುವ ನಿರ್ಧಾರಕ್ಕೆ ದಂಪತಿ ಬಂದಿದ್ದಾರೆ. ಹೀಗಾಗಿ, ಮಗುವಿನ ಮುಖವನ್ನು ಯಾರಿಗೂ ತೋರಿಸಿಲ್ಲ. ಹೀಗಿರುವಾಗಲೇ ವಮಿಕಾ ಹೇಗಿದ್ದಾಳೆ ಎನ್ನುವುದನ್ನು ವಿರಾಟ್​ ಸಹೋದರಿ ಭಾವನಾ ವಿವರಿಸಿದ್ದಾರೆ.

ವಮಿಕಾನ್ನು ಕಣ್ತುಂಬಿಕೊಳ್ಳಬೇಕು ಎಂಬುದು ಅನುಷ್ಕಾ ಶರ್ಮಾ ಮತ್ತು ವಿರಾಟ್​ ಕೊಯ್ಲಿ ಅಭಿಮಾನಿಗಳ ಆಸೆ ಆಗಿತ್ತು. ಈ ದಂಪತಿ ಫೋಟೋ ಅಪ್​ಲೋಡ್​ ಮಾಡಬಹುದು ಎಂದು ಕಾದು ಕೂತಿದ್ದ ಅಭಿಮಾನಿಗಳಿಗೆ ನಿರಾಸೆ ಕಾದಿತ್ತು. ಸದ್ಯಕ್ಕಂತೂ ಮಗುವಿನ ಮುಖವನ್ನು ತೋರಿಸುವ ಆಲೋಚನೆ ನಮಗಿಲ್ಲ ಎಂದು ದಂಪತಿ ವಿವರಿಸಿದ್ದರು. ಹಾಗಂತ ಅಭಿಮಾನಿಗಳು ಸುಮ್ಮನೆ ಕೂತಿಲ್ಲ. ವಿರಾಟ್​ ಕುಟುಂಬದವರಲ್ಲಿ ವಮಿಕಾ ಬಗ್ಗೆ ಪ್ರಶ್ನಿಸುತ್ತಿದ್ದಾರೆ.

ಇತ್ತೀಚೆಗೆ ಆಸ್ಕ್​ ಮಿ ಎನಿಥಿಂಗ್​ ಸೆಷನ್​ ಆರಂಭಿಸಿದ್ದರು ಭಾವನಾ. ಆಗ ಅಭಿಮಾನಿಯೋರ್ವ, ‘ನೀವು ವಮಿಕಾನಾ ಭೇಟಿ ಮಾಡಿದ್ದೀರಾ? ಅವಳು ಕೊಹ್ಲಿ ಹಾಗಿದ್ದಾಳೋ ಅಥವಾ ಅನುಷ್ಕಾ ತರಹ ಕಾಣುತ್ತಾಳೋ’ ಎಂದು ಪ್ರಶ್ನೆ ಮಾಡಿದ್ದ. ಈ ಪ್ರಶ್ನೆ ಓದಿರುವ ಭಾವನಾ ಜಾಣತನದ ಉತ್ತರ ನೀಡಿದ್ದಾರೆ.  ‘ನಾನು ವಮಿಕಾಳನ್ನು ಭೇಟಿ ಮಾಡಿದ್ದೇನೆ. ಆಕೆ ಏಂಜಲ್​ ತರಹ ಇದ್ದಾಳೆ’ ಎಂದಿದ್ದಾರೆ. ಈ ಉತ್ತರ ನೋಡಿದ ಅಭಿಮಾನಿಗಳಿಗೆ ಮತ್ತೆ ನಿರಾಸೆ ಆಗಿದೆ.

ಈ ಬಗ್ಗೆ ಪ್ರಶ್ನೆ ಹೆಚ್ಚಿದ ಬೆನ್ನಲ್ಲೇ ಭಾವನಾ ವಿಶೇಷ ಮನವಿಯನ್ನು ಮಾಡಿಕೊಂಡಿದ್ದಾರೆ. ವಿರಾಟ್​-ಅನುಷ್ಕಾ ಮಗಳ ಮುಖವನ್ನು ತೋರಿಸುವುದಿಲ್ಲ ಎಂದು ಹೇಳಿದ್ದಾರೆ. ಯಾವುದಾದರೂ ಮಾಧ್ಯಮಗಳು ವಮಿಕಾ ಫೋಟೋ ಇದು ಎಂದು ವರದಿ ಬಿತ್ತರಿಸಿದರೆ ಅದನ್ನು ನಂಬಬೇಡಿ. ನಾವು ಅನುಷ್ಕಾ-ವಿರಾಟ್​ ನಿರ್ಧಾರವನ್ನು ಗೌರವಿಸೋಣ ಎಂದಿದ್ದಾರೆ.

ವರ್ಲ್ಡ್​​ ಟೆಸ್ಟ್​ ಚಾಂಪಿಯನ್​ಶಿಪ್​ಗಾಗಿ ಅನುಷ್ಕಾ-ವಿರಾಟ್​ ಇಂಗ್ಲೆಂಡ್​ಗೆ ಹೊರಟಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳು ಮಗುವಿನ ಫೋಟೋ ಕ್ಲಿಕ್​ ಮಾಡಲು ಪ್ರಯತ್ನಿಸಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ: ‘ಆ ಮಗುವಿಗೆ ಉಸಿರು ಕಟ್ಟುತ್ತಿದೆ’; ಅನುಷ್ಕಾ-ವಿರಾಟ್​ ಪುತ್ರಿ ವಮಿಕಾ ವಿಚಾರದಲ್ಲಿ ನೆಟ್ಟಿಗರ ಆಕ್ರೋಶ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!