AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಕ್ಸಿಕ್ ಅಲರ್ಟ್​: ಮೊದಲ ಹಾಡಿನಲ್ಲಿ ಯಶ್, ಕಿಯಾರಾ ಅಡ್ವಾನಿ ರೊಮ್ಯಾನ್ಸ್

ಟಾಕ್ಸಿಕ್ ಸಿನಿಮಾದ ಬಿಡುಗಡೆಗೆ ಕೆಲವೇ ದಿನಗಳ ಬಾಕಿ ಇವೆ. ಭರ್ಜರಿಯಾಗಿ ಪ್ರಚಾರ ಮಾಡಲಾಗುತ್ತಿದೆ. ಯಶ್, ಕಿಯಾರಾ ಅಡ್ವಾಣಿ ಅವರು ಕಾಣಿಸಿಕೊಂಡ ಹಾಡನ್ನು ರಿಲೀಸ್ ಮಾಡಲು ದಿನಾಂಕ ನಿಗದಿ ಆಗಿದೆ. ಮಾರ್ಚ್ 2ರಂದು ‘ತಬಾಹಿ’ ಸಾಂಗ್ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.

ಟಾಕ್ಸಿಕ್ ಅಲರ್ಟ್​: ಮೊದಲ ಹಾಡಿನಲ್ಲಿ ಯಶ್, ಕಿಯಾರಾ ಅಡ್ವಾನಿ ರೊಮ್ಯಾನ್ಸ್
ಯಶ್-ಕಿಯಾರಾ
ಮದನ್​ ಕುಮಾರ್​
|

Updated on: Feb 27, 2026 | 9:36 PM

Share

ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದಿಂದ ಒಂದೊಂದು ಅಪ್​ಡೇಟ್ ಹೊರಬಂದಾಗಲೂ ಅಭಿಮಾನಿಗಳು ಥ್ರಿಲ್ ಆಗುತ್ತಿದ್ದಾರೆ. ಈಗಾಗಲೇ ಎರಡು ಟೀಸರ್​ಗಳು ಧೂಳೆಬ್ಬಿಸಿವೆ. ಈಗ ಮೊದಲ ಹಾಡು ಬಿಡುಗಡೆ ಮಾಡುವ ಸಮಯ ಹತ್ತಿರ ಆಗಿದೆ. ಈ ಬಗ್ಗೆ ಚಿತ್ರತಂಡದಿಂದ ಮಾಹಿತಿ ಹೊರಬಿದ್ದಿದೆ. ‘ಟಾಕ್ಸಿಕ್’ ಸಿನಿಮಾದ ಮೊದಲ ಸಾಂಗ್ ಮಾರ್ಚ್ 2ರಂದು ರಿಲೀಸ್ ಆಗಲಿದೆ. ಈ ಹಾಡಿನಲ್ಲಿ ಯಶ್ (Yash) ಮತ್ತು ಕಿಯಾರಾ ಅಡ್ವಾಣಿ ಅವರು ಕಾಣಿಸಿಕೊಂಡಿದ್ದಾರೆ. ಈ ಹಾಡು ಸಖತ್ ಹಾಟ್ ಮತ್ತು ರೊಮ್ಯಾಂಟಿಕ್ ಆಗಿರಲಿದೆ ಎಂಬುದನ್ನು ಪೋಸ್ಟರ್ ಮೂಲಕ ಸೂಚಿಸಲಾಗಿದೆ.

‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಪಾತ್ರಕ್ಕೆ ನೆಗೆಟಿವ್ ಶೇಡ್ ಕೂಡ ಇರಲಿದೆ ಎಂಬುದರ ಸುಳಿವು ಟೀಸರ್​ನಲ್ಲಿ ಕಾಣಿಸಿದೆ. ಆ ಕಾರಣದಿಂದ ಹಾಡುಗಳು ಹೇಗಿರಬಹುದು ಎಂಬ ನಿರೀಕ್ಷೆ ಎಲ್ಲರಿಗೂ ಇದೆ. ಪ್ರತಿ ಬಾರಿಯೂ ಅಭಿಮಾನಿಗಳಿಗೆ ಯಶ್ ಒಂದಲ್ಲಾ ಒಂದು ಸರ್ಪ್ರೈಸ್ ನೀಡುತ್ತಲೇ ಇದ್ದಾರೆ. ಈಗ ಮೊದಲ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಲು ಸಕಲ ಸಿದ್ಧತೆ ಆಗಿದೆ.

‘ತಬಾಹಿ’ ಎಂಬುದು ಈ ಹಾಡಿನ ಹೆಸರು. ಖ್ಯಾತ ಸಂಗೀತ ನಿರ್ದೇಶಕ ವಿಶಾಲ್ ಮಿರ್ಶಾ ಅವರು ಈ ಗೀತೆಗೆ ಸಂಗೀತ ನೀಡಿದ್ದಾರೆ. ಹಾಡಿನ ಪೋಸ್ಟರ್​ನಲ್ಲಿ ಯಶ್ ಅವರು ಕಿಯಾರಾ ಅಡ್ವಾಣಿ ಅವರನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಇದೆ. ಈ ಪೋಸ್ಟರ್​​ನಲ್ಲಿ ಕಿಯಾರಾ ಮುಖ ಕಾಣಿಸಿಲ್ಲ. ಒಟ್ಟಿನಲ್ಲಿ ಅವರು ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಖಚಿತ.

‘ಜೀ ಮ್ಯೂಸಿಕ್’ ಮೂಲಕ ‘ಟಾಕ್ಸಿಕ್’ ಸಿನಿಮಾದ ಎಲ್ಲ ಭಾಷೆಯ ಹಾಡುಗಳು ರಿಲೀಸ್ ಆಗಲಿವೆ. ವಿಶಾಲ್ ಮಿಶ್ರಾ ಅವರು 4 ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ತನಿಷ್ಕ್ ಬಾಗ್ಜಿ ಅವರು ಅರ್ಸ್ಲಾನ್ ನಿಜಾಮಿ ಮತ್ತು ಫಹೀಮ್ ಅಬ್ದುಲ್ಲಾ ಜೊತೆ ಸೇರಿ ಒಂದು ಹಾಡಿಗೆ ಸಂಗೀತ ನೀಡಿದ್ದಾರೆ. ರವಿ ಬಸ್ರೂರು ಅವರು ಒಂದು ಹಾಡಿಗೆ ಸಂಗೀತ ನೀಡುವುದರ ಜೊತೆಗೆ ಹಿನ್ನೆಲೆ ಸಂಗೀತದ ಜವಾಬ್ದಾರಿ ನಿಭಾಯಿಸಿದ್ದಾರೆ. ಈ ಸಿನಿಮಾಗೆ ಒಟ್ಟು 5 ಮಂದಿ ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರದ ಇಂಗ್ಲಿಷ್ ಆವೃತ್ತಿ ರಿಲೀಸ್ ಬಗ್ಗೆ ಯಶ್ ಅಭಿಮಾನಿಗಳಲ್ಲಿ ಗೊಂದಲ

‘ತಬಾಹಿ’ ಹಾಡಿನ ಪೋಸ್ಟರ್ ನೋಡುತ್ತಿದ್ದಂತೆಯೇ ಯಶ್ ಅಭಿಮಾನಿಗಳ ಕೌತುಕ ಹೆಚ್ಚಾಗಿದೆ. ಸಾವಿರಾರು ಕಮೆಂಟ್​​ಗಳ ಮೂಲಕ ಜನರು ತಮ್ಮ ಎಗ್ಸೈಟ್​ಮೆಂಟ್ ತೋರಿಸಿದ್ದಾರೆ. ಈ ಸಿನಿಮಾವನ್ನು ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ನಿರ್ಮಾಣ ಮಾಡಿದೆ. ಮಾರ್ಚ್ 19ರಂದು ವಿಶ್ವಾದ್ಯಂತ ‘ಟಾಕ್ಸಿಕ್’ ರಿಲೀಸ್ ಆಗಲಿದೆ. ‘ಧುರಂಧರ್ 2’ ಚಿತ್ರಕ್ಕೆ ಫೈಟ್ ನೀಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ