Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೇತನ್​ ಗಡಿಪಾರಿಗೆ ಸೋಶಿಯಲ್​ ಮೀಡಿಯಾದಲ್ಲಿ ಒತ್ತಾಯ; ನಟನ ಪ್ರತಿಕ್ರಿಯೆ ಏನು?

TV9 Web
| Updated By: ಮದನ್​ ಕುಮಾರ್​

Updated on: Jun 20, 2021 | 4:32 PM

ಸಿದ್ಧಾಂತಗಳ ಕಾರಣದಿಂದ ನಟ ಚೇತನ್​ ಕುಮಾರ್​ ಆಗಾಗ ವಿವಾದಕ್ಕೆ ಒಳಗಾಗುತ್ತ ಇರುತ್ತಾರೆ. ಬ್ರಾಹ್ಮಣ್ಯದ ಬಗ್ಗೆ ಅವರು ಇತ್ತೀಚೆಗೆ ಮಾಡಿದ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳಿಂದ ವಿವಾದ ಸೃಷ್ಟಿ ಆಯಿತು.

ಸ್ಯಾಂಡಲ್​​ವುಡ್​ ನಟ ಚೇತನ್​ ಕುಮಾರ್​ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಸೋಶಿಯಲ್​ ಮೀಡಿಯಾದಲ್ಲಿ ಕೆಲವರು ಆಗ್ರಹ ಮಾಡುತ್ತಿದ್ದಾರೆ. ಆ ಮಾತಿಗೆ ಈಗ ಚೇತನ್ ಪ್ರತಿಕ್ರಿಯೆ ನೀಡಿದ್ದಾರೆ. ‘ದೇಶದ್ರೋಹಿಗಳನ್ನು ಗಡಿಪಾರು ಮಾಡಲಿ. ನಾನು ಯಾವತ್ತೂ ಇಲ್ಲಿನ ಕಾನೂನು ಉಲ್ಲಂಘನೆ ಮಾಡಿಲ್ಲ. ಸಂವಿಧಾನದ ಅಡಿಯಲ್ಲಿ ಉತ್ತಮ ಸಮಾಜ ನಿರ್ಮಿಸುವ ಉದ್ದೇಶ ನನಗಿದೆ. ಕೈಲಾದ ಸಮಾಜ ಸೇವೆ, ಹೋರಾಟ ಮತ್ತು ಜನ ಜಾಗೃತಿಯ ಕೆಲಸವನ್ನು ಮುಂದೆಯೂ ಮಾಡುತ್ತೇನೆ’ ಎಂದು ಚೇತನ್​ ಹೇಳಿದ್ದಾರೆ.

‘ನಾವು 75 ವರ್ಷದಿಂದ ಭಾರತದ ಮೂಲ ನಿವಾಸಿಗಳು. ಇದು ನಮ್ಮ ದೇಶ. ನಾನು ಓಸಿಐ ಕಾರ್ಡ್​ ಹೊಂದಿರುವವನು ಹೌದು. ಮತ ಹಾಕುವ ಹಕ್ಕು ನನಗಿಲ್ಲ. ನಾನು ಯಾವತ್ತೂ ಇಲ್ಲಿ ಮತ ಹಾಕಿಲ್ಲ. ನನಗೆ ಎಲೆಕ್ಷನ್​ಗೆ ನಿಲ್ಲುವ ಹಕ್ಕು ಕೂಡ ಇಲ್ಲ. ಈ ಎರಡನ್ನು ಹೊರತುಪಡಿಸಿದರೆ ಪ್ರತಿಯೊಬ್ಬ ಭಾರತೀಯನಿಗೆ ಸಿಗಬೇಕಾದ ಹಕ್ಕು ನನಗೂ ಸಿಕ್ಕಿದೆ. ನನ್ನ ತಂದೆ-ತಾಯಿ, ತಾತ-ಅಜ್ಜಿ ಎಲ್ಲರೂ ಇಂಡಿಯಾದವರೇ. ನಾನು ಈ ದೇಶಕ್ಕೆ ಕೊಡುಗೆ ಸಲ್ಲಿಸಬೇಕು. ಪಾಸ್​ಪೋರ್ಟ್​ ಮುಖ್ಯ ಆಗುವುದಿಲ್ಲ. ಮನಸ್ಥಿತಿ ಮುಖ್ಯ ಆಗುತ್ತದೆ’ ಎಂದು ಚೇತನ್​ ಹೇಳಿದ್ದಾರೆ.

ಇದನ್ನೂ ಓದಿ:

ನಟ ಚೇತನ್​ ಈವರೆಗೆ ಒಮ್ಮೆಯೂ ವೋಟ್​ ಹಾಕಿಲ್ಲ; ಅದಕ್ಕೆ ಇದೆ ಒಂದು ವಿಶೇಷ ಕಾರಣ

‘ಚಿತ್ರರಂಗದಲ್ಲಿರುವ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಲಿ’; ರಕ್ಷಿತ್ ಶೆಟ್ಟಿಗೆ ಚೇತನ್​ ಸವಾಲು