‘ಆ ಮಗುವಿಗೆ ಉಸಿರು ಕಟ್ಟುತ್ತಿದೆ’; ಅನುಷ್ಕಾ-ವಿರಾಟ್​ ಪುತ್ರಿ ವಮಿಕಾ ವಿಚಾರದಲ್ಲಿ ನೆಟ್ಟಿಗರ ಆಕ್ರೋಶ

‘ಆ ಮಗುವಿಗೆ ಉಸಿರು ಕಟ್ಟುತ್ತಿದೆ’; ಅನುಷ್ಕಾ-ವಿರಾಟ್​ ಪುತ್ರಿ ವಮಿಕಾ ವಿಚಾರದಲ್ಲಿ ನೆಟ್ಟಿಗರ ಆಕ್ರೋಶ
ಅನುಷ್ಕಾ ಶರ್ಮಾ, ವಿರಾಟ್​ ಕೊಯ್ಲಿ, ವಮಿಕಾ

Anushka Sharma | Virat Kohli: ಕ್ಯಾಮರಾ ಕಣ್ಣಿಗೆ ಕಾಣಬಾರದು ಎಂಬ ಉದ್ದೇಶದಿಂದ ಮಗಳ ಮುಖವನ್ನು ಸಂಪೂರ್ಣ ಮುಚ್ಚಿಕೊಂಡು ಅನುಷ್ಕಾ ಸಾಗಿದ್ದಾರೆ. ಈ ಸಂದರ್ಭದ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

Madan Kumar

|

Jun 03, 2021 | 11:57 AM

ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟರ್​ ವಿರಾಟ್​ ಕೊಯ್ಲಿ ತಮ್ಮ ಮುದ್ದು ಮಗಳು ವಮಿಕಾ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ ವಹಿಸುತ್ತಿದ್ದಾರೆ. ಮಗುವನ್ನು ಸೋಶಿಯಲ್​ ಮೀಡಿಯಾದಿಂದ ದೂರ ಇರಿಸಿ ಬೆಳೆಸಬೇಕು ಎಂದು ಈ ದಂಪತಿ ನಿರ್ಧಾರ ಮಾಡಿದ್ದಾರೆ. ಅದೇ ಕಾರಣಕ್ಕಾಗಿ ವಮಿಳಾ ಮುಖ ಕಾಣುವಂತಹ ಒಂದೇ ಒಂದು ಫೋಟೋ ಕೂಡ ಆನ್​ಲೈನ್​ನಲ್ಲಿ ಲಭ್ಯವಿಲ್ಲ. ಹೇಗಾದರೂ ಮಾಡಿ ಆ ಪುಟಾಣಿಯ ಫೋಟೋ ಕ್ಲಿಕ್ಕಿಸಬೇಕು ಎಂದು ಕೆಲವು ಪಾಪರಾಜಿಗಳು ಹಠ ಹಿಡಿದಿದ್ದಾರೆ. ಅಂಥವರ ಕ್ಯಾಮರಾದಿಂದ ತಮ್ಮ ಮಗಳನ್ನು ಕಾಪಾಡಬೇಕು ಎಂದು ಅನುಷ್ಕಾ-ವಿರಾಟ್​ ಕೂಡ ಪಣ ತೊಟ್ಟಿದ್ದಾರೆ. ಈ ಜಟಾಪಟಿಯಲ್ಲಿ ಮಗುವಿಗೆ ತೊಂದರೆ ಆಗುತ್ತಿರುವ ಬಗ್ಗೆ ಈಗ ಆಕ್ಷೇಪ ವ್ಯಕ್ತವಾಗಿದೆ.

ಇಂಗ್ಲೆಂಡ್​ನಲ್ಲಿ ನಡೆಯಲಿರುವ ವರ್ಲ್ಡ್​ ಟೆಸ್ಟ್​ ಚಾಂಪಿಯನ್​ಶಿಪ್​ಗಾಗಿ ಭಾರತ ಕ್ರಿಕೆಟ್​ ತಂಡ ವಿಮಾನ ಹತ್ತಿದೆ. ಆಟಗಾರರ ಜೊತೆ ಅವರ ಕುಟುಂಬದವರು ಕೂಡ ಪ್ರಯಾಣ ಬೆಳೆಸಿದ್ದಾರೆ. ಅದಕ್ಕಾಗಿ ಜೂ.2ರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಎಲ್ಲರೂ ಕಾಣಿಸಿಕೊಂಡರು. ವಿರಾಟ್​ ಕೊಯ್ಲಿ ಜೊತೆ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಮಿಕಾ ಕೂಡ ತೆರಳಿದ್ದಾರೆ. ಮುಂಬೈ ಏರ್​ಪೋರ್ಟ್​​ಗೆ ಬಂದ ಅವರ ಫೋಟೋ ತೆಗೆಯಲು ಪಾಪರಾಜಿಗಳು ಮುಗಿಬಿದ್ದಿದ್ದಾರೆ.

ಕ್ಯಾಮರಾ ಕಣ್ಣಿಗೆ ಕಾಣಬಾರದು ಎಂಬ ಉದ್ದೇಶದಿಂದ ಮಗಳ ಮುಖವನ್ನು ಸಂಪೂರ್ಣ ಮುಚ್ಚಿಕೊಂಡು ಅನುಷ್ಕಾ ಸಾಗಿದ್ದಾರೆ. ಈ ಸಂದರ್ಭದ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಅದನ್ನು ಕಂಡ ನೆಟ್ಟಿಗರು ಕೋಪಗೊಂಡಿದ್ದಾರೆ. ‘ಆ ಮಗುವಿಗೆ ಸರಿಯಾಗಿ ಉಸಿರಾಡಲು ಕೂಡ ಆಗುತ್ತಿಲ್ಲ ಎನಿಸುತ್ತದೆ. ದಯವಿಟ್ಟು ಅವರ ಖಾಸಗಿತನಕ್ಕೆ ಧಕ್ಕೆ ತರಬೇಡಿ’ ಎಂದು ಕಮೆಂಟ್​ ಮಾಡುವ ಮೂಲಕ ಪಾಪರಾಜಿಗಳಿಗೆ ಜನರು ಬೈಯ್ದಿದ್ದಾರೆ.

ಈ ವರ್ಷ ಜನವರಿಯಲ್ಲಿ ಮಗು ಜನಿಸಿದ ವಿಷಯವನ್ನು ತಿಳಿಸುವಾಗಲೇ ವಿರಾಟ್​ ಕೊಯ್ಲಿ ಮತ್ತು ಅನುಷ್ಕಾ ಶರ್ಮಾ ಈ ವಿಚಾರದ ಬಗ್ಗೆ ಸ್ಪಷ್ಟವಾಗಿ ಹೇಳಿದ್ದರು. ದಯವಿಟ್ಟು ನಮ್ಮ ಮಗುವಿನ ಖಾಸಗಿತನವನ್ನು ಗೌರವಿಸಿ ಎಂದು ಪಾಪರಾಜಿಗಳಲ್ಲಿ ಅವರು ಮನವಿ ಮಾಡಿಕೊಂಡಿದ್ದರು. ಆದರೆ ಅವರ ಮಾತಿಗೆ ಬೆಲೆ ಸಿಗುತ್ತಿರುವಂತೆ ಕಾಣುತ್ತಿಲ್ಲ. ಈ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಮಗಳ ಮುಖ ತೋರಿಸಿ ಎಂದು ಕೆಲವೇ ದಿನಗಳ ಹಿಂದೆ ಅಭಿಮಾನಿಯೊಬ್ಬರು ವಿರಾಟ್​ ಕೊಯ್ಲಿಗೆ ಕೋರಿಕೆ ಸಲ್ಲಿಸಿದ್ದರು. ಅದಕ್ಕೆ ಉತ್ತರಿಸಿದ್ದ ಕೊಯ್ಲಿ, ‘ನಮ್ಮ ಮಗಳನ್ನು ನಿಮಗೆ ತೋರಿಸಲು ಸಾಧ್ಯವಿಲ್ಲ. ಸೋಶಿಯಲ್​ ಮೀಡಿಯಾ ಎಂದರೆ ಏನು ಅಂತ ಆಕೆಗೆ ಅರ್ಥ ಆಗುವವರೆಗೂ ನಾವು ಅವಳನ್ನು ಅದರಲ್ಲಿ ಪರಿಚಯಿಸದಿರಲು ತೀರ್ಮಾನಿಸಿದ್ದೇನೆ. ಆ ಬಗ್ಗೆ ಅವಳೇ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಹೇಳಿದ್ದರು.

ಇದನ್ನೂ ಓದಿ:

ಪುತ್ರಿ ವಮಿಕಾ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಂಡ ಅನುಷ್ಕಾ ಶರ್ಮಾ-ವಿರಾಟ್​ ಕೊಯ್ಲಿ; ಏನದು?

‘ಬುಲ್​ಬುಲ್’​ ಸಿನಿಮಾ ನಟಿ ಜತೆ ಅನುಷ್ಕಾ ಶರ್ಮಾ ಸಹೋದರನ ಡೇಟಿಂಗ್

Follow us on

Related Stories

Most Read Stories

Click on your DTH Provider to Add TV9 Kannada