AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರ ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?

ಕೋಲಾರ ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: Aug 23, 2026 | 7:01 PM

Share

ಜಿಲ್ಲೆಯಲ್ಲಿ ಅರಣ್ಯ ಭೂಮಿ ಒತ್ತುವರಿ ವಿಚಾರ ಕಳೆದ ನಾಲ್ಕು ವರ್ಷಗಳಿಂದ ಅರಣ್ಯ ಇಲಾಖೆ ಮತ್ತು ರೈತರ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಈ ನಡುವೆ ಕೋಲಾರ ಉಸ್ತುವಾರಿ ವಹಿಸಿಕೊಂಡಿರುವ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಜಂಟಿ ಸರ್ವೆ ಮಾಡಿ ತೆರವು ಮಾಡಿ ಯಾವುದೇ ಬೆದರಿಕೆಗೆ ಹೆದರಲ್ಲ ಒತ್ತುವರಿಯಾಗಿದ್ರೆ ಬಿಡೋ ಮಾತಿಲ್ಲ ಎಂದಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಅಂದರೆ 23-ಆಗಸ್ಟ್​-2023 ರಂದು ಜಿಲ್ಲೆಯಲ್ಲಿ ಆರಂಭವಾದ ಅರಣ್ಯ ಒತ್ತುವರಿ ತೆರವು ಬಹುದೊಡ್ಡ ಕಾರ್ಯಾಚರಣೆ ಇನ್ನೂ ನಿಂತಿಲ್ಲ. ಈವರೆಗೆ ಸರಾಸರಿ 3500 ಎಕರೆಯಷ್ಟು ಅರಣ್ಯ ಒತ್ತುವರಿ ತೆರವು ಮಾಡಲಾಗಿದೆ ಆದರೂ, ಮುಂದಿನ ತೆರವು ಕಾರ್ಯಾಚರಣೆ ಹಲವು ಅಡೆತಡೆಗಳು ಉಂಟಾಗುತ್ತಿವೆ.

ಕೋಲಾರ, (ಆಗಸ್ಟ್ 23) ಜಿಲ್ಲೆಯಲ್ಲಿ ಅರಣ್ಯ ಭೂಮಿ ಒತ್ತುವರಿ ವಿಚಾರ ಕಳೆದ ನಾಲ್ಕು ವರ್ಷಗಳಿಂದ ಅರಣ್ಯ ಇಲಾಖೆ ಮತ್ತು ರೈತರ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಈ ನಡುವೆ ಕೋಲಾರ ಉಸ್ತುವಾರಿ ವಹಿಸಿಕೊಂಡಿರುವ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಜಂಟಿ ಸರ್ವೆ ಮಾಡಿ ತೆರವು ಮಾಡಿ ಯಾವುದೇ ಬೆದರಿಕೆಗೆ ಹೆದರಲ್ಲ ಒತ್ತುವರಿಯಾಗಿದ್ರೆ ಬಿಡೋ ಮಾತಿಲ್ಲ ಎಂದಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಅಂದರೆ 23-ಆಗಸ್ಟ್​-2023 ರಂದು ಜಿಲ್ಲೆಯಲ್ಲಿ ಆರಂಭವಾದ ಅರಣ್ಯ ಒತ್ತುವರಿ ತೆರವು ಬಹುದೊಡ್ಡ ಕಾರ್ಯಾಚರಣೆ ಇನ್ನೂ ನಿಂತಿಲ್ಲ. ಈವರೆಗೆ ಸರಾಸರಿ 3500 ಎಕರೆಯಷ್ಟು ಅರಣ್ಯ ಒತ್ತುವರಿ ತೆರವು ಮಾಡಲಾಗಿದೆ ಆದರೂ, ಮುಂದಿನ ತೆರವು ಕಾರ್ಯಾಚರಣೆ ಹಲವು ಅಡೆತಡೆಗಳು ಉಂಟಾಗುತ್ತಿವೆ.

ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ಕಾರ್ಯ ಮಾಡಿ ನಂತರ ಒತ್ತುವರಿ ತೆರವು ಮಾಡಬೇಕು ಅನ್ನೋ ರಾಜ್ಯ ಸರ್ಕಾರದ ಹಾಗೂ ಅಧಿಕಾರಿಗಳ ಸೂಚನೆ ಮೇರೆಗೆ ಜಂಟಿ ಸರ್ವೆ ಮಾಡಿ ತೆರವು ಕಾರ್ಯಕ್ಕೆ ಜಿಲ್ಲೆಯ ರಾಜಕಾರಣಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಜಿಲ್ಲೆಯಲ್ಲಿ ನಡೆದಿರುವ ಅದೊಂದು ಬೆಳವಣಿಗೆ ಜಿಲ್ಲೆಯ ರೈತರಿಗೆ ವರದಾನವಾಗುತ್ತಾ ಅಥವಾ ಶಾಪವಾಗುತ್ತಾ ಅನ್ನೋ ಆತಂಕ ಜಿಲ್ಲೆಯಲ್ಲಿ ಎದುರಾಗಿದೆ.

Follow Us