Sanchari Vijay: ಸಂಚಾರಿ ವಿಜಯ್ ಜೊತೆ ಸಿನಿಮಾ ಮಾಡಬೇಕಿತ್ತು ನಾಗತಿಹಳ್ಳಿ ಚಂದ್ರಶೇಖರ್​; ಆದರೆ ಆಗಿದ್ದೇ ಬೇರೆ

TV9 Web
| Updated By: ಮದನ್​ ಕುಮಾರ್​

Updated on: Jun 17, 2021 | 8:57 AM

Sanchari Vijay Movies: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್​ ಮತ್ತು ಸಂಚಾರಿ ವಿಜಯ್​ ಜೊತೆಯಾಗಿ ಸಿನಿಮಾ ಮಾಡಬೇಕಿತ್ತು. ಆದರೆ ಆ ಪ್ಲ್ಯಾನ್​ ಕೈಗೂಡುವ ಮುನ್ನವೇ ವಿಜಯ್ ಇಹಲೋಕ ತ್ಯಜಿಸಿರುವುದು ವಿಪರ್ಯಾಸ.

‘ಸಂಚಾರಿ ವಿಜಯ್​ ಜೊತೆ ಒಂದು ಸಿನಿಮಾ ಮಾಡಲು ಹೊರಟ್ಟಿದ್ದೆ. ಆದರೆ ನಿರ್ಮಾಪಕರು ಮುಂದುವರಿಯಲಿಲ್ಲ. ಸಂಚಾರಿ ವಿಜಯ್​ಗೆ ಕಥೆ ತುಂಬ ಇಷ್ಟ ಆಗಿತ್ತು. ಒಬ್ಬ ನಿಜವಾದ ಕಲಾವಿದ ತನ್ನ ಇಮೇಜ್​ಗೆ ಕಟ್ಟುಬೀಳದೆ ಸಿಕ್ಕ ಪಾತ್ರವನ್ನು ಚೆನ್ನಾಗಿ ಮಾಡುತ್ತಾನೆ. ಅಂಥ ಪಾತ್ರ ಅದರಲ್ಲಿ ಇತ್ತು. ಕಾರಣಾಂತರಗಳಿಂದ ನಿರ್ಮಾಪಕರು ಹಿಂದೆ ಸರಿದರು. ಸಂಚಾರಿ ವಿಜಯ್​ಗೆ ಆ ಪಾತ್ರ ತುಂಬ ಹೊಂದಿಕೆ ಆಗುತ್ತಿತ್ತು’ ಎಂದು ನಾಗತಿಹಳ್ಳಿ ಚಂದ್ರಶೇಖರ್​ ಹೇಳಿದ್ದಾರೆ.

‘ಸಂಭಾವನೆ ವಿಚಾರದಲ್ಲಿ ವಿಜಯ್​ ಮುಜುಗರ ಪಡುತ್ತಿದ್ದ. ಒಂದು ಚಿತ್ರದಲ್ಲಿ ಯಾರಿಗಾದರೂ ಚಾನ್ಸ್​ ಕೊಡಲು ನನಗೆ ಸಾಧ್ಯವಾಗದಿದ್ದರೆ ಮುಂದಿನ ಸಿನಿಮಾದಲ್ಲಾದರೂ ಅವಕಾಶ ನೀಡಲು ಪ್ರಯತ್ನಿಸುತ್ತೇನೆ. ಹಾಗಾಗಿ ಮುಂದಿನ ಚಿತ್ರದಲ್ಲಿ ಸಂಚಾರಿ ವಿಜಯ್​ಗೆ ಒಳ್ಳೆಯ ಚಾನ್ಸ್​ ಕೊಡಬೇಕು ಎಂದುಕೊಂಡಿದ್ದೆ. ಅಷ್ಟರಲ್ಲೇ ಅವನು ನಿಧನನಾದ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ನಾಗತಿಹಳ್ಳಿ ಚಂದ್ರಶೇಖರ್​.

ಜೂ.12ರ ರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿ​ ಸಂಚಾರಿ ವಿಜಯ್​ ಅವರಿಗೆ ಆಕ್ಸಿಡೆಂಟ್​ ಆಗಿತ್ತು. ಸ್ನೇಹಿತ ನವೀನ್​ ಅವರ ಬೈಕ್​ನಲ್ಲಿ ಹಿಂಬದಿ ಕುಳಿತು ಪ್ರಯಾಣ ಮಾಡುತ್ತಿದ್ದ ವಿಜಯ್​ಗೆ ಮಾರಣಾಂತಿಕವಾಗಿ ಪೆಟ್ಟು ಬಿದ್ದಿತ್ತು. ತಲೆ ಮತ್ತು ತೊಡೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ತಕ್ಷಣವೇ ಅವರನ್ನು ಸಮೀಪದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಮೆದುಳಿನಲ್ಲಿ ತೀವ್ರ ರಕ್ತಸ್ರಾವ ಆದ ಪರಿಣಾಮ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು. ಕಡೆಗೂ ಚಿಕಿತ್ಸೆಗೆ ಸ್ಪಂದಿಸದೇ ಅವರು ನಿಧನರಾದರು.

ಇದನ್ನೂ ಓದಿ:

Sanchari Vijay: ಸಂಚಾರಿ ವಿಜಯ್​ಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ‘ನಾನು ಅವನಲ್ಲ ಅವಳು’ ಚಿತ್ರದ ತೆರೆ ಹಿಂದಿನ ಇಂಟರೆಸ್ಟಿಂಗ್​ ಕಥೆ

Sanchari Vijay: ಸಂಚಾರಿ ವಿಜಯ್ ನಟನೆಯ ‘ತಲೆದಂಡ’ ಟೀಸರ್​ ನೋಡಿದರೆ ಕಲ್ಲು ಹೃದಯವೂ ಕರಗಲೇಬೇಕು