Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಾದರ್ಸ್​ ಡೇ ದಿನವೇ ಮಗನಿಗೆ 3 ಕೋಟಿ ರೂಪಾಯಿ ಕಾರು ಉಡುಗೊರೆ ನೀಡಿದ ಸೋನು ಸೂದ್​?

ಸೋನು ಸೂದ್​ ಹಿರಿಯ ಮಗ ಇಶಾನ್​ಗೆ 3 ಕೋಟಿ ರೂಪಾಯಿ ಕಾರ್​ ಗಿಫ್ಟ್​ ನೀಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಈ ವಿಚಾರದ ಬಗ್ಗೆ ಸೋನು ಸೂದ್​ ಪ್ರತಿಕ್ರಿಯಿಸಿದ್ದಾರೆ.

ಫಾದರ್ಸ್​ ಡೇ ದಿನವೇ ಮಗನಿಗೆ 3 ಕೋಟಿ ರೂಪಾಯಿ ಕಾರು ಉಡುಗೊರೆ ನೀಡಿದ ಸೋನು ಸೂದ್​?
ಸೋನು ಸೂದ್​
Follow us
ರಾಜೇಶ್ ದುಗ್ಗುಮನೆ
|

Updated on: Jun 20, 2021 | 8:18 PM

ನಟ ಸೋನು ಸೂದ್​ ತಾವು ದುಡಿದ ಹಣವನ್ನು ಒಳ್ಳೆಯ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೊವಿಡ್​ ಸಂಕಷ್ಟದ ಸಂದರ್ಭದಲ್ಲಿ ಅವರು ಎಲ್ಲರ ಸಹಾಯಕ್ಕೆ ನಿಂತಿದ್ದಾರೆ. ಟ್ವೀಟ್​ ಮಾಡಿದ ಕೆಲವೇ ಹೊತ್ತಿನಲ್ಲಿ ಜನಸಾಮಾನ್ಯರಿಗೆ ಸಹಾಯ ಸಿಗುತ್ತಿದೆ. ಈಗ ಸೋನು ಸೂದ್​ ಹಿರಿಯ ಮಗ ಇಶಾನ್​ಗೆ 3 ಕೋಟಿ ರೂಪಾಯಿ ಕಾರ್​ ಗಿಫ್ಟ್​ ನೀಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಈ ವಿಚಾರದ ಬಗ್ಗೆ ಸೋನು ಸೂದ್​ ಪ್ರತಿಕ್ರಿಯಿಸಿದ್ದಾರೆ.

ಇಂದು ವಿಶ್ವ ತಂದೆಯರ ದಿನ. ಈ ದಿನದಂದೇ ಸೋನು ಲಕ್ಸುರಿ ಕಾರನ್ನು ಮಗನಿಗೆ ನೀಡಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಸಾಕ್ಷ್ಯ ಎಂಬಂತೆ, ಶನಿವಾರ ಐಷಾರಾಮಿ ಕಾರು ಸೋನು ಸೂದ್​ ಮನೆ ಎದುರು ನಿಂತಿತ್ತು. ಇದನ್ನು ನೋಡಿದ ಸಾಕಷ್ಟು ಜನರು ‘ಸೋನು ಮಗನಿಗೆ ಕಾರ್​ ಉಡುಗೊರೆ ನೀಡಿದ್ದಾರೆ’ ಎಂದು ಹೇಳಿಕೊಂಡಿದ್ದರು. ಆದರೆ, ಇದರ ಅಸಲಿಯತ್ತನ್ನು ಸೋನು ತೆರೆದಿಟ್ಟಿದ್ದಾರೆ.

‘ಮಗನಿಗೆ ಕಾರು ನೀಡಿದ ವಿಚಾರದಲ್ಲಿ ಯಾವುದೇ ಸತ್ಯವಿಲ್ಲ. ನಾನು ನನ್ನ ಮಗನಿಗಾಗಿ ಕಾರು ಖರೀದಿ ಮಾಡಿಲ್ಲ. ಟ್ರಯಲ್​ಗೋಸ್ಕರ ಆ ಕಾರನ್ನು ನಮ್ಮ ಮನೆಗೆ ತರಲಾಗಿತ್ತು. ನಾವು ಟೆಸ್ಟ್​ ರೈಡ್​ ಮಾಡಿದ್ದೇವೆ ಅಷ್ಟೆ. ನಾವು ಆ ಕಾರನ್ನು ಖರೀದಿ ಮಾಡಿಲ್ಲ’ ಎಂದು ಸೋನು ಸ್ಪಷ್ಟನೆ ನೀಡಿದ್ದಾರೆ.

‘ಫಾದರ್ಸ್​ ಡೇ ದಿನ ನನ್ನ ಮಕ್ಕಳಿಗೆ ನಾನೇಕೆ ಉಡುಗೊರೆ ನೀಡಲಿ? ನನ್ನ ಮಕ್ಕಳೇ ನನಗೆ ಗಿಫ್ಟ್ ನೀಡಬೇಕು ಅಲ್ಲವೇ? ನಾನು ನನ್ನ ಮಕ್ಕಳ ಜತೆ ಸಮಯ ಕಳೆಯುತ್ತಿದ್ದೇನೆ. ಅದುವೇ ಖುಷಿಯ ವಿಚಾರ’ ಎಂದು ಸೋನು ಸೂದ್​ ಬರೆದುಕೊಂಡಿದ್ದಾರೆ. ಈ ಮೂಲಕ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಬ್ರೇಕ್​ ಹಾಕಿದ್ದಾರೆ.

ಇನ್ನು, ವಿಶ್ವ ಅಪ್ಪಂದಿರ ದಿನದ ಅಂಗವಾಗಿ ಸೋನು ತಂದೆಯನ್ನು ನೆನಪು ಮಾಡಿಕೊಂಡಿದ್ದಾರೆ. ‘ಅಪ್ಪ ನೀವು ನಮ್ಮೊಂದಿಗಿಲ್ಲ. ಆದರೆ, ನಿಮ್ಮ ಫೇವರಿಟ್​ ಸ್ಕೂಟರ್ ನನಗೆ ಅತಿ ಹೆಚ್ಚು ಬೆಲೆಬಾಳುವ ವಸ್ತು’ ಎಂದಿದ್ದಾರೆ.

ಇದನ್ನೂ ಓದಿ: ರಾಜಕೀಯಕ್ಕೆ ಬರಲ್ಲ ಎನ್ನುವ ಸೋನು ಸೂದ್​ಗೆ ಈ ರಾಜಕಾರಣಿ ಕಂಡರೆ ಹೆಚ್ಚು ಅಭಿಮಾನ; ಯಾರದು?

IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಬ್ಯಾಂಕಾಕ್‌ನ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಮೋದಿ- ನೇಪಾಳದ ಪ್ರಧಾನಿ ಭೇಟಿ
ಬ್ಯಾಂಕಾಕ್‌ನ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಮೋದಿ- ನೇಪಾಳದ ಪ್ರಧಾನಿ ಭೇಟಿ
ವಿನಯ್​ರೊಂದಿಗೆ ನಾನು ಒಮ್ಮೆಯೂ ಮಾತಾಡಿಲ್ಲ, ಕಿರುಕುಳ ಎಲ್ಲಿಂದ ಬಂತು?: ಶಾಸಕ
ವಿನಯ್​ರೊಂದಿಗೆ ನಾನು ಒಮ್ಮೆಯೂ ಮಾತಾಡಿಲ್ಲ, ಕಿರುಕುಳ ಎಲ್ಲಿಂದ ಬಂತು?: ಶಾಸಕ