ಜೀವನದಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರಕ್ಕೆ ಮರುಗಿದ ಶರಣ್​ ಸಿನಿಮಾದ ನಟಿ

ಹೆಬಾ ಪಟೇಲ್ ನಟನೆಯ ‘ಕುಮಾರಿ 21ಎಫ್’​ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಯಿತು. ಈ ಸಿನಿಮಾದಲ್ಲಿ ಹೆಬಾ ಮಾದಕ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ನಂತರ ಅವರಿಗೆ ಅಂತಹುದೇ ಪಾತ್ರಗಳು ಅರಸಿ ಬಂದವು.

ಜೀವನದಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರಕ್ಕೆ ಮರುಗಿದ ಶರಣ್​ ಸಿನಿಮಾದ ನಟಿ
ಹೆಬಾ ಪಟೇಲ್​
TV9kannada Web Team

| Edited By: Madan Kumar

Jun 20, 2021 | 3:19 PM

2014ರಲ್ಲಿ ತೆರೆಗೆ ಬಂದ ಶರಣ್​ ನಟನೆಯ ‘ಅಧ್ಯಕ್ಷ’ ಸಿನಿಮಾ ಮೂಲಕ ಹೆಬಾ ಪಟೇಲ್​ ಚಿತ್ರರಂಗಕ್ಕೆ ಕಾಲಿಟ್ಟರು. ಕಡಿಮೆ ಅವಧಿಯಲ್ಲಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಖ್ಯಾತಿ ಅವರಿಗಿದೆ. ಈಗ ಅವರು ತಾವು ಜೀವನದಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರದ ಬಗ್ಗೆ ಮರುಗಿದ್ದಾರೆ.

ಹೆಬಾ ಪಟೇಲ್ ನಟನೆಯ ‘ಕುಮಾರಿ 21ಎಫ್’​ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಯಿತು. ಈ ಸಿನಿಮಾದಲ್ಲಿ ಹೆಬಾ ಮಾದಕ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ನಂತರ ಅವರಿಗೆ ಅಂತಹುದೇ ಪಾತ್ರಗಳು ಅರಸಿ ಬಂದವು. 2016 ಹಾಗೂ 2017ರಲ್ಲಿ ಅವರ ಅಭಿನಯದ 6 ಚಿತ್ರಗಳು ತೆರೆಗೆ ಬಂದವು. ಬ್ಯಾಕ್​ ಟು ಬ್ಯಾಕ್​ ಸಿನಿಮಾ ತೆರೆಗೆ ಬಂದ ಹೊರತಾಗಿಯೂ ಯಾವುದೂ ಹಿಟ್​ ಆಗಲಿಲ್ಲ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಹೆಬಾ ಮಾತನಾಡಿದ್ದಾರೆ. ಇದು ತಾವು ತೆಗೆದುಕೊಂಡಿರುವ ತಪ್ಪು ನಿರ್ಧಾರ ಎಂದಿರುವ ಅವರು, ‘ನಾನು ಚಿತ್ರರಂಗಕ್ಕೆ ಆಗತಾನೇ ಕಾಲಿಟ್ಟಿದ್ದೆ. ಯಾವ ಸಿನಿಮಾದಲ್ಲಿ ನಟಿಸಬೇಕು. ಯಾವ ಸಿನಿಮಾದಲ್ಲಿ ನಟಿಸಬಾರದು ಎಂಬ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಎಡವಿದ್ದೆ. ನಾನು ಕಥೆ ಕೇಳಿದ ಎಲ್ಲಾ ಸಿನಿಮಾಗಳನ್ನೂ ಒಪ್ಪಿಕೊಂಡೆ. ಆ ಬಗ್ಗೆ ನಾನು ಮರುಗಿದ್ದೇನೆ. ಆದರೆ, ನಾನು ಈಗ ಬದಲಾಗಿದ್ದೇನೆ. ಪಾತ್ರ ಹಾಗೂ ಕಥೆ ಉತ್ತಮವಾಗಿದ್ದರೆ ಮಾತ್ರ ಸಿನಿಮಾ ಒಪ್ಪಿಕೊಳ್ಳುತ್ತೇನೆ’ ಎಂದಿದ್ದಾರೆ.

ನನಗೆ ಈಗ ಬರುತ್ತಿರುವ ಸಿನಿಮಾ ಆಫರ್​ಗಳ ಬಗ್ಗೆ ನನಗೆ ಖುಷಿ ಇಲ್ಲ. ನಾನು ನನ್ನ ಕೆರಿಯರ್​ನಲ್ಲಿ ಪ್ಯಾನಿಕ್​ ಆಗಿದ್ದೆ. ಈ ಕಾರಣಕ್ಕೆ ನಾನು ಎಲ್ಲಾ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ ಅವರು.

‘ಅಧ್ಯಕ್ಷ’ ಸಿನಿಮಾವನ್ನು ನಂದ ಕಿಶೋರ್​ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಕಾಲೇಜಿಗೆ ತೆರಳುವ ಹುಡುಗಿಯಾಗಿ ಹೆಬಾ ಕಾಣಿಸಿಕೊಂಡಿದ್ದರು. ಮೊದಲ ಸಿನಿಮಾದಲ್ಲೇ ಅವರು ಭರವಸೆ ಮೂಡಿಸಿದ್ದರು. ಈ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಇದಾದ ನಂತರದಲ್ಲಿ ಹೆಬಾ ತೆಲುಗು ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿ ಬಿಟ್ಟರು. ಮತ್ತೆ ಕನ್ನಡದಲ್ಲಿ ಯಾವುದೇ ಚಿತ್ರಗಳಲ್ಲಿ ನಟಿಸಿಲ್ಲ.

ಇದನ್ನೂ ಓದಿ: ನಮಗೆ ಕೊರೊನಾ​ ಕಲಿಸಿದ ಪಾಠ ಜೀವನಪರ್ಯಂತ ಮರೆಯುವಂತಿಲ್ಲ; ನಟ ಶರಣ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada