AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬುಲ್​ಬುಲ್’​ ಸಿನಿಮಾ ನಟಿ ಜತೆ ಅನುಷ್ಕಾ ಶರ್ಮಾ ಸಹೋದರನ ಡೇಟಿಂಗ್

ಈ ಸಿನಿಮಾ ತೆರೆಗೆ ಬಂದಿದ್ದು 2020ರಲ್ಲಿ. ಶೂಟಿಂಗ್​ ನಡೆದಿದ್ದು 2019ರಲ್ಲಿ. ಹೀಗಾಗಿ ಇವರ ನಡುವೆ ಇದ್ದ ಗೆಳೆತನ ಪ್ರೀತಿಗೆ ಬದಲಾಗಲು ಸ್ವಲ್ಪ ಸಮಯ ಹಿಡಿದಿದೆ ಎನ್ನಲಾಗುತ್ತಿದೆ.

'ಬುಲ್​ಬುಲ್’​ ಸಿನಿಮಾ ನಟಿ ಜತೆ ಅನುಷ್ಕಾ ಶರ್ಮಾ ಸಹೋದರನ ಡೇಟಿಂಗ್
ಅನುಷ್ಕಾ ಶರ್ಮಾ-ಕರ್ಣೇಶ್​
ರಾಜೇಶ್ ದುಗ್ಗುಮನೆ
|

Updated on:May 28, 2021 | 7:24 PM

Share

ಸೆಲೆಬ್ರಿಟಿಗಳು ಮಾತ್ರವಲ್ಲ ಅವರ ಕುಟುಂಬದವರ ಮೇಲೂ ಅಭಿಮಾನಿಗಳು ಕಣ್ಣಿಟ್ಟಿರುತ್ತಾರೆ. ತಮ್ಮಿಷ್ಟದ ನಟ/ನಟಿಯ ಕುಟುಂಬದವರು ಏನು ಮಾಡುತ್ತಾರೆ? ಯಾರ ಜತೆ ಸುತ್ತಾಟ ನಡೆಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಈಗ ನಟಿ ಅನುಷ್ಕಾ ಶರ್ಮಾ ಅವರ ಸಹೋದರ ಕರ್ಣೇಶ್​ ಶರ್ಮಾ ಮೇಲೆ ಅಭಿಮಾನಿಗಳ ಕಣ್ಣುಬಿದ್ದಿದೆ. ಅಷ್ಟೇ ಅಲ್ಲ ಅವರ ಡೇಟಿಂಗ್​ ವಿಚಾರವನ್ನು ಅಭಿಮಾನಿಗಳು ಬಯಲಿಗೆಳೆದಿದ್ದಾರೆ.

ನೆಟ್​​ಫ್ಲಿಕ್ಸ್​ನಲ್ಲಿ ರಿಲೀಸ್​ ಆದ ಬುಲ್​ಬುಲ್​ ಸಿನಿಮಾ ನಟಿ ತೃಪ್ತಿ ದಿಮ್ರಿ ನಟಿಸಿದ್ದರು. ಈಗ ಅವರ ಜತೆ ಕರ್ಣೇಶ್​ ಸುತ್ತಾಟ ನಡೆಸುತ್ತಿದ್ದಾರೆ ಎನ್ನುವ ವಿಚಾರ ವೈರಲ್​ ಆಗಿದೆ. ಅಂದಹಾಗೆ, ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಕ್ಲೀನ್​ ಸ್ಲೇಟ್​ ಫಿಲ್ಮ್ಸ್​​​. ಈ ಪ್ರೊಡಕ್ಷನ್​ಹೌಸ್​ ಸ್ಥಾಪಕರು ಅನುಷ್ಕಾ ಶರ್ಮಾ ಹಾಗೂ ಕರ್ಣೇಶ್​. ಬುಲ್​ಬುಲ್​ ಸಿನಿಮಾದ ಶೂಟಿಂಗ್​ ವೇಳೆ ಕರ್ಣೇಶ್​ ಸೆಟ್​ಗೆ ತೆರಳುತ್ತಿದ್ದರು. ಆಗ, ತೃಪ್ತಿ ಮತ್ತು ಕರ್ಣೇಶ್​​ ನಡುವೆ ಗೆಳೆತನ ಬೆಳೆದಿದೆ.

ಈ ಸಿನಿಮಾ ತೆರೆಗೆ ಬಂದಿದ್ದು 2020ರಲ್ಲಿ. ಶೂಟಿಂಗ್​ ನಡೆದಿದ್ದು 2019ರಲ್ಲಿ. ಹೀಗಾಗಿ ಇವರ ನಡುವೆ ಇದ್ದ ಗೆಳೆತನ ಪ್ರೀತಿಗೆ ಬದಲಾಗಲು ಸ್ವಲ್ಪ ಸಮಯ ಹಿಡಿದಿದೆ ಎನ್ನಲಾಗುತ್ತಿದೆ. ಇಬ್ಬರೂ ಈಗ ಡೇಟಿಂಗ್​ ನಡೆಸುತ್ತಿದ್ದಾರೆ ಎನ್ನುವ ಮಾತು ಬಾಲಿವುಡ್​ ಅಂಗಳದಲ್ಲಿ ಜೋರಾಗಿದೆ. ಈ ಬಗ್ಗೆ ತೃಪ್ತಿಯಾಗಲೀ, ಕರ್ಣೇಶ್​ ಆಗಲಿ ಪ್ರತಿಕ್ರಿಯಿಸಿಲ್ಲ.

ಇತ್ತೀಚೆಗೆ ಅನುಷ್ಕಾ ತೃಪ್ತಿ ಮತ್ತು ಕರ್ಣೇಶ್​ ಜತೆ ಇರುವ ಫೋಟೋ ಪೋಸ್ಟ್​ ಮಾಡಿ ಮೇಜರ್​ ಮಿಸ್ಸಿಂಗ್​ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್​​ನಲ್ಲಿ ತೃಪ್ತಿಯನ್ನು ಕೂಡ ಸೇರಿಸಿಕೊಂಡಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ತೃಪ್ತಿ ಡೆಹ್ರಾಡೂನ್​ ಮೂಲದವರು. ಸದ್ಯ ಅವರು ಮುಂಬೈನಲ್ಲಿ ಸೆಟಲ್​​ ಆಗಿದ್ದಾರೆ.

ಅನುಷ್ಕಾ ಶರ್ಮಾ ಸಿನಿಮಾ ಬ್ಯಾನರ್​ ಅಡಿಯಲ್ಲಿ ಸಾಕಷ್ಟು ಚಿತ್ರಗಳು ಸಿದ್ಧಗೊಂಡಿವೆ. ಅವರ ನಿರ್ಮಾಣದ ಪಾತಾಳ್​ ಲೋಕ್​ ವೆಬ್​ ಸೀರಿಸ್​ ಜನಮನ್ನಣೆ ಪಡೆದುಕೊಂಡಿತ್ತು. ಅಲ್ಲದೆ, ಸಾಕಷ್ಟು ಅವಾರ್ಡ್​ಗಳನ್ನು ಕೂಡ ಪಡೆದುಕೊಂಡಿತ್ತು. ಇನ್ನು, ಬುಲ್​ಬುಲ್​ ಸಿನಿಮಾದ ಕಥೆ ಉತ್ತಮವಾಗಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ: ಕೊಹ್ಲಿ ಮದುವೆ ನಂತರ ಅನುಷ್ಕಾ ಶರ್ಮಾಗೆ ಕರಣ್​ ಜೋಹರ್​ ಬಳಸಿದ ಆ ಒಂದು ಶಬ್ದ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು

Published On - 7:13 pm, Fri, 28 May 21

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?