AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲ್ಯ ಸ್ನೇಹಿತರಾಗಿದ್ದ ಅನುಷ್ಕಾ ಶರ್ಮಾ ಮತ್ತು ಸಾಕ್ಷಿ ಧೋನಿ; ಪುರಾವೆ ಒದಗಿಸುತ್ತಿದೆ ವೈರಲ್​ ಫೋಟೋ

Anushka Sharma | Sakshi Dhoni: ಸೋಶಿಯಲ್​ ಮೀಡಿಯಾದಲ್ಲಿ ಅನುಷ್ಕಾ ಶರ್ಮಾ ಮತ್ತು ಸಾಕ್ಷಿ ಅಭಿಮಾನಿಗಳು ಈ ಫೋಟೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅನುಷ್ಕಾ ಹಾಗೂ ಸಾಕ್ಷಿ ಒಂದೇ ಫ್ರೇಮ್​ನಲ್ಲಿ ಕಾಣಿಸಿಕೊಂಡಿರುವುದು ನೋಡಿ ಫ್ಯಾನ್ಸ್​ಗೆ ಅಚ್ಚರಿ ಆಗಿದೆ. ಅದರ ಹಿಂದಿನ ಫ್ಲ್ಯಾಶ್​ಬ್ಯಾಕ್​ ಏನು ಎಂಬ ಕೌತುಕಕ್ಕೂ ಈಗ ತೆರೆಬಿದ್ದಿದೆ.

ಬಾಲ್ಯ ಸ್ನೇಹಿತರಾಗಿದ್ದ ಅನುಷ್ಕಾ ಶರ್ಮಾ ಮತ್ತು ಸಾಕ್ಷಿ ಧೋನಿ; ಪುರಾವೆ ಒದಗಿಸುತ್ತಿದೆ ವೈರಲ್​ ಫೋಟೋ
ಅನುಷ್ಕಾ ಶರ್ಮಾ ಮತ್ತು ಸಾಕ್ಷಿ ಧೋನಿ
ಮದನ್​ ಕುಮಾರ್​
| Edited By: |

Updated on: May 15, 2021 | 3:33 PM

Share

ಬಾಲಿವುಡ್​ನ ಖ್ಯಾತ ನಟಿ ಅನುಷ್ಕಾ ಶರ್ಮಾ ಮತ್ತು ಧೋನಿ ಪತ್ನಿ ಸಾಕ್ಷಿ ನಡುವೆ ಇರುವ ಕಾಮನ್​ ಕನೆಕ್ಷನ್​ ಏನು? ಇಬ್ಬರೂ ಸ್ಟಾರ್​ ಕ್ರಿಕೆಟ್​ ಆಟಗಾರರ ಪತ್ನಿಯರು. ಇದು ಎಲ್ಲರಿಗೂ ಗೊತ್ತಿರುವ ಉತ್ತರ. ಆದರೆ ಅವರು ಕ್ರಿಕೆಟಿಗರ ಪತ್ನಿಯರಾಗುವುದಕ್ಕೂ ಮುನ್ನವೇ ಪರಸ್ಪರ ಸ್ನೇಹಿತೆಯರಾಗಿದ್ದರು ಎಂಬುದು ಅಚ್ಚರಿಯ ವಿಚಾರ. ಅದು ಕೂಡ ತುಂಬ ಚಿಕ್ಕ ವಯಸ್ಸಿನಲ್ಲಿ ಅವರು ಕ್ಲಾಸ್​ಮೇಟ್ಸ್​ ಆಗಿದ್ದರು. ಹಾಗಂತ ಇದು ಯಾವುದೋ ಕಟ್ಟುಕತೆ ಅಲ್ಲ. ಅನುಷ್ಕಾ ಮತ್ತು ಸಾಕ್ಷಿ ಬಾಲ್ಯದ ಸ್ನೇಹಿತೆಯರು ಎಂಬುದಕ್ಕೆ ಈಗ ಒಂದು ಫೋಟೋ ಪುರಾವೆ ಒದಗಿಸುತ್ತಿದೆ.

ಸೋಶಿಯಲ್​ ಮೀಡಿಯಾದಲ್ಲಿ ಅನುಷ್ಕಾ ಶರ್ಮಾ ಮತ್ತು ಸಾಕ್ಷಿ ಅಭಿಮಾನಿಗಳು ಈ ಫೋಟೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಶಾಲೆಗೆ ಹೋಗುತ್ತಿದ್ದಾಗ ಅನುಷ್ಕಾ ಹಾಗೂ ಸಾಕ್ಷಿ ಒಂದೇ ಫ್ರೇಮ್​ನಲ್ಲಿ ಕಾಣಿಸಿಕೊಂಡಿರುವ ಫೋಟೋ ನೋಡಿ ಫ್ಯಾನ್ಸ್​ಗೆ ಅಚ್ಚರಿ ಆಗಿದೆ. ಅದರ ಹಿಂದಿನ ಫ್ಲ್ಯಾಶ್​ಬ್ಯಾಕ್​ ಏನು ಎಂಬ ಕೌತುಕಕ್ಕೂ ಈಗ ತೆರೆಬಿದ್ದಿದೆ. ಅಸ್ಸಾಂನ ಒಂದು ಶಾಲೆಯಲ್ಲಿ ಅನುಷ್ಕಾ ಹಾಗೂ ಸಾಕ್ಷಿ ಸಹಪಾಠಿಗಳಾಗಿದ್ದರು.

ಅನುಷ್ಕಾ ಶರ್ಮಾ ತಂದೆ ಅಜಯ್​ ಕುಮಾರ್​ ಶರ್ಮಾ ಅವರು ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಅಸ್ಸಾಂನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಅಲ್ಲಿನ ಒಂದು ಶಾಲೆಗೆ ಅನುಷ್ಕಾ ಸೇರಿಕೊಂಡಿದ್ದರು. ಅದೇ ಶಾಲೆಯಲ್ಲಿ ಸಾಕ್ಷಿ ಕೂಡ ಓದುತ್ತಿದ್ದರು. 1994ರ ಆ ಸಮಯದಲ್ಲಿ ಇಬ್ಬರೂ ಸ್ನೇಹಿತೆಯರಾಗಿದ್ದರು. ನಂತರವೂ ಅವರ ಸ್ನೇಹ ಮುಂದುವರಿಯಿತು. ವಿದ್ಯಾಭ್ಯಾಸ ಮುಗಿಸಿ ಅನುಷ್ಕಾ ನಟನೆ ಕಡೆಗೆ ಒಲವು ತೋರಿಸಿದರು. ಹೋಟೆಲ್​ ಮ್ಯಾನೇಜ್​ಮೆಂಟ್​ ಕ್ಷೇತ್ರಕ್ಕೆ ಸಾಕ್ಷಿ ಎಂಟ್ರಿ ನೀಡಿದರು. ನಂತರ ಅವರು ಧೋನಿಗೆ ಪರಿಚಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಸಿನಿಮಾ ಕೆಲಸಗಳ ಜೊತೆಯಲ್ಲಿ ಮಗುವಿನ ಪಾಲನೆಯಲ್ಲೂ ಅನುಷ್ಕಾ ಶರ್ಮಾ ತೊಡಗಿಕೊಂಡಿದ್ದಾರೆ. ಸದ್ಯ ದೇಶದಲ್ಲಿ ಕೊರೊನಾ ವೈರಸ್​ ಹಾವಳಿ ಮಿತಿ ಮೀರಿದೆ. ಈ ಸಂದರ್ಭದಲ್ಲಿ ಪತಿ ವಿರಾಟ್​ ಕೊಯ್ಲಿ ಜೊತೆಗೆ ಸೇರಿಕೊಂಡು ಅವರು ದೇಣಿಗೆ ಸಂಗ್ರಹ ಮಾಡಿದ್ದಾರೆ. 10 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದ್ದು ಕೊವಿಡ್​ ವಿರುದ್ಧದ ಹೋರಾಟಕ್ಕೆ ಅದನ್ನು ಬಳಸಲಾಗುವುದು ಎಂದು ಹೇಳಿದ್ದಾರೆ. ವಿರಾಟ್​-ಅನುಷ್ಕಾ 2 ಕೋಟಿ ರೂ. ದೇಣಿಗೆ ನೀಡುವ ಮೂಲಕ ಇತರೆ ಸೆಲೆಬ್ರಿಟಿಗಳಿಗೆ ಮಾದರಿ ಆಗಿದ್ದಾರೆ.

ಇದನ್ನೂ ಓದಿ:

ಪಾಕಿಸ್ತಾನ, ಅಮೆರಿಕದಲ್ಲೂ ಅನುಷ್ಕಾ ಶರ್ಮಾ ಹೋಲುವ ನಟಿಯರು; ಒಬ್ಬರಿಗೆ ಇಷ್ಟ, ಮತ್ತೊಬ್ಬರಿಗೆ ಕಷ್ಟ

ಕೊರೊನಾ ವಿರುದ್ಧದ ಹೋರಾಟಕ್ಕೆ 11 ಕೋಟಿ ರೂ. ದೇಣಿಗೆ ಸಂಗ್ರಹಿಸಿದ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ