ನಿಮಗೆ ಕನ್ನಡ ಬರುತ್ತಾ? ನೆಟ್ಟಿಗರು ಕೇಳಿದ ವಿಭಿನ್ನ ಪ್ರಶ್ನೆಗಳಿಗೆ ನಯವಾಗಿಯೇ ಉತ್ತರಿಸಿದ ಕೊಹ್ಲಿ; ನೀವೂ ಓದಿ

Virat Kohli: ನಮ್ಮ ಮಗಳಿಗೆ ಸೋಶಿಯಲ್ ಮೀಡಿಯಾ ಎಂದರೇನು ಎಂಬ ಕಲ್ಪನೆ ಬರುವವರೆಗೂ ಮತ್ತು ಅವಳು ತನ್ನ ನಿರ್ಧಾರಗಳನ್ನು ತೆಗೆದುಕೊಳ್ಳುವವರೆಗೂ ನಾವು ಅವಳನ್ನು ಸೋಶಿಯಲ್ ಮೀಡಿಯಾಕ್ಕೆ ಕರೆತರಬಾರದೆಂದು ನಾವು ದಂಪತಿಗಳಾಗಿ ನಿರ್ಧರಿಸಿದ್ದೇವೆ.

ನಿಮಗೆ ಕನ್ನಡ ಬರುತ್ತಾ? ನೆಟ್ಟಿಗರು ಕೇಳಿದ ವಿಭಿನ್ನ ಪ್ರಶ್ನೆಗಳಿಗೆ ನಯವಾಗಿಯೇ ಉತ್ತರಿಸಿದ ಕೊಹ್ಲಿ; ನೀವೂ ಓದಿ
ವಿರಾಟ್ ಕೊಹ್ಲಿ
Follow us
ಪೃಥ್ವಿಶಂಕರ
|

Updated on:May 30, 2021 | 3:25 PM

ಭಾರತೀಯ ಕ್ರಿಕೆಟ್ ತಂಡವು ಜೂನ್‌ನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಜೂನ್ 18 ರಿಂದ ಸೌತಾಂಪ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವನ್ನು ಆಡಲಿದೆ. ನಂತರ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಆದಾಗ್ಯೂ, ಭಾರತ ತಂಡವು ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಮೊದಲು ಮುಂಬೈನ ಹೋಟೆಲ್ನಲ್ಲಿ ಕ್ವಾರಂಟೈನ್​ನಲ್ಲಿದೆ. ಈ ಸಂದರ್ಭದಲ್ಲಿ, ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳಿಗೆ ಪ್ರಶ್ನೆಗಳನ್ನು ಕೇಳುವ ಅವಕಾಶವನ್ನು ನೀಡಿದರು ಮತ್ತು ಅಭಿಮಾನಿಗಳು ಸಹ ಕೊಹ್ಲಿಗೆ ಕೆಲವೊಂದು ವಿಶೇಷ ಎನಿಸುವ ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆ ವಿರಾಟ್​​ ಕೂಡ ಸಾವದಾನದಿಂದ ಉತ್ತರಿಸಿದ್ದಾರೆ. ಇದರಲ್ಲಿ ಒಂದು ತಮಾಷೆಯೆಂದರೆ ವಿರಾಟ್ ಅವರ ಪತ್ನಿ ಅನುಷ್ಕಾ ಶರ್ಮಾ ಕೂಡ ಕೊಹ್ಲಿಯನ್ನು ಪ್ರಶ್ನಿಸಿದ್ದಾರೆ.

ನೆಟ್ಟಿಗರು ಕೇಳಿದ ಪ್ರಶ್ನೆಗಳು ಹೀಗಿವೆ..

ಪ್ರಶ್ನೆ – ನೀವು ಈಗ ಏನು ಮಾಡುತ್ತಿದ್ದೀರಿ ಎಂಬುದರ ಫೋಟೋವನ್ನು ಪೋಸ್ಟ್ ಮಾಡಿ?

ಉತ್ತರ- ಕೊಹ್ಲಿ ಕೈಯಲ್ಲಿ ಒಂದು ಕಪ್ನೊಂದಿಗೆ ಬಿಳಿ ಟೀ ಶರ್ಟ್ ಧರಿಸಿದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ಪ್ರಶ್ನೆ- ಸರ್, ನಿಮ್ಮ ಕ್ವಾರಂಟೈನ್ ದಿನಚರಿಯ ಬಗ್ಗೆ ಹೇಳಬಲ್ಲಿರಾ?

ಉತ್ತರ – ನಾನು ದಿನಕ್ಕೆ ಒಮ್ಮೆ ಅಭ್ಯಾಸ ಮಾಡುತ್ತೇನೆ. ಜೊತೆಗೆ ಕುಟುಂಬದೊಂದಿಗೆ ಸಾಕಷ್ಟು ಸಮಯವನ್ನು ಕಳೆಯುತ್ತೇನೆ.

ಪ್ರಶ್ನೆ- ಟ್ರೋಲಿಗರಿಗೆ ಮತ್ತು ಮೈಮ್‌ಗಳಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?

ಉತ್ತರ- ಕೊಹ್ಲಿ ಫೋಟೋವೊಂದನ್ನು ಟ್ವೀಟ್ ಮಾಡಿದ್ದು, ಇದರಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಶತಕ ಬಾರಿಸಿದ ನಂತರ ಕೈ ಮುಚ್ಚಿದ ರೀತಿಯ ಸನ್ನೆಯನ್ನು ಸೂಚಿಸುತ್ತಿದ್ದಾರೆ.

ಪ್ರಶ್ನೆ- ವಮಿಕಾ (ಕೊಹ್ಲಿ-ಅನುಷ್ಕಾ ಅವರ ಮಗಳ ಹೆಸರು) ಎಂದರೇನು? ಅವಳು ಹೇಗಿದ್ದಾಳೆ? ನಾವು ಅವಳನ್ನು ನೋಡಬಹುದೇ?

ಉತ್ತರ – ದುರ್ಗಾ ಮಾತೆಯ ಇನ್ನೊಂದು ಹೆಸರು ವಮಿಕಾ. ಇಲ್ಲ, ನಮ್ಮ ಮಗಳಿಗೆ ಸೋಶಿಯಲ್ ಮೀಡಿಯಾ ಎಂದರೇನು ಎಂಬ ಕಲ್ಪನೆ ಬರುವವರೆಗೂ ಮತ್ತು ಅವಳು ತನ್ನ ನಿರ್ಧಾರಗಳನ್ನು ತೆಗೆದುಕೊಳ್ಳುವವರೆಗೂ ನಾವು ಅವಳನ್ನು ಸೋಶಿಯಲ್ ಮೀಡಿಯಾಕ್ಕೆ ಕರೆತರಬಾರದೆಂದು ನಾವು ದಂಪತಿಗಳಾಗಿ ನಿರ್ಧರಿಸಿದ್ದೇವೆ.

ಪ್ರಶ್ನೆ- ನಿಮ್ಮ ಆಹಾರ ಪದ್ಧತಿ ಹೇಗಿದೆ?

ಉತ್ತರ – ತರಕಾರಿಗಳು, ಮೊಟ್ಟೆ, ಎರಡು ಕಪ್ ಕಾಫಿ, ಮಸೂರ, ಟ್ಯಾಂಗರಿನ್, ಸೊಪ್ಪು, ದೋಸೆ ಕೂಡ, ಆದರೆ ಎಲ್ಲವೂ ಸಮತೋಲಿತ ಪ್ರಮಾಣದಲ್ಲಿ.

ಪ್ರಶ್ನೆ- ವಿರಾಟ್ ಅವರ ಬಾಲ್ಯದಲ್ಲಿನ ಫೋಟೋ?

ಉತ್ತರ- ವಿರಾಟ್ ತನ್ನ ಬಾಲ್ಯದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ ಅವರು ಎರಡು ದಿಂಬುಗಳ ನಡುವೆ ಕುಳಿತಿದ್ದಾರೆ.

ಪ್ರಶ್ನೆ – ಇಂದಿನ ಒತ್ತಡದ ಪರಿಸ್ಥಿತಿಯನ್ನು ಹೇಗೆ ಎದುರಿಸುವುದು?

ಉತ್ತರ- ನಿಮಗೆ ಮುಖ್ಯವಾದ ವಿಷಯಗಳಿಗೆ ಗಮನ ಕೊಡಿ ಮತ್ತು ದೇವರಲ್ಲಿ ನಂಬಿಕೆ ಇಡಲು ಪ್ರಯತ್ನಿಸಿ.

ಪ್ರಶ್ನೆ-ಗೂಗಲ್​ನಲ್ಲಿ ನೀವು ಕೊನೆಯಾದಾಗಿ ಸರ್ಚ್​ ಮಾಡಿದ್ದು ಏನು?

ಉತ್ತರ- ಕ್ರಿಸ್ಟಿಯಾನೊ ರೊನಾಲ್ಡೊ ವರ್ಗಾವಣೆ

ಪ್ರಶ್ನೆ- ನೀವು ಬದಲಾಯಿಸಲು ಬಯಸುವ ನಿಮ್ಮ ಹಿಂದಿನ ಒಂದು ವಿಷಯ?

ಉತ್ತರ – ಏನೂ ಇಲ್ಲ.

ಪ್ರಶ್ನೆ- ಆರ್‌ಸಿಬಿಯಲ್ಲಿ ಅತ್ಯಂತ ತಮಾಷೆ, ಚಾಣಾಕ್ಷ ಮತ್ತು ಹೆಚ್ಚು ನಾಚಿಕೆ ಸ್ವಭಾವದ ಆಟಗಾರ ಯಾರು?

ಉತ್ತರ – ಅತ್ಯಂತ ತಮಾಷೆ – ಚಹಲ್, ಚಾಣಾಕ್ಷ – ಎಬಿ ಡಿವಿಲಿಯರ್ಸ್, ಅತ್ಯಂತ ನಾಚಿಕೆ – ಕೈಲ್ ಜೇಮ್ಸನ್

ಪ್ರಶ್ನೆ- ನೀವು ಹಂಚಿಕೊಳ್ಳಬಹುದಾದ ಭಾರತೀಯ ತಂಡದ ರಹಸ್ಯ?

ಉತ್ತರ- ಕುಚೇಷ್ಟೆ ಸ್ಟಾರ್​ಗಳ ಗುಂಪು ನಮ್ಮದು.

ಪ್ರಶ್ನೆ- ಕೆಟ್ಟ ಕಾಲದಲ್ಲಿ ನೀವು ನಿಮ್ಮನ್ನು ಹೇಗೆ ಪ್ರೇರೇಪಿಸುತ್ತೀರಿ?

ಉತ್ತರ- ನಿಮ್ಮ ದಿನಚರಿಯನ್ನು ಸರಿಯಾಗಿ ಇರಿಸಿ ಮತ್ತು ಅದು ಏನೇ ಇರಲಿ, ಅದನ್ನು ಉಳಿಸಿಕೊಳ್ಳಿ.

ಪ್ರಶ್ನೆ- ದಿನವಿಡೀ ನೀವು ಏನು ತಿನ್ನುತ್ತೀರಿ?

ಉತ್ತರ- ಬಹಳಷ್ಟು ಭಾರತೀಯ ಆಹಾರ, ಕೆಲವೊಮ್ಮೆ ಚೈನೀಸ್ ಫುಡ್. ಬಾದಾಮಿ, ಪ್ರೋಟೀನ್ ಬಾರ್, ಹಣ್ಣುಗಳು.

ಪ್ರಶ್ನೆ- ಡಬ್ಲ್ಯೂಟಿಸಿ ಫೈನಲ್‌ನ ಫೋಟೋವನ್ನು ನಿಮ್ಮ ಜರ್ಸಿಯೊಂದಿಗೆ ಹಂಚಿಕೊಳ್ಳಿ?

ಉತ್ತರ- ಕ್ಷಮಿಸಿ, ನಂತರದ ದಿನಗಳಲ್ಲಿ ಹಂಚಿಕೊಳ್ಳುತ್ತೇನೆ.

ಪ್ರಶ್ನೆ- ಕ್ಯಾಪ್ಟನ್ ಕೂಲ್ ಅವರೊಂದಿಗಿನ ನಿಮ್ಮ ಸ್ನೇಹವನ್ನು ಎರಡು ಪದಗಳಲ್ಲಿ ವಿವರಿಸಿ?

ಉತ್ತರ – ನಂಬಿಕೆ, ಗೌರವ

ಪ್ರಶ್ನೆ – ನೀವು ಕನ್ನಡವನ್ನು ಮಾತನಾಡತ್ತೀರಾ ಮತ್ತು ಅರ್ಥಮಾಡಿಕೊಳ್ಳುತ್ತೀರಾ?

ಉತ್ತರ – ಸ್ವಲ್ಪಾ, ಸ್ವಲ್ಪಾ ಬರುತ್ತೆ ಸರ್. ಆದರೆ ಸಂಪೂರ್ಣವಾಗಿ ಅರ್ಥವಾಗುವುದಿಲ್ಲ.

ಪ್ರಶ್ನೆ- ನನ್ನ ಹೆಡ್‌ಫೋನ್‌ಗಳನ್ನು ಎಲ್ಲಿ ಇರಿಸಿದ್ದೀರಿ? (ಅನುಷ್ಕಾ ಅವರ ಪ್ರಶ್ನೆ)

ಉತ್ತರ – ಪಕ್ಕದ ಮೇಜಿನ ಮೇಲೆ, ಹಾಸಿಗೆಯ ಹತ್ತಿರ. ಎಂದು ಕೊಹ್ಲಿ ಮಡದಿ ಅನುಷ್ಕಾ ಪ್ರಶ್ನೆಗೆ ಉತ್ತರಿಸಿದ್ದಾರೆ

Published On - 3:05 pm, Sun, 30 May 21

ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ