ಈ ರಾಶಿಯವರಿಗೆ ವಿದೇಶದಲ್ಲಿ ಉದ್ಯೋಗ ಸಿಗುವ ಭಾಗ್ಯ: ಹೊಸ ಜವಾಬ್ದಾರಿ ಖಂಡಿತ
ಮಾರ್ಚ್ 15ರಿಂದ 21ರವರೆಗಿನ ಈ ವಾರವು ಉದ್ಯೋಗಸ್ಥರಿಗೆ ವೃತ್ತಿ ಪ್ರಗತಿ ಮತ್ತು ವ್ಯಾಪಾರದಲ್ಲಿ ಲಾಭ ತರಲಿದೆ. ಕೆಲವರಿಗೆ ವಿದೇಶ ಪ್ರವಾಸದ ಆಸೆ ಈಡೇರಲಿದ್ದು, ಹೊಸ ಜವಾಬ್ದಾರಿಗಳು ಉನ್ನತ ಸ್ಥಾನಕ್ಕೆ ದಾರಿಯಾಗಲಿವೆ. ಉದ್ಯಮ ಆರಂಭಿಸಲು ಅಥವಾ ವಿಸ್ತರಿಸಲು ಉತ್ತಮ ಅವಕಾಶಗಳಿವೆ. ಆಂತರಿಕ ಕಲಹಗಳು ಶಮನವಾಗಿ, ಒತ್ತಡ ಸುಧಾರಣೆಗೆ ಪ್ರಯತ್ನಗಳು ಫಲ ನೀಡಲಿವೆ. ಪ್ರತಿ ರಾಶಿಯವರು ತಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನಿರೀಕ್ಷಿಸಬಹುದು.

ಮಾರ್ಚ್ 15ರಿಂದ 21ರವರೆಗೆ ಮೂರನೇ ವಾರ. ಉದ್ಯೋಗಸ್ಥರಿಗೆ ವಿದೇಶ ಪ್ರವಾಸ ಆಸೆ ಅಧಿಕ, ಕಿರಿಕಿರಿ ಕೆಲವರಿಗೆ, ಒತ್ತಡದ ಸುಧಾರಣೆಗೆ ಪ್ರಯತ್ನ ಇವೆಲ್ಲ ಬೇಕಾಗುವುದು. ಅಂತರಿಕ ಕಲಹ ಶಮನವಾಗಲಿದೆ. ಮೇಷ:
ಉದ್ಯೋಗದಲ್ಲಿ ಸ್ಥಿರತೆ ಇರಲಿದೆ. ಹೊಸ ಜವಾಬ್ದಾರಿಗಳು ಉನ್ನತ ಸ್ಥಾನಕ್ಕೆ ದಾರಿಯಾಗಲಿವೆ. ಉದ್ಯಮ ಸ್ಥಾಪನೆಗೆ ಇದು ಸಕಾಲ. ವೃತ್ತಿ ನಿಮಿತ್ತ ಕಿರು ಪ್ರಯಾಣ ಸಂಭವಿಸುವುದು. ಹಿರಿಯ ಅಧಿಕಾರಿಗಳ ಬೆಂಬಲ ಸಿಗಲಿದೆ.
ವೃಷಭ:
ವೃತ್ತಿ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ ಯಶಸ್ಸು ಸಿಗಲಿದೆ. ವಿದೇಶಿ ಕಂಪನಿಗಳಲ್ಲಿ ಉದ್ಯೋಗಾವಕಾಶ ಅಥವಾ ಉದ್ಯೋಗದ ಕಾರಣ ದೂರದ ಪ್ರಯಾಣವಿರುತ್ತದೆ. ಹೊಸ ಉದ್ಯಮ ಆರಂಭಿಸಲು ಹೂಡಿಕೆದಾರರು ಲಭ್ಯವಾಗುವ ಸಾಧ್ಯತೆ ಇದೆ.
ಮಿಥುನ:
ಕೆಲಸದಲ್ಲಿ ಅತಿಯಾದ ಒತ್ತಡವಿದ್ದರೂ ಸ್ಥಾನಮಾನ ಹೆಚ್ಚಾಗಲಿದೆ. ಸರ್ಕಾರಿ ಕೆಲಸಗಳಿಗೆ ಪ್ರಯತ್ನಿಸುವವರಿಗೆ ಶುಭ ಸುದ್ದಿ ಸಿಗಲಿದೆ. ಉದ್ಯಮದಲ್ಲಿ ಲಾಭಾಂಶ ಹೆಚ್ಚಾಗಲಿದ್ದು, ಹೊಸ ಪಾಲುದಾರಿಕೆ ವ್ಯವಹಾರಕ್ಕೆ ಉತ್ತಮ ಸಮಯ.
ಕರ್ಕಾಟಕ:
ಉದ್ಯೋಗದಲ್ಲಿ ವರ್ಗಾವಣೆ ಅಥವಾ ಬದಲಾವಣೆಯ ಸಾಧ್ಯತೆ ದಟ್ಟವಾಗಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಮತ್ತು ಉನ್ನತ ಹುದ್ದೆ ಲಭಿಸಲಿದೆ. ಉದ್ಯಮ ಸ್ಥಾಪನೆಗೆ ಕುಟುಂಬದ ಸಹಕಾರ ದೊರೆಯಲಿದ್ದು, ಆತ್ಮವಿಶ್ವಾಸ ಹೆಚ್ಚಾಗುವುದು.
ಸಿಂಹ:
ನಿಮ್ಮ ನಾಯಕತ್ವ ಗುಣಕ್ಕೆ ಮನ್ನಣೆ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ಹೊಂದುವ ಯೋಗವಿದೆ. ವೃತ್ತಿ ಸಂಬಂಧಿತ ಪ್ರಯಾಣಗಳು ಲಾಭದಾಯಕವಾಗಿರಲಿವೆ. ಹೊಸ ಉದ್ಯಮ ಆರಂಭಿಸಲು ತಾಂತ್ರಿಕ ನೆರವು ಹಾಗೂ ಆರ್ಥಿಕ ಸೌಲಭ್ಯ ದೊರೆಯಲಿದೆ.
ಕನ್ಯಾ:
ಸ್ಥಿರವಾದ ಉದ್ಯೋಗ ಜೀವನವಿರಲಿದೆ. ಕೆಲಸದ ಸ್ಥಳದಲ್ಲಿ ಹೊಸ ಬದಲಾವಣೆಗಳು ಕಂಡುಬರುತ್ತವೆ. ವ್ಯಾಪಾರ ವಿಸ್ತರಣೆಗೆ ಇದು ಪೂರಕ ಸಮಯ. ದೀರ್ಘಕಾಲದ ಉದ್ಯೋಗದ ಸಮಸ್ಯೆಗಳು ಬಗೆಹರಿದು ಮಾನಸಿಕ ಶಾಂತಿ ಸಿಗಲಿದೆ.
ತುಲಾ:
ವೃತ್ತಿ ಜೀವನದಲ್ಲಿ ದೊಡ್ಡ ಬದಲಾವಣೆ ನಿರೀಕ್ಷಿಸಬಹುದು. ಪ್ರತಿಷ್ಠಿತ ಸಂಸ್ಥೆಗಳಿಂದ ಉದ್ಯೋಗದ ಆಫರ್ ಬರಬಹುದು. ಉದ್ಯಮದಲ್ಲಿ ನಾವೀನ್ಯತೆ ತರಲು ಪ್ರಯತ್ನಿಸುವಿರಿ. ಉದ್ಯೋಗದ ನಿಮಿತ್ತ ರಾಜ್ಯದ ಹೊರಗೆ ಪ್ರಯಾಣಿಸುವ ಸಾಧ್ಯತೆ ಇದೆ.
ವೃಶ್ಚಿಕ:
ಉದ್ಯೋಗದಲ್ಲಿ ಅಸ್ಥಿರತೆ ದೂರವಾಗಿ ನೆಮ್ಮದಿ ಸಿಗಲಿದೆ. ಉನ್ನತ ವ್ಯಾಸಂಗದ ಜೊತೆಗೆ ಉದ್ಯೋಗ ಮಾಡುವವರಿಗೆ ಪ್ರಗತಿ ಇರಲಿದೆ. ಸ್ವಂತ ಉದ್ಯಮ ಆರಂಭಿಸಲು ತಜ್ಞರ ಸಲಹೆ ಪಡೆಯುವುದು ಉತ್ತಮ. ಕಠಿಣ ಸವಾಲುಗಳನ್ನು ಜಯಿಸುವಿರಿ.
ಧನು:
ಭಾಗ್ಯೋದಯದ ಸಮಯವಿದು. ಉದ್ಯೋಗದಲ್ಲಿ ಬಡ್ತಿ ಮತ್ತು ಸಂಬಳ ಹೆಚ್ಚಳದ ಸೂಚನೆ ಇದೆ. ಉದ್ಯಮ ಸ್ಥಾಪನೆಗೆ ಬೇಕಾದ ಭೂಮಿ ಅಥವಾ ಕಟ್ಟಡದ ಯೋಗವಿದೆ. ವೃತ್ತಿ ನಿಮಿತ್ತ ಪ್ರವಾಸಗಳು ಯಶಸ್ವಿಯಾಗಿ ಮುಕ್ತಾಯಗೊಳ್ಳಲಿವೆ.
ಮಕರ:
ಉದ್ಯೋಗದಲ್ಲಿ ಶಿಸ್ತು ಮತ್ತು ಸಮಯ ಪಾಲನೆ ನಿಮಗೆ ಉನ್ನತ ಸ್ಥಾನ ತಂದುಕೊಡಲಿದೆ. ಹಳೆಯ ಉದ್ಯಮದಲ್ಲಿ ಲಾಭ ಹೆಚ್ಚಾಗಲಿದ್ದು, ಹೊಸ ಶಾಖೆ ತೆರೆಯಲು ನಿರ್ಧರಿಸುವಿರಿ. ಕೆಲಸದ ಒತ್ತಡದ ನಡುವೆಯೂ ಯಶಸ್ಸು ನಿಮ್ಮದಾಗಲಿದೆ.
ಕುಂಭ:
ವೃತ್ತಿ ಬದಲಾವಣೆ ಲಾಭದಾಯಕವಾಗಿರಲಿದೆ. ಸೃಜನಶೀಲ ಕ್ಷೇತ್ರದಲ್ಲಿರುವವರಿಗೆ ಉತ್ತಮ ಅವಕಾಶಗಳು ಸಿಗಲಿವೆ. ಹೊಸ ಸ್ಟಾರ್ಟ್‌ಅಪ್ ಆರಂಭಿಸಲು ಇದು ಶುಭ ಸಮಯ. ವಿದೇಶಿ ಪ್ರವಾಸ ಅಥವಾ ದೂರದ ಊರಿಗೆ ಪ್ರಯಾಣ ಬೆಳೆಸುವಿರಿ.
ಮೀನ:
ಉದ್ಯೋಗದಲ್ಲಿ ಸ್ಥಿರತೆ ಕಾಯ್ದುಕೊಳ್ಳುವಿರಿ. ಹಿರಿಯರ ಮಾರ್ಗದರ್ಶನದಿಂದ ಉನ್ನತ ಹುದ್ದೆ ಅಲಂಕರಿಸುವಿರಿ. ಉದ್ಯಮದಲ್ಲಿ ಹೂಡಿಕೆ ಮಾಡಲು ಹಣಕಾಸಿನ ನೆರವು ಸಿಗಲಿದೆ. ವೃತ್ತಿ ಜೀವನದಲ್ಲಿ ಮಹತ್ವದ ತಿರುವು ಪಡೆಯುವ ಸಾಧ್ಯತೆ ಇದೆ.
– ಲೋಹಿತ ಹೆಬ್ಬಾರ್ – 8762924271
