AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಯವಿಟ್ಟು ನನ್ನ ಕೊರೊನಾ ವರದಿಯ ಬಗ್ಗೆ ಯಾವುದೇ ವದಂತಿಗಳನ್ನು ಹರಡಬೇಡಿ; ವೃದ್ಧಿಮಾನ್ ಸಹಾ

ನನ್ನ ಕ್ವಾರಂಟೈನ್ ಅವಧಿ ಇನ್ನೂ ಮುಗಿದಿಲ್ಲ. ವಾಡಿಕೆಯ ತಪಾಸಣೆಯಂತೆ, ಎರಡು ಪರೀಕ್ಷೆಗಳು ನಡೆದಿವೆ, ಅವುಗಳಲ್ಲಿ ಒಂದು ನೆಗೆಟಿವ್ ಮತ್ತು ಇನ್ನೊಂದು ಪಾಸಿಟಿವ್ ಎಂದು ಬಂದಿದೆ.

ದಯವಿಟ್ಟು ನನ್ನ ಕೊರೊನಾ ವರದಿಯ ಬಗ್ಗೆ ಯಾವುದೇ ವದಂತಿಗಳನ್ನು ಹರಡಬೇಡಿ; ವೃದ್ಧಿಮಾನ್ ಸಹಾ
ವೃದ್ಧಿಮಾನ್ ಸಹಾ
ಪೃಥ್ವಿಶಂಕರ
| Updated By: Skanda|

Updated on: May 15, 2021 | 12:09 PM

Share

ಐಪಿಎಲ್ 2021ರಲ್ಲಿ ಕೊವಿಡ್ ಪಾಸಿಟಿವ್ ಎಂದು ಕಂಡುಬಂದ ಆಟಗಾರರಲ್ಲಿ ಭಾರತೀಯ ಟೆಸ್ಟ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ವೃದ್ಧಿಮಾನ್ ಸಹಾ ಒಬ್ಬರು. ಕೊವಿಡ್ 19 ರ ಸತತ ಪ್ರಕರಣಗಳ ನಂತರವೇ ಲೀಗ್‌ನ 14 ನೇ ಆವೃತ್ತಿಯನ್ನು ಅನಿರ್ದಿಷ್ಟವಾಗಿ ಮುಂದೂಡಲಾಯಿತು. ಸಹಾ ಅವರ ಕೊವಿಡ್ ವರದಿ ಶುಕ್ರವಾರ ಮತ್ತೊಮ್ಮೆ ಪಾಸಿಟಿವ್ ಬಂದಿದ್ದು, ಇದರ ನಂತರ ಅವರು ತಮ್ಮ ಬಗ್ಗೆ ವದಂತಿಗಳನ್ನು ಹರಡಬಾರದು ಎಂದು ಸಾಮಾಜಿಕ ಮಾಧ್ಯಮಗಳ ಮೂಲಕ ಜನರಿಗೆ ಮನವಿ ಮಾಡಿದ್ದಾರೆ. ಅವರ ಒಂದು ವರದಿ ಪಾಸಿಟಿವ್ ಆಗಿದ್ದರೆ, ಇನ್ನೊಂದು ವರದಿ ನೆಗೆಟಿವ್ ಆಗಿದೆ ಎಂದು ಸಹಾ ಹೇಳಿದ್ದಾರೆ. ಸಹಾ ಪ್ರಸ್ತುತ ದೆಹಲಿಯಲ್ಲಿ ಕ್ವಾರಂಟೈನ್‌ನಲ್ಲಿದ್ದು, ಮೊದಲಿಗಿಂತ ಉತ್ತಮವಾಗಿದ್ದಾರೆ.

ಸಹಾ ಟ್ವೀಟ್ ಮಾಡಿ, ನನ್ನ ಕ್ವಾರಂಟೈನ್ ಅವಧಿ ಇನ್ನೂ ಮುಗಿದಿಲ್ಲ. ವಾಡಿಕೆಯ ತಪಾಸಣೆಯಂತೆ, ಎರಡು ಪರೀಕ್ಷೆಗಳು ನಡೆದಿವೆ, ಅವುಗಳಲ್ಲಿ ಒಂದು ನೆಗೆಟಿವ್ ಮತ್ತು ಇನ್ನೊಂದು ಪಾಸಿಟಿವ್ ಎಂದು ಬಂದಿದೆ. ನಾನು ಎಲ್ಲರಿಗೂ ಮನವಿ ಮಾಡುತ್ತೇನೆ ನನ್ನ ಕೊರೊನಾ ವರದಿಯ ಬಗ್ಗೆ ಯಾವುದೇ ವದಂತಿಗಳನ್ನು ಹರಡಬೇಡಿ ಎಂದಿದ್ದಾರೆ.

ಮೇ 4 ರಂದು ಪಾಸಿಟಿವ್ ಮೇ 4 ರಂದು ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಮೊದಲು ಸಹಾ ಕೊರೊನಾ ಪಾಸಿಟಿವ್ ಆಗಿದ್ದರು. ಐಪಿಎಲ್ 2021 ಅನ್ನು ಅದೇ ದಿನ ಮುಂದೂಡಲಾಯಿತು. ಎರಡನೇ ವರದಿಯ ಪಲಿತಾಂಶ ನೆಗೆಟಿವ್ ಬರದ ಕಾರಣ, ಸಹಾ ದೆಹಲಿಯಲ್ಲಿ ಕ್ವಾರಂಟೈನ್ ಅನ್ನು ಮುಂದುವರಿಸಬೇಕಾಗುತ್ತದೆ ಮತ್ತು ಪರೀಕ್ಷೆಯ ಫಲಿತಾಂಶವು ನೆಗೆಟಿವ್ ಆದಾಗ ಮಾತ್ರ ವೈದ್ಯರು ಅವರನ್ನು ಕ್ವಾರಂಟೈನ್​ನಿಂದ ಬಿಡುಗಡೆ ಮಾಡುತ್ತಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ತಂಡ ಆಯ್ಕೆ ಸಹಾ ಶೀಘ್ರವಾಗಿ ಚೇತರಿಸಿಕೊಳ್ಳುತ್ತಾನೆ ಎಂದು ಟೀಮ್ ಇಂಡಿಯಾ ಕೂಡ ಭರವಸೆ ಹೊಂದಿದೆ. ಇತ್ತೀಚೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗಾಗಿ ಬಿಸಿಸಿಐ ಆಯ್ಕೆ ಮಾಡಿದ ತಂಡದಲ್ಲಿ ಸಹಾ ಕೂಡ ಇದ್ದಾರೆ. ಆದರೆ ಕೊರೊನಾ ಆಗಿರುವುದರಿಂದ ಈಗ ಅವರ ಫಿಟ್‌ನೆಸ್‌ನ ಆಧಾರದ ಮೇಲೆ ಮಾತ್ರ ತಂಡದಲ್ಲಿ ಸ್ಥಾನ ಪಡೆಯುವುದನ್ನು ಖಚಿತಪಡಿಸಲಾಗುತ್ತದೆ. ತಂಡವನ್ನು ಘೋಷಿಸುವಾಗ, ಬಿಸಿಸಿಐ ಸಹಾ ಬಗ್ಗೆ ಇಂಗ್ಲೆಂಡ್‌ಗೆ ತೆರಳುವುದು ಅವರ ಫಿಟ್‌ನೆಸ್‌ನ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿತ್ತು.

ಇದನ್ನೂ ಓದಿ: ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದರು! ಪಾಕ್ ಕ್ರಿಕೆಟಿಗನ ಆರೋಪ; ಐಪಿಎಲ್​ನಲ್ಲಿ ಆಡುವ ಅವಕಾಶ?

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!