AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಗಸ್ಟ್ ಮಾಸಿಕ ರಾಶಿ ಭವಿಷ್ಯ: ಯಾವ ರಾಶಿಗೆ ಧನಲಾಭ, ಯಾರಿಗೆ ಉದ್ಯೋಗದಲ್ಲಿ ಪ್ರಗತಿ?

ಆಗಸ್ಟ್ ತಿಂಗಳಿನಲ್ಲಿ ಕರ್ಕಾಟಕದಲ್ಲಿ ಉಚ್ಚ ಗುರು, ಸಿಂಹದಲ್ಲಿ ಸೂರ್ಯ-ಬುಧ, ಕನ್ಯಾದಲ್ಲಿ ನೀಚ ಶುಕ್ರ, ಮಿಥುನದಲ್ಲಿ ಮಂಗಳ ಹಾಗೂ ಮೀನದಲ್ಲಿ ಶನಿ-ಚಂದ್ರರ ವಿಶಿಷ್ಟ ಗ್ರಹ ಸಂಚಾರವಿದೆ. ಈ ಪ್ರಮುಖ ಗ್ರಹಗಳ ಸ್ಥಾನ ಬದಲಾವಣೆಯು ೧೨ ರಾಶಿಗಳಾದ್ಯಂತ ವೈಯಕ್ತಿಕ, ವೃತ್ತಿ ಮತ್ತು ಆರ್ಥಿಕ ಜೀವನದ ಮೇಲೆ ಮಹತ್ತರ ಪ್ರಭಾವ ಬೀರಲಿದೆ. ನಿಮ್ಮ ರಾಶಿಗೆ ಆಗಸ್ಟ್ ತಿಂಗಳು ತರಲಿರುವ ಅದೃಷ್ಟ, ಸವಾಲು ಮತ್ತು ಪರಿಹಾರಗಳ ಸಮಗ್ರ ವಿಶ್ಲೇಷಣೆ ಇಲ್ಲಿದೆ.

ಆಗಸ್ಟ್ ಮಾಸಿಕ ರಾಶಿ ಭವಿಷ್ಯ: ಯಾವ ರಾಶಿಗೆ ಧನಲಾಭ, ಯಾರಿಗೆ ಉದ್ಯೋಗದಲ್ಲಿ ಪ್ರಗತಿ?
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Jul 31, 2026 | 4:25 PM

Share

​ಆಗಸ್ಟ್​ ತಿಂಗಳಿನಲ್ಲಿ ಕರ್ಕಾಟಕದಲ್ಲಿ ಉಚ್ಚ ಗುರು, ಸಿಂಹದಲ್ಲಿ ಸ್ವಕ್ಷೇತ್ರ ಸೂರ್ಯ ಹಾಗೂ ಬುಧ, ಕನ್ಯಾದಲ್ಲಿ ನೀಚ ಶುಕ್ರ, ಮಿಥುನದಲ್ಲಿ ಮಂಗಳ ಮತ್ತು ಮೀನದಲ್ಲಿ ವಕ್ರ ಶನಿ-ಚಂದ್ರರ ಉಪಸ್ಥಿತಿಯು ೧೨ ರಾಶಿಗಳ ಮೇಲೆಯೂ ವಿಶಿಷ್ಟ ಪ್ರಭಾವ ಬೀರಲಿದೆ. ​

​ಮೇಷ ರಾಶಿ :

​ನಾಲ್ಕನೇ ಮನೆಯಲ್ಲಿ ಉಚ್ಚ ಗುರುವಿರುವುದರಿಂದ ಕುಟುಂಬದಲ್ಲಿ ನೆಮ್ಮದಿ, ಆಸ್ತಿ ಅಥವಾ ವಾಹನ ಖರೀದಿ ಯೋಗವಿದೆ. ೫ನೇ ಮನೆಯ ಸೂರ್ಯ-ಬುಧರ ಪ್ರಭಾವದಿಂದ ಶೈಕ್ಷಣಿಕ ಪ್ರಗತಿ ಹಾಗೂ ಮಕ್ಕಳಿಂದ ಶುಭವಾರ್ತೆ ಸಿಗಲಿದೆ. ಕೋಪವನ್ನು ನಿಯಂತ್ರಿಸಿ ಮತ್ತು ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ.

​ವೃಷಭ ರಾಶಿ :

​ಮೂರನೇ ಮನೆಯಲ್ಲಿ ಉಚ್ಚ ಗುರು ನಿಮ್ಮ ಸಾಹಸ ಹಾಗೂ ಧೈರ್ಯವನ್ನು ಹೆಚ್ಚಿಸುತ್ತಾನೆ. ೪ನೇ ಮನೆಯ ಸೂರ್ಯನಿಂದಾಗಿ ಸಮಾಜದಲ್ಲಿ ಗೌರವ ಹೆಚ್ಚಲಿದೆ. ಕಿರು ಪ್ರಯಾಣಗಳು ಲಾಭದಾಯಕವಾಗಿರುತ್ತವೆ. ಸಂಬಂಧಿಕರ ಜೊತೆ ಅನಗತ್ಯ ಮಾತಿನ ಚಕಮಕಿ ಬೇಡ.

​ಮಿಥುನ ರಾಶಿ :

​ಎರಡನೇ ಮನೆಯಲ್ಲಿ ಉಚ್ಚ ಗುರು ನೆಲೆಸಿರುವುದರಿಂದ ಧನಲಾಭ ಹಾಗೂ ಕುಟುಂಬದಲ್ಲಿ ಸುಖ-ಸಂತೋಷ ವೃದ್ಧಿಯಾಗಲಿದೆ. ಮೂರನೇ ಮನೆಯ ಸೂರ್ಯ ಕಾರ್ಯಕ್ಷೇತ್ರದಲ್ಲಿ ಅಪಾರ ಯಶಸ್ಸನ್ನು ತರಲಿದ್ದಾನೆ. ನಿಮ್ಮ ರಾಶಿಯಲ್ಲೇ ಮಂಗಳನಿರುವುದರಿಂದ ಆತುರದ ನಿರ್ಧಾರಗಳನ್ನು ತಡೆಯಿರಿ.

​ಕರ್ಕಾಟಕ ರಾಶಿ :

​ನಿಮ್ಮ ರಾಶಿಯಲ್ಲೇ ಉಚ್ಚ ಗುರುವಿರುವುದರಿಂದ ವ್ಯಕ್ತಿತ್ವ ವಿಕಸನ, ಧಾರ್ಮಿಕ ಚಿಂತನೆ ಹಾಗೂ ಆಂತರಿಕ ಶಾಂತಿ ದೊರೆಯಲಿದೆ. ನೂತನ ಕೆಲಸ-ಕಾರ್ಯಗಳಿಗೆ ಚಾಲನೆ ನೀಡಲು ಶ್ರೇಷ್ಠ ಸಮಯ. ಎರಡನೇ ಮನೆಯಲ್ಲಿ ಕೇತು ಇರುವುದರಿಂದ ಹಣಕಾಸಿನ ವಹಿವಾಟಿನಲ್ಲಿ ಎಚ್ಚರಿಕೆ ವಹಿಸಿ.

​ಸಿಂಹ ರಾಶಿ :

​ನಿಮ್ಮ ರಾಶಿಯಲ್ಲೇ ಸ್ವಕ್ಷೇತ್ರ ಸೂರ್ಯ ಮತ್ತು ಬುಧ ಇರುವುದರಿಂದ ನಾಯಕತ್ವ ಗುಣ, ಅಧಿಕಾರ ಮತ್ತು ಗೌರವ ಲಭಿಸಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ. ಹನ್ನೆರಡನೇ ಮನೆಯ ಗುರುವಿನಿಂದಾಗಿ ಅನಿರೀಕ್ಷಿತ ಧಾರ್ಮಿಕ ಅಥವಾ ಪ್ರಯಾಣದ ವೆಚ್ಚಗಳು ಹೆಚ್ಚಾಗಬಹುದು.

ಇದನ್ನೂ ಓದಿ: ಆಗಸ್ಟ್ 12 ರಂದು ಸೂರ್ಯಗ್ರಹಣ; ಈ 3 ರಾಶಿಯವರಿಗೆ ಒಲಿಯಲಿದೆ ಅಪಾರ ಅದೃಷ್ಟ!

​ಕನ್ಯಾ ರಾಶಿ :

​ಹನ್ನೊಂದನೇ ಮನೆಯಲ್ಲಿ ಉಚ್ಚ ಗುರುವಿರುವುದರಿಂದ ವ್ಯಾಪಾರ-ವ್ಯವಹಾರಗಳಲ್ಲಿ ಅಪಾರ ಲಾಭ ಸಿಗಲಿದೆ. ಹಳೆಯ ಹೂಡಿಕೆಗಳಿಂದ ಶುಭ ಫಲ ನಿರೀಕ್ಷಿಸಬಹುದು. ನಿಮ್ಮ ರಾಶಿಯಲ್ಲಿ ನೀಚ ಶುಕ್ರನಿರುವುದರಿಂದ ವೈಯಕ್ತಿಕ ಸಂಬಂಧಗಳಲ್ಲಿ ತಾಳ್ಮೆ ವಹಿಸುವುದು ಅಗತ್ಯ.

​ತುಲಾ ರಾಶಿ :

​ಹತ್ತನೇ ಮನೆಯಲ್ಲಿ ಉಚ್ಚ ಗುರು ವೃತ್ತಿ ಜೀವನದಲ್ಲಿ ಶ್ರೇಷ್ಠ ಪ್ರಗತಿ ಹಾಗೂ ಬಡ್ತಿ ತಂದುಕೊಡಲಿದ್ದಾನೆ. ಹನ್ನೊಂದನೇ ಮನೆಯ ಸೂರ್ಯನಿಂದಾಗಿ ಹಿರಿಯ ಅಧಿಕಾರಿಗಳಿಂದ ಬೆಂಬಲ ಸಿಗಲಿದೆ. ಖರ್ಚುಗಳ ಮೇಲೆ ನಿಗಾ ಇರಲಿ.

​ವೃಶ್ಚಿಕ ರಾಶಿ :

​ಒಂಭತ್ತನೇ ಮನೆಯಲ್ಲಿ ಉಚ್ಚ ಗುರುವಿರುವುದರಿಂದ ದೈವಾನುಗ್ರಹ, ದೂರದ ಪ್ರಯಾಣ ಹಾಗೂ ಭಾಗ್ಯೋದಯವಾಗಲಿದೆ. ಹತ್ತನೇ ಮನೆಯ ಸೂರ್ಯ ಉದ್ಯೋಗದಲ್ಲಿ ಯಶಸ್ಸು ನೀಡಲಿದ್ದಾನೆ. ತಂದೆಯವರ ಆರೋಗ್ಯದ ಕಡೆ ಗಮನವಿರಲಿ.

​ಧನು ರಾಶಿ :

​ಒಂಭತ್ತನೇ ಮನೆಯಲ್ಲಿ ಸೂರ್ಯ ಸ್ವಕ್ಷೇತ್ರಗತನಾಗಿರುವುದರಿಂದ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಎಂಟನೇ ಮನೆಯ ಉಚ್ಚ ಗುರುವಿನಿಂದ ನಿಗೂಢ ಜ್ಞಾನ ಅಥವಾ ಶೋಧನೆಗಳಲ್ಲಿ ಯಶಸ್ಸು ಸಿಗಲಿದೆ. ನಾಲ್ಕನೇ ಮನೆಯಲ್ಲಿ ಶನಿ ಇರುವುದರಿಂದ ಮಾನಸಿಕ ಒತ್ತಡ ನಿರ್ವಹಣೆಗೆ ಧ್ಯಾನ ಮಾಡಿ.

​ಮಕರ ರಾಶಿ :

​ಏಳನೇ ಮನೆಯಲ್ಲಿ ಉಚ್ಚ ಗುರುವಿರುವುದರಿಂದ ದಾಂಪತ್ಯ ಜೀವನ ಮಧುರವಾಗಿರುತ್ತದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಲಾಭ ದೊರೆಯಲಿದೆ. ಎಂಟನೇ ಮನೆಯ ಸೂರ್ಯ-ಬುಧರ ಪ್ರಭಾವದಿಂದ ಚಾಲನೆ ಮಾಡುವಾಗ ಮತ್ತು ಆರೋಗ್ಯದ ವಿಚಾರದಲ್ಲಿ ಜಾಗ್ರತೆ ಇರಲಿ.

​ಕುಂಭ ರಾಶಿ :

​ಆರನೇ ಮನೆಯಲ್ಲಿ ಉಚ್ಚ ಗುರುವಿರುವುದರಿಂದ ಶತ್ರುಗಳ ಮೇಲೆ ಜಯ, ಸಾಲಗಳಿಂದ ಮುಕ್ತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಲಭಿಸಲಿದೆ. ಏಳನೇ ರಾಶಿಯಲ್ಲಿ ಸೂರ್ಯ-ಕೇತು ಇರುವುದರಿಂದ ಜಂಟಿ ವ್ಯವಹಾರ ಹಾಗೂ ದಾಂಪತ್ಯದಲ್ಲಿ ಸಾಮರಸ್ಯ ಕಾಯ್ದುಕೊಳ್ಳಿ.

ಮೀನ ರಾಶಿ :

​ಐದನೇ ಮನೆಯಲ್ಲಿ ಉಚ್ಚ ಗುರುವಿರುವುದರಿಂದ ಬುದ್ಧಿವಂತಿಕೆ, ಜ್ಞಾನಾರ್ಜನೆ ಹಾಗೂ ಮಕ್ಕಳಿಂದ ಅಪಾರ ಸಂತೋಷ ಸಿಗಲಿದೆ. ಆರ್ಥಿಕ ಮೂಲಗಳು ಗಟ್ಟಿಯಾಗಲಿವೆ. ನಿಮ್ಮ ರಾಶಿಯಲ್ಲೇ ಶನಿ-ಚಂದ್ರರಿರುವುದರಿಂದ ಅನಗತ್ಯ ಆತಂಕಕ್ಕೆ ಒಳಗಾಗಬೇಡಿ, ಶಿವಾರಾಧನೆ ಮಾಡಿ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:23 pm, Fri, 31 July 26

Follow Us