ಸಂಚಾರಿ ವಿಜಯ್​ಗೆ ಮತ್ತೊಂದು ಮುಖ ಇತ್ತು, ಅದನ್ನು ನಾನು ಕಂಡಿದ್ದೇನೆ; ನೀನಾಸಂ ಸತೀಶ್​

ಜೂನ್​ 20 ಸತೀಶ್​ ಜನ್ಮದಿನ. ಪ್ರತಿ ವರ್ಷ ಅವರು ಅಭಿಮಾನಿಗಳ ಜತೆ ಸೇರಿ ಕೇಕ್​ ಕತ್ತರಿಸುತ್ತಿದ್ದರು. ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದರು. ಆದರೆ, ಸಂಚಾರಿ ವಿಜಯ್​ ಮೃತಪಟ್ಟ ನೋವನ್ನು ಸತೀಶ್​ಗೆ ಮರೆಯೋಕೆ ಸಾಧ್ಯವಾಗುತ್ತಿಲ್ಲ.

ಸಂಚಾರಿ ವಿಜಯ್​ಗೆ ಮತ್ತೊಂದು ಮುಖ ಇತ್ತು, ಅದನ್ನು ನಾನು ಕಂಡಿದ್ದೇನೆ; ನೀನಾಸಂ ಸತೀಶ್​
ಸತೀಶ್​
Follow us
ರಾಜೇಶ್ ದುಗ್ಗುಮನೆ
|

Updated on: Jun 20, 2021 | 6:51 PM

ಇಂದು ನೀನಾಸಂ ಸತೀಶ್​ ಜನ್ಮದಿನ. ಆದರೆ, ಈ ವಿಶೇಷ ದಿನವನ್ನು ಅವರು ಆಚರಿಸಿಕೊಂಡಿಲ್ಲ. ಸತೀಶ್​ ಗೆಳೆಯ ಸಂಚಾರಿ ವಿಜಯ್​ ನಿಧನ ಹಿನ್ನೆಲೆಯಲ್ಲಿ ಅವರು ಬರ್ತ್​ಡೇ ಆಚರಣೆ ಮಾಡಿಕೊಂಡಿಲ್ಲ. ಈಗ ಅವರು ವಿಜಯ್​ ಜತೆಗಿನ ಒಡನಾಟದ ಬಗ್ಗೆ ಹೇಳಿಕೊಂಡಿದ್ದಾರೆ.

‘ಆರಂಭದಲ್ಲಿ ನನ್ನ ಮತ್ತು ವಿಜಿ ನಡುವೆ ಅಷ್ಟು ಆತ್ಮೀಯತೆ ಇರಲಿಲ್ಲ. ನಾವು ಅನೇಕ ಸಂದರ್ಭದಲ್ಲಿ ಒಟ್ಟಿಗೆ ಇದ್ದೆವು. ಅವರ ನಟನೆಯ ನಾತಿಚರಾಮಿ ತುಂಬಾ ಇಷ್ಟ ಆಗಿತ್ತು. ಅವನಿಗೂ ನನಗೂ ಲೈಫ್ ಇನ್ಸಿಡೆಂಟ್​ಗೂ ಸಾಮ್ಯತೆ ಇತ್ತು. ವಿಜಿ ತುಂಬಾ ನೋವು, ಸೋಲುಗಳನ್ನು ಅನುಭವಿಸಿದ್ದ. ನನಗೆ ಸೋಲುಗಳನ್ನು ಅನುಭವಿಸಿದ ಕಥೆ ಹೇಳಿದ್ದ. ಇತ್ತೀಚೆಗೆ ಎಲ್ಲವೂ ಸರಿ ಹೋಗಿ ಜೀವನದಲ್ಲಿ ಗೆಲುವಿನ ದಿನಗಳನ್ನ ಕಂಡಿದ್ದ. ಈಗ ಸರಿ ಹೋಗ್ತಿದ್ದ ಕಾಲದಲ್ಲಿ ಅವನೇ ಇಲ್ಲವಾದ’ ಎಂದು ಸತೀಶ್ ಬೇಸರ ಹೊರ ಹಾಕಿದ್ದಾರೆ.

‘ವಿಜಿ ಜೊತೆಗಿನ ಒಡನಾಟ ಒಂದು ಕಮರ್ಷಿಯಲ್ ಸಿನಿಮಾ ರೀತಿ ಆಗೋಯ್ತು. ಆಸ್ಪತ್ರೆಯಲ್ಲಿ ವಿಜಿ ಮಲಗಿದ್ದಾನೆ. ಇಲ್ಲಿ ಮನೆಯಲ್ಲಿ ಆರ್ಡರ್ ಮಾಡಿರೋ ಹೊಸ ಬೆಡ್ ಬಂದಿತ್ತು. ನಮ್ ಆಫೀಸಲ್ಲಿರೋ ರೂಂಗೆ ಬಂದ್ರೆ ಮೂರು ದಿನ ಉಳಿಯುತ್ತಿದ್ದ. ವಿಜಯ್​ಗೆ ಮತ್ತೊಂದು ಮುಖ ಇದೆ. ಅವನು ತುಂಬಾನೇ ನೋವು ಪಟ್ಟಿದ್ದಾನೆ. ಅದನ್ನು ನಾನು ನೋಡಿದ್ದೇನೆ’ ಎಂದು ಸತೀಶ್​ ವಿವರಿಸಿದ್ದಾರೆ.

ಜೂನ್​ 20 ಸತೀಶ್​ ಜನ್ಮದಿನ. ಪ್ರತಿ ವರ್ಷ ಅವರು ಅಭಿಮಾನಿಗಳ ಜತೆ ಸೇರಿ ಕೇಕ್​ ಕತ್ತರಿಸುತ್ತಿದ್ದರು. ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದರು. ಆದರೆ, ಸಂಚಾರಿ ವಿಜಯ್​ ಮೃತಪಟ್ಟ ನೋವನ್ನು ಸತೀಶ್​ಗೆ ಮರೆಯೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಜನ್ಮದಿನ ಆಚರಿಸಿಕೊಳ್ಳುತ್ತಿಲ್ಲ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು.

ಇತ್ತೀಚೆಗೆ ಸಂಚಾರಿ ವಿಜಯ್​ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈದ್ಯರ ಸತತ ಪ್ರಯತ್ನಗಳ ನಡುವೆಯೂ ವಿಧಿಯಾಟವೇ ಮೇಲುಗೈ ಸಾಧಿಸಿತು. ಸಂಚಾರಿ ವಿಜಯ್​ ಮೃತಪಟ್ಟ ಬಗ್ಗೆ ಜೂನ್​ 15ರಂದು ವೈದ್ಯರು ಘೋಷಣೆ ಮಾಡಿದರು. ನಂತರ ಅವರ ಕಳೇಬರವನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಗೆ ಕೊಂಡೊಯ್ಯಲಾಯಿತು. ಮೂರು ಸುತ್ತು ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಶೈವ ಲಿಂಗಾಯತ ವಿಧಿವಿಧಾನಗಳೊಂದಿಗೆ ಗೆಳೆಯನ ತೋಟದಲ್ಲಿ ವಿಜಯ್​ ಅಂತ್ಯಸಂಸ್ಕಾರ ನೆರವೇರಿತು.

ಇದನ್ನೂ ಓದಿ: ಗೆಳೆಯ ಸಂಚಾರಿ ವಿಜಯ್​ ಅಗಲಿಕೆ ನೋವಲ್ಲೇ ಮಹತ್ವದ ನಿರ್ಧಾರ ತೆಗೆದುಕೊಂಡ ನೀನಾಸಂ ಸತೀಶ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ