‘ಚಿತ್ರರಂಗದಲ್ಲಿರುವ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಲಿ’; ರಕ್ಷಿತ್ ಶೆಟ್ಟಿಗೆ ಚೇತನ್​ ಸವಾಲು

‘ದಕ್ಷಿಣ ಭಾರತದಲ್ಲೇ ಅತಿ ಕೆಟ್ಟ ಚಿತ್ರರಂಗ ಕನ್ನಡ ಫಿಲ್ಮ್​ ಇಂಡಸ್ಟ್ರಿ ಎಂಬರ್ಥದಲ್ಲಿದ್ದ ಟ್ವೀಟ್​ಅನ್ನು ಚೇತನ್​ ರೀಟ್ವೀಟ್​ ಮಾಡಿ ಇದು ಸತ್ಯ ಎಂದು ಹೇಳಿದ್ದರು. ಇದಕ್ಕೆ ರಕ್ಷಿತ್ ಖಾರವಾಗಿ ಪ್ರತಿಕ್ರಿಯಿಸಿದ್ದರು.

‘ಚಿತ್ರರಂಗದಲ್ಲಿರುವ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಲಿ’; ರಕ್ಷಿತ್ ಶೆಟ್ಟಿಗೆ ಚೇತನ್​ ಸವಾಲು
ರಕ್ಷಿತ್​ ಶೆಟ್ಟಿ, ಚೇತನ್​
TV9kannada Web Team

| Edited By: Rajesh Duggumane

Jun 16, 2021 | 6:17 PM


ಕನ್ನಡ ಚಿತ್ರರಂಗದ ಬಗ್ಗೆ ಚೇತನ್​ ಕೀಳಾಗಿ ಮಾತನಾಡಿದ್ದಾರೆ ಎನ್ನುವ ವಿಚಾರ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲ, ಈ ಬಗ್ಗೆ ನಟ ರಕ್ಷಿತ್​ ಶೆಟ್ಟಿ ಅಸಮಾಧಾನ ಹೊರ ಹಾಕಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಆ ದಿನಗಳು ಚೇತನ್​ ಪ್ರತಿಕ್ರಿಯಿಸಿದ್ದಾರೆ.

‘ದಕ್ಷಿಣ ಭಾರತದಲ್ಲೇ ಅತಿ ಕೆಟ್ಟ ಚಿತ್ರರಂಗ ಕನ್ನಡ ಫಿಲ್ಮ್​ ಇಂಡಸ್ಟ್ರಿ ಎಂಬರ್ಥದಲ್ಲಿದ್ದ ಟ್ವೀಟ್​ಅನ್ನು ಚೇತನ್​ ರೀಟ್ವೀಟ್​ ಮಾಡಿ ಇದು ಸತ್ಯ ಎಂದು ಹೇಳಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ರಕ್ಷಿತ್​, ‘ಚೇತನ್​ ಅವರೇ, ನಿಮ್ಮ ಕೆಲಸಗಳಿಂದಾಗಿ ನಿಮ್ಮನ್ನು ನಾನು ಗೌರವಿಸುತ್ತೇನೆ. ಆದರೆ ನೀವು ನಿಮ್ಮ ಆಲೋಚನೆಯನ್ನು ಸರಿಮಾಡಿಕೊಳ್ಳಿ. ಕೆಟ್ಟದನ್ನು ಬಿತ್ತಿದ ಕಡೆಯೇ ಕೆಡುಕು ಬೆಳೆಯುತ್ತದೆ. ನನಗೆ ಈ ಸಿನಿಮಾ ಇಂಡಸ್ಟ್ರೀ ವೇದಿಕೆ ಒದಗಿಸಿಕೊಟ್ಟಿದೆ. ನಮಗಿಂತ ಮೊದಲು ಎಷ್ಟೋ ದಿಗ್ಗಜರು ಕಟ್ಟಿದ ವೇದಿಕೆ ಇದು. ಅದರ ಬಗ್ಗೆ ನಿಮಗೆ ತಿಳಿದಿಲ್ಲ. ಏನೂ ಇಲ್ಲದ ನಮಗೆ ಇಂದು ಈ ಚಿತ್ರರಂಗ ಬದುಕು ಕೊಟ್ಟಿದೆ. ಇಲ್ಲಿ ಕೆಲಸ ಮಾಡುವ ಸಾವಿರಾರು ಜನರಿಗೆ ಇದೇ ಜೀವನ’ ಎಂದಿದ್ದರು.

ಬ್ರಾಹ್ಮಣ ಸಮುದಾಯಕ್ಕೆ ನೋವುಂಟು ಮಾಡುವ ಹೇಳಿಕೆ ನೀಡಿದ ನಟ ಚೇತನ್ ಅವರಿಗೆ ನೋಟಿಸ್ ನೀಡಲಾಗಿತ್ತು. ಹೀಗಾಗಿ, ಇಂದು (ಜೂನ್​ 16) ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದರು. ನಂತರ ಹೊರ ಬಂದು ಮಾಧ್ಯಮದವರ ಜತೆಗೆ ಮಾತನಾಡಿದ ಚೇತನ್​ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು. ‘ರಕ್ಷಿತ್ ನನ್ನ ವಿರುದ್ಧ ಏನು ಹೇಳಿಲ್ಲ. ಅವರಿಗೆ ಹೇಳುವ ಹಕ್ಕಿದೆ. ತಪ್ಪಿದ್ದರೆ ತಿದ್ದುಕೊಳ್ಳುತ್ತೇನೆ. ಅದೇ ರೀತಿಯಲ್ಲಿ ಅವರು ಸಿನಿಮಾ ರಂಗದಲ್ಲಿರುವ ಅನ್ಯಾಯದ ಬಗ್ಗೆ ಹೇಳಲಿ. ಇಲ್ಲಿರುವ ಭೇದಭಾವ, ಸಿನಿಮಾರಂಗದಲಿರುವ ಲೈಂಗಿಕ ಕಿರುಕುಳದ ಬಗ್ಗೆ ಹೇಳಲಿ. ಸಿನಿಮಾ ರಂಗದ ಪ್ರತಿಯೊಬ್ಬರು ಈ ಬಗ್ಗೆ ಮಾತನಾಡಲಿ’ ಎಂದರು ಚೇತನ್.

ಇದನ್ನೂ ಓದಿ: ಬ್ರಾಹ್ಮಣ್ಯದ ಬಗ್ಗೆ ನನ್ನ ಹೇಳಿಕೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ; ವಿಚಾರಣೆ ಬಳಿಕ ನಟ ಚೇತನ್ ಪ್ರತಿಕ್ರಿಯೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada