AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: 2ನೇ ಟೆಸ್ಟ್​ನಲ್ಲೂ ಮಿಂಚಿದ ದೇವದತ್ ಪಡಿಕ್ಕಲ್

Devdutt Padikkal half-century: ಕೊಲಂಬೊದಲ್ಲಿ ನಡೆಯುತ್ತಿರುವ ಭಾರತ-ಶ್ರೀಲಂಕಾ 2ನೇ ಟೆಸ್ಟ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ತಮ್ಮ ಅಮೋಘ ಫಾರ್ಮ್ ಮುಂದುವರಿಸಿ ಅರ್ಧಶತಕ ಗಳಿಸಿದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡುತ್ತಿರುವ ಭಾರತ ತಂಡಕ್ಕೆ ಪ್ರಮುಖ ಕೊಡುಗೆ ನೀಡಿದ ಪಡಿಕ್ಕಲ್, ನಾಯಕ ಶುಭ್ಮನ್ ಗಿಲ್ ಜೊತೆಗೂಡಿ ಶತಕದ ಜೊತೆಯಾಟವಾಡಿದ್ದಾರೆ. ಇವರ ಆಟದಿಂದ ಟೀಂ ಇಂಡಿಯಾ ಉತ್ತಮ ಸ್ಥಿತಿಯಲ್ಲಿದೆ.

ಪೃಥ್ವಿಶಂಕರ
|

Updated on: Aug 23, 2026 | 2:45 PM

Share
ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಕೊಲಂಬೊದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್‌ ಮಾಡುತ್ತಿದೆ. ತಂಡಕ್ಕೆ ಉತ್ತಮ ಆರಂಭ ಲಭಿಸಿದ್ದು, ಸತತ ಎರಡನೇ ಪಂದ್ಯದಲ್ಲೂ ಕನ್ನಡಿಗ ದೇವದತ್ ಪಡಿಕ್ಕಲ್ ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರೆಸಿದ್ದಾರೆ(PC-PTI).

1 / 5
ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಶತಕದ ಇನ್ನಿಂಗ್ಸ್ ಕಟ್ಟಿದ್ದ ಪಡಿಕ್ಕಲ್, ಇದೀಗ ಕೊಲಂಬೊದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ. ಪಡಿಕ್ಕಲ್ ಅವರ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ 150 ರನ್​ಗಳ ಗಡಿ ಕೂಡ ದಾಟಿದೆ(PC-PTI).

2 / 5
ಮೊದಲು ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ಸಾಧಾರಣ ಆರಂಭ ಲಭಿಸಿತು. ಮೊದಲ ವಿಕೆಟ್​ಗೆ ರಾಹುಲ್ ಮತ್ತು ಜೈಸ್ವಾಲ್ 37 ರನ್​ಗಳ ಜೊತೆಯಾಟ ನೀಡಿದರು. 18 ರನ್​ ಬಾರಿಸಿ ರಾಹುಲ್ ಔಟಾದ ಬಳಿಕ ಬ್ಯಾಟಿಂಗ್​ಗೆ ಬಂದ ಪಡಿಕ್ಕಲ್ ಮೊದಲ ಟೆಸ್ಟ್​ನಲ್ಲಿ ಎಲ್ಲಿಗೆ ನಿಲ್ಲಿಸಿದ್ದರೋ ಅಲ್ಲಿಂದಲೇ ತಮ್ಮ ಆಟವನ್ನು ಮುಂದುವರೆಸಿದರು(PC-PTI).

3 / 5
ಎರಡನೇ ವಿಕೆಟ್​ಗೆ ಜೈಸ್ವಾಲ್ ಜೊತೆಗೆ 29 ರನ್​ಗಳ ಜೊತೆಯಾಟ ಕಟ್ಟಿದ ಪಡಿಕ್ಕಲ್, ನಂತರ ಬಂದ ನಾಯಕ ಶುಭ್​ಮನ್ ಗಿಲ್ ಜೊತೆಗೆ ಅಜೇಯ ಶತಕದ ಜೊತೆಯಾಟವನ್ನಾಡಿದ್ದಾರೆ. ಇವರಿಬ್ಬರ ಜೊತೆಯಾಟದಿಂದಾಗಿ ಟೀಂ ಇಂಡಿಯಾ ದ್ವಿಶತಕದ ಸನಿಹಕ್ಕೆ ಬಂದಿದೆ(PC-PTI).

4 / 5
ಈ ಸುದ್ದಿ ಬರೆಯುವ ಹೊತ್ತಿಗೆ ದೇವದತ್ ಪಡಿಕ್ಕಲ್ 117 ಎಸೆತಗಳಲ್ಲಿ 63 ರನ್​ ಬಾರಿಸಿ ಆಡುತ್ತಿದ್ದರೆ, ಇತ್ತ ನಾಯಕ ಗಿಲ್ 108 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿ ವಿಕೆಟ್ ಒಪ್ಪಿಸಿದರು. ಪಡಿಕ್ಕಲ್ ಮೊದಲ ಟೆಸ್ಟ್​ನಲ್ಲೂ ಕ್ರಮವಾಗಿ 167 ಮತ್ತು 44 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಪಡಿಕ್ಕಲ್ ಅವರ ಈ ಪ್ರದರ್ಶನ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು(PC-PTI).

5 / 5
Follow Us
ಆನ್​​ಲೈನ್ ಔಷಧ ಮಾರಾಟದ ಅಕ್ರಮಕ್ಕೆ ತಡೆ, ಹೊಸ ನಿಯಮ ಜಾರಿಗೆ ಚಿಂತನೆ

ಇಡಿ ವಿಚಾರಣೆಗೆ ಹಾಜರಾದ ಮಾಜಿ ಸಚಿವ ಬಿ. ನಾಗೇಂದ್ರ

108 ಆ್ಯಂಬುಲೆನ್ಸ್ ನೌಕರರ ಪ್ರತಿಭಟನೆ: ಸಚಿವ ಖಾದರ್ ಖಡಕ್ ಎಚ್ಚರಿಕೆ

ಆಸ್ತಿಗಾಗಿ ತಂದೆಯ ಶವ ತಂದು ತಹಶೀಲ್ದಾರ್ ಕಚೇರಿ ಮುಂದೆ ಮಕ್ಕಳ ಪ್ರತಿಭಟನೆ

ಸರ್ಕಾರಿ ನಿವಾಸ ಖಾಲಿ ಮಾಡುವಂತೆ ಮಹದೇವಪ್ಪಗೆ ಸಚಿವ ಭೈರತಿ ಸುರೇಶ್​​ ಒತ್ತಡ?

ಯುವತಿಗೆ ಮಗು ಕರುಣಿಸಿ ವಂಚಿಸಿದ್ದ ಯುವಕನಿಗೆ ಪೊಲೀಸರಿಂದಲೇ ಮದುವೆ

ಕೆಪಿಎಸ್​ಸಿ ಅಭ್ಯರ್ಥಿಗಳಿಗೆ ಡೀಲ್ ಮಾಡಿದ ಪ್ಲ್ಯಾನ್‌ ನೋಡಿ!

ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಏಕಾಂಗಿಯಾಗಿ ಶಾಸಕ ಶರಣಗೌಡ ಪ್ರತಿಭಟನೆ!

ಪ್ರಜಾ ಸೇವಾ ಆಂದೋಲನದಲ್ಲಿ ಕಾಂಗ್ರೆಸ್ ಶಾಸಕ ಎಚ್.ವಿ. ವೆಂಕಟೇಶ್ ದರ್ಪ!

ನೈಸ್ ಟೋಲ್ ಸಿಬ್ಬಂದಿಗೆ ಕ್ಲಾಸ್ ತಗೊಂಡ ಯುವತಿ
ನೈಸ್ ಟೋಲ್ ಸಿಬ್ಬಂದಿಗೆ ಕ್ಲಾಸ್ ತಗೊಂಡ ಯುವತಿ