ಅದೊಂದು ಘಟನೆ ತಪ್ಪಿತಸ್ಥನನ್ನಾಗಿ ಮಾಡಿತ್ತು.. ಎಷ್ಟೋ ರಾತ್ರಿಗಳನ್ನು ನಿದ್ರೆ ಇಲ್ಲದೆ ಕಳೆದಿದ್ದೇನೆ; ರವೀಂದ್ರ ಜಡೇಜಾ

Ravindra Jadeja: ಒತ್ತಡದಿಂದಾಗಿ, ನನಗೆ ರಾತ್ರಿಯಿಡಿ ನಿದ್ರೆ ಬರುತ್ತಿರಲಿಲ್ಲ. ನಾನು ಬೆಳಿಗ್ಗೆ 4 ರಿಂದ5 ಗಂಟೆವರೆಗೆ ನಿದ್ರೆ ಬರದೆ ಒದ್ದಾಡುತ್ತಿದ್ದೆ. ನಾನು ತಂಡದೊಂದಿಗೆ ಇದ್ದೆ ಆದರೆ ಪಂದ್ಯದಲ್ಲಿ ನನ್ನನ್ನು ಆಡಿಸಲಿಲ್ಲ.

ಅದೊಂದು ಘಟನೆ ತಪ್ಪಿತಸ್ಥನನ್ನಾಗಿ ಮಾಡಿತ್ತು.. ಎಷ್ಟೋ ರಾತ್ರಿಗಳನ್ನು ನಿದ್ರೆ ಇಲ್ಲದೆ ಕಳೆದಿದ್ದೇನೆ; ರವೀಂದ್ರ ಜಡೇಜಾ
ರವೀಂದ್ರ ಜಡೇಜಾ
Follow us
ಪೃಥ್ವಿಶಂಕರ
|

Updated on: May 30, 2021 | 5:02 PM

ರವೀಂದ್ರ ಜಡೇಜಾ ಭಾರತೀಯ ತಂಡದಿಂದ ಹೊರಬಂದಾಗ ಅವರ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ರವೀಂದ್ರ ಜಡೇಜಾ ಪ್ರಸ್ತುತ ಭಾರತ ತಂಡ ಸೇರಿದಂತೆ ವಿಶ್ವದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿ ಆಯ್ಕೆಯಾಗುತ್ತಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ, ಅವರು ತಮ್ಮ ಬೌಲಿಂಗ್ ಮತ್ತು ಬ್ಯಾಟಿಂಗ್‌ನಿಂದ ಮಾತ್ರವಲ್ಲದೆ ತಮ್ಮ ಫೀಲ್ಡಿಂಗ್‌ನಲ್ಲೂ ಎಲ್ಲರ ಮನ ಗೆದ್ದಿದ್ದಾರೆ. ಪ್ರಸ್ತುತ ಅವರು ಭಾರತೀಯ ತಂಡದಲ್ಲಿ ಫಿನಿಶರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆದರೆ ಒತ್ತಡದಿಂದಾಗಿ ಜಡೇಜಾಗೆ ರಾತ್ರಿ ಮಲಗಲು ಸಾಧ್ಯವಾಗದ ಸಮಯವಿತ್ತು ಎಂಬುದನ್ನು ಸ್ವತಃ ಜಡೇಜಾ ಅವರೆ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

2017 ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಭಾರತ ಸೋತಿತು. ನಂತರ ಜಡೇಜಾ ಅವರನ್ನು ಅಂತಿಮ 11 ರಿಂದ ಕೈಬಿಡಲಾಯಿತು. ಈ ಬಾರಿ ಅವರು ಸುಮಾರು ಒಂದೂವರೆ ವರ್ಷ ಕ್ರಿಕೆಟ್‌ನಿಂದ ದೂರವಾಗಿದ್ದರು. ಏತನ್ಮಧ್ಯೆ, ಒತ್ತಡದಿಂದಾಗಿ, ನನಗೆ ರಾತ್ರಿಯಿಡಿ ನಿದ್ರೆ ಬರುತ್ತಿರಲಿಲ್ಲ. ನಾನು ಬೆಳಿಗ್ಗೆ 4 ರಿಂದ5 ಗಂಟೆವರೆಗೆ ನಿದ್ರೆ ಬರದೆ ಒದ್ದಾಡುತ್ತಿದ್ದೆ. ನಾನು ತಂಡದೊಂದಿಗೆ ಇದ್ದೆ ಆದರೆ ಪಂದ್ಯದಲ್ಲಿ ನನ್ನನ್ನು ಆಡಿಸಲಿಲ್ಲ. ಈ ಸಮಯದಲ್ಲಿ ನಾನು ತಂಡಕ್ಕೆ ಹೇಗೆ ಮರಳಬಹುದು? ಅದನ್ನೇ ನಾನು ಯೋಚಿಸುತ್ತಿದ್ದೆ ಎಂದು ಜಡೇಜಾ ಪ್ರತಿಕ್ರಿಯೆ ನೀಡಿದರು.

ಇಂಗ್ಲೆಂಡ್ ಪ್ರವಾಸದಲ್ಲಿ’ಪುನರಾಗಮನ’ ಒಂದು ವರ್ಷಕ್ಕೂ ಹೆಚ್ಚು ಕಾಲ ಆಡದ ಜಡೇಜಾ, ಇಂಗ್ಲೆಂಡ್‌ನ ಓವಲ್‌ನಲ್ಲಿ ನಡೆದ 2018 ರ ಟೆಸ್ಟ್ ತಂಡಕ್ಕೆ ಮರಳಿದರು. ಅವರು ಪಂದ್ಯದಲ್ಲಿ ನಿರ್ಣಾಯಕ 86 ರನ್ ಗಳಿಸಿದರು. ಭಾರತ 160 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತು, ಜಡೇಜಾ ಇನ್ನಿಂಗ್ಸ್‌ನ್ನು 332 ರನ್‌ಗಳವರೆಗೆ ತೆಗೆದುಕೊಂಡು ಹೋದರು. ಆ ನಂತರ ತಂಡವನ್ನು ಸೇರಿಕೊಂಡ ಜಡೇಜಾ ಹಿಂತಿರುಗಿ ನೋಡಲಿಲ್ಲ. ಇದನ್ನು ವಿವರಿಸಿದ ಜಡೇಜಾ, ಆ ಟೆಸ್ಟ್ ಪಂದ್ಯವು ನನಗೆ ಎಲ್ಲವನ್ನೂ ಬದಲಾಯಿಸಿತು, ನನ್ನ ಆತ್ಮವಿಶ್ವಾಸ ಮತ್ತೆ ಬಂದಿತು. ಇದಲ್ಲದೆ, ಹಾರ್ದಿಕ್ ಪಾಂಡ್ಯ ಅವರ ಗಾಯದಿಂದಾಗಿ ನಾನು ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದೇನೆ. ಅದು ನನ್ನ ಆಟವನ್ನು ಇನ್ನಷ್ಟು ಉತ್ತಮಗೊಳಿಸಿತು ಎಂದು ಹೇಳಿದರು.

ಜಡೇಜಾ ಏಕೆ ವಿಲನ್ ಆದರು? ರವೀಂದ್ರ ಜಡೇಜಾ ಮೊದಲಿನಿಂದಲೂ ಉತ್ತಮ ಎಡಗೈ ಆಲ್‌ರೌಂಡರ್. ಅವರಿಗೆ ತಂಡದಲ್ಲಿ ಶಾಶ್ವತ ಸ್ಥಾನ ನೀಡಲಾಯಿತು. ಆದರೆ ಬದ್ದ ವೈರಿ ಪಾಕಿಸ್ತಾನ ನಡುವಿನ 2017 ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ ಜಡೇಜಾಗೆ ಉತ್ತಮವಾಗಿರಲ್ಲಿಲ್ಲ ಅಲ್ಲದೆ ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಬೇಕಾಯಿತು. ಇದರಿಂದ ಜಡೇಜಾ ಅವರನ್ನು ತಂಡದಿಂದ ಕೈಬಿಡಲಾಯಿತು. ಇದಕ್ಕೆ ಕಾರಣ, ಪಾಕಿಸ್ತಾನದ 338 ರ ದೊಡ್ಡ ಗುರಿಯನ್ನು ಬೆನ್ನಟ್ಟುವಾಗ, ಪಾಕಿಸ್ತಾನದ ಘಾತುಕ ಬೌಲಿಂಗ್ ಹಿನ್ನೆಲೆಯಲ್ಲಿ ಭಾರತದ ತಂಡವು ಅಕ್ಷರಶಃ ಕುಸಿಯಿತು. ವಿಜಯದ ದೊಡ್ಡ ಗುರಿಯನ್ನು ಬೆನ್ನಟ್ಟುವಾಗ ಭಾರತದ ಬ್ಯಾಟ್ಸ್‌ಮನ್‌ಗಳು ಒಬ್ಬೋಬ್ಬರಾಗಿ ಪೆವಿಲಿಯನ್ ಪರೆಡ್ ನಡೆಸುತ್ತಿದ್ದರು. ಆ ಸಮಯದಲ್ಲಿ, ಹಾರ್ದಿಕ್ ಏಕಾಂಗಿಯಾಗಿ ಹೋರಾಡುತ್ತಿದ್ದರು ಮತ್ತು ಇನ್ನಿಂಗ್ಸ್ ಅನ್ನು ಚೇತರಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಈ ಮಧ್ಯೆ, ಜಡೇಜಾ ಅವರ ತಪ್ಪು ಕರೆ ಪಾಂಡ್ಯ ವಿಕೆಟ್​ ಪತನಗೊಳ್ಳಲು ಕಾರಣವಾಯಿತು ಮತ್ತು ಭಾರತ ಪಂದ್ಯವನ್ನು ಕಳೆದುಕೊಂಡಿತು. ಆದ್ದರಿಂದ ಸೋಲಿನ ಎಲ್ಲಾ ಆಪಾದನೆಗಳು ಜಡೇಜಾ ಅವರ ಮೇಲೆ ಬಿದ್ದವು ಮತ್ತು ಅವರನ್ನು ತಂಡದಿಂದ ಕೈಬಿಡಲಾಯಿತು.

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ