Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುತ್ರಿ ವಮಿಕಾ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಂಡ ಅನುಷ್ಕಾ ಶರ್ಮಾ-ವಿರಾಟ್​ ಕೊಯ್ಲಿ; ಏನದು?

Anushka Sharma | Virat Kohli: ನಿಮ್ಮ ಮಗಳ ಹೆಸರಿನ ಅರ್ಥವೇನು? ಆಕೆ ಹೇಗಿದ್ದಾಳೆ? ಪ್ಲೀಸ್​... ಅವಳನ್ನು ನಾವು ಸ್ಪಲ್ಪ ನೋಡಬಹುದಾ ಎಂದು ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಕೊಯ್ಲಿ ಉತ್ತರಿಸಿದ್ದಾರೆ.

ಪುತ್ರಿ ವಮಿಕಾ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಂಡ ಅನುಷ್ಕಾ ಶರ್ಮಾ-ವಿರಾಟ್​ ಕೊಯ್ಲಿ; ಏನದು?
ಅನುಷ್ಕಾ ಶರ್ಮಾ,ವಿರಾಟ್ ಕೊಯ್ಲಿ
Follow us
ಮದನ್​ ಕುಮಾರ್​
|

Updated on: May 30, 2021 | 11:31 AM

ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್​ ಕೊಯ್ಲಿ ಸೆಲೆಬ್ರಿಟಿ ವಲಯದಲ್ಲಿ ಕ್ಯೂಟ್​ ಜೋಡಿ ಎನಿಸಿಕೊಂಡಿದ್ದಾರೆ. ಈ ದಂಪತಿಗೆ 2021ರ ಜನವರಿ 11ರಂದು ಹೆಣ್ಣು ಮಗು ಜನಿಸಿತು. ಮುದ್ದಾದ ಮುಗುವಿಗೆ ವಮಿಕಾ ಎಂದು ಹೆಸರು ಇಡಲಾಗಿದೆ. ಆದರೆ ಈವರೆಗೂ ಮಗಳ ಫೋಟೋವನ್ನು ಈ ಜೋಡಿ ತೋರಿಸಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ವಮಿಕಾಳ ಮುಖ ಕಾಣುವಂತಹ ಯಾವುದೇ ಫೋಟೋ ಕೂಡ ಲಭ್ಯವಿಲ್ಲ. ಈ ಬಗ್ಗೆ ಅಭಿಮಾನಿಗಳು ವಿರಾಟ್​ ಮತ್ತು ಅನುಷ್ಕಾ ಶರ್ಮಾಗೆ ಪ್ರಶ್ನೆ ಮಾಡುತ್ತಿದ್ದಾರೆ.

ಲಾಕ್​ಡೌನ್​ ಪರಿಣಾಮ ಮನೆಯಲ್ಲೇ ಇರುವ ವಿರಾಟ್​ ಕೊಯ್ಲಿ ಇತ್ತೀಚೆಗೆ ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ನಡೆಸಿದರು. ಆಗ ಅವರಿಗೆ ಹಲವು ಪ್ರಶ್ನೆಗಳು ಎದುರಾದವು. ‘ನಿಮ್ಮ ಮಗಳ ಹೆಸರಿನ ಅರ್ಥವೇನು? ಆಕೆ ಹೇಗಿದ್ದಾಳೆ? ಪ್ಲೀಸ್​… ಅವಳನ್ನು ನಾವು ಸ್ಪಲ್ಪ ನೋಡಬಹುದಾ’ ಎಂದು ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ವಿರಾಟ್​ ಕೊಯ್ಲಿ ಉತ್ತರಿಸಿದ್ದಾರೆ.

‘ವಮಿಕಾ ಎಂದರೆ ದುರ್ಗಾ ಮಾತೆಯ ಇನ್ನೊಂದು ಹೆಸರು. ನಮ್ಮ ಮಗಳನ್ನು ನಿಮಗೆ ತೋರಿಸಲು ಸಾಧ್ಯವಿಲ್ಲ. ಸೋಶಿಯಲ್​ ಮೀಡಿಯಾ ಎಂದರೆ ಏನು ಅಂತ ಆಕೆಗೆ ಅರ್ಥ ಆಗುವವರೆಗೂ ನಾವು ಅವಳನ್ನು ಅದರಲ್ಲಿ ಪರಿಚಯಿಸದಿರಲು ತೀರ್ಮಾನಿಸಿದ್ದೇನೆ. ಆ ಬಗ್ಗೆ ಅವಳೇ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಕೊಯ್ಲಿ ಉತ್ತರ ನೀಡಿದ್ದಾರೆ. ಹಾಗಾಗಿ, ಅಭಿಮಾನಿಗಳು ಅನುಷ್ಕಾ-ವಿರಾಟ್​ ಪುತ್ರಿಯ ಮುಖ ನೋಡುವ ಬಯಕೆಯನ್ನು ಮುಂದೂಡಿಕೊಳ್ಳದೇ ಬೇರೆ ಆಯ್ಕೆ ಇಲ್ಲ.

ಕೆಲವು ಸೆಲೆಬ್ರಿಟಿಗಳು ತಮ್ಮ ಮಕ್ಕಳ ಫೋಟೋಗಳನ್ನು ಆಗಾಗ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುತ್ತಾರೆ. ಸ್ಟಾರ್​ ಕಿಡ್​ಗಳು ಎಂಬ ಕಾರಣಕ್ಕೆ ಅಂತಹ ಮಕ್ಕಳ ಕಡೆಗೆ ಮಾಧ್ಯಮದ ಕ್ಯಾಮರಾಗಳು ಕೂಡ ಫೋಕಸ್​ ಆಗುತ್ತವೆ. ಬಾಲಿವುಡ್​ ಸೆಲೆಬ್ರಿಟಿಗಳಾದ ಕರೀನಾ ಕಪೂರ್​ ಖಾನ್​ ಮತ್ತು ಸೈಫ್​ ಅಲಿ ಖಾನ್​ ಪುತ್ರ ತೈಮೂರ್​ ರಾಷ್ಟ್ರ ಮಟ್ಟದಲ್ಲಿ ಫೇಮಸ್​ ಆಗಿದ್ದಾನೆ. ಕನ್ನಡದಲ್ಲಿ ಯಶ್​ ಮತ್ತು ರಾಧಿಕಾ ಪಂಡಿತ್​ ಮಕ್ಕಳಾದ ಯಥರ್ವ್​ ಮತ್ತು ಆಯ್ರಾ ಫೋಟೋ ಮತ್ತು ವಿಡಿಯೋಗಳು ಕೂಡ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತವೆ. ಚಿರಂಜೀವಿ ಸರ್ಜಾ-ಮೇಘನಾ ರಾಜ್​ ಪುತ್ರ ಜ್ಯೂ. ಚಿರು ಸಹ ಮಿಂಚುತ್ತಿದ್ದಾನೆ.

ಭಾರತ ಕೊವಿಡ್​ ಸಂಕಷ್ಟದಲ್ಲಿ ಸಿಲುಕಿರುವಾಗ ಅನುಷ್ಕಾ ಶರ್ಮಾ ಮತ್ತು ವಿರಾಟ್​ ಕೊಯ್ಲಿ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ತಾವು ಎರಡು ಕೋಟಿ ರೂ. ದೇಣಿಗೆ ನೀಡಿರುವುದೂ ಅಲ್ಲದೇ, ಜನರಿಂದಲೂ ದೇಣಿಗೆ ಸಂಗ್ರಹಿಸಿದ್ದಾರೆ. ಆ ಹಣವನ್ನು ಕೊವಿಡ್​ ವಿರುದ್ಧ ಹೋರಾಟಕ್ಕೆ ಬಳಸಿದ್ದಾರೆ. ಈ ಕಾರ್ಯಕ್ಕೆ ಜನಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ:

ಬುಲ್​ಬುಲ್’​ ಸಿನಿಮಾ ನಟಿ ಜತೆ ಅನುಷ್ಕಾ ಶರ್ಮಾ ಸಹೋದರನ ಡೇಟಿಂಗ್

ಬಾಲ್ಯ ಸ್ನೇಹಿತರಾಗಿದ್ದ ಅನುಷ್ಕಾ ಶರ್ಮಾ ಮತ್ತು ಸಾಕ್ಷಿ ಧೋನಿ; ಪುರಾವೆ ಒದಗಿಸುತ್ತಿದೆ ವೈರಲ್​ ಫೋಟೋ

ಶಾಸಕ ಈಗ ಬಂದು ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆಂದ ಸ್ಪೀಕರ್
ಶಾಸಕ ಈಗ ಬಂದು ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆಂದ ಸ್ಪೀಕರ್
ಭಾಷಾಂತರಕ್ಕೆ ಭಾಷಾ ಮತ್ತು ವಿಷಯ ತಜ್ಞ ಜೊತೆಯಲ್ಲಿ ಕೂರಬೇಕು: ಈಶ್ವರ್
ಭಾಷಾಂತರಕ್ಕೆ ಭಾಷಾ ಮತ್ತು ವಿಷಯ ತಜ್ಞ ಜೊತೆಯಲ್ಲಿ ಕೂರಬೇಕು: ಈಶ್ವರ್
ಅಕ್ರಮವಾಗಿ ವಿದ್ಯುತ್ ಪಡೆಯುತ್ತಿದ್ದ ಸಂಗತಿ ಜಮೀರ್ ಗಮನಕ್ಕೆ ಬಂದಿದ್ದು ಈಗ
ಅಕ್ರಮವಾಗಿ ವಿದ್ಯುತ್ ಪಡೆಯುತ್ತಿದ್ದ ಸಂಗತಿ ಜಮೀರ್ ಗಮನಕ್ಕೆ ಬಂದಿದ್ದು ಈಗ
ಎರಡು ದಶಕಗಳಿಂದ ಶಾಸಕನಾಗಿದ್ದರೂ ಜಮೀರ್ ಆಹ್ಮದ್ ಏನೂ ಮಾಡಿಲ್ಲ: ನಿವಾಸಿ
ಎರಡು ದಶಕಗಳಿಂದ ಶಾಸಕನಾಗಿದ್ದರೂ ಜಮೀರ್ ಆಹ್ಮದ್ ಏನೂ ಮಾಡಿಲ್ಲ: ನಿವಾಸಿ
ಹನೂರಿನ ಮಹದೇಶ್ವರ ಬೆಟ್ಟ ದೇವಸ್ಥಾನದ ಹುಂಡಿಯಲ್ಲಿ ₹ 2.85 ಕೋಟಿ ಸಂಗ್ರಹ
ಹನೂರಿನ ಮಹದೇಶ್ವರ ಬೆಟ್ಟ ದೇವಸ್ಥಾನದ ಹುಂಡಿಯಲ್ಲಿ ₹ 2.85 ಕೋಟಿ ಸಂಗ್ರಹ
ಮಾರಿಷಸ್ ಜನರಿಂದ ಮೋದಿಗೆ ಸಖತ್ ಸ್ವಾಗತ
ಮಾರಿಷಸ್ ಜನರಿಂದ ಮೋದಿಗೆ ಸಖತ್ ಸ್ವಾಗತ
ಕಳ್ಳನ ಕರಾಮತ್ತು ಠಾಣೆಯ ಸಿಸಿಟಿವಿಯಲ್ಲಿ ಸೆರೆ
ಕಳ್ಳನ ಕರಾಮತ್ತು ಠಾಣೆಯ ಸಿಸಿಟಿವಿಯಲ್ಲಿ ಸೆರೆ
ಮಜಾ ಟಾಕೀಸ್​ನಲ್ಲಿ ಸ್ಯಾಂಡಲ್​ವುಡ್ ಬ್ಯೂಟಿಗಳು; ಕುರಿನ ಕಾಲೆಳೆದ ಮಾನ್ವಿತಾ
ಮಜಾ ಟಾಕೀಸ್​ನಲ್ಲಿ ಸ್ಯಾಂಡಲ್​ವುಡ್ ಬ್ಯೂಟಿಗಳು; ಕುರಿನ ಕಾಲೆಳೆದ ಮಾನ್ವಿತಾ
VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ