AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾನವಿ ಗಲಾಟೆಯಿಂದ ರೋಸಿ ಹೋದ ಮನೆ ಮಂದಿ: ಮಂಜನಿಗೂ ಕಾಂಪಿಟೇಶನ್ನು

ಮೊದಲೆರಡು ವಾರವಂತೂ ಮಂಜನ ರೌದ್ರಾವತಾರ ತಾಳಿದ್ದ, ಕಾಲು ಕೆರೆದುಕೊಂಡು ಜಗಳ ಮಾಡುವುದು, ಸುಖಾ-ಸುಮ್ಮನೆ ಇನ್ನೊಬ್ಬರ ವಿಷಯದಲ್ಲಿ ಮೂಗು ತೂರಿಸುವುದು, ತೀರಾ ವೈಯಕ್ತಿಕ ದಾಳಿ ಮಾಡುವುದು ಹೀಗೆ ನಾನಾ ರೀತಿಯ ದುರ್ವರ್ತನೆಗಳನ್ನು ತೋರಿದ್ದ. ಆದರೆ ಸುದೀಪ್ ಅವರು ಖಡಕ್ ಆಗಿ ವಾರ್ನಿಂಗ್ ಕೊಟ್ಟ ಬಳಿಕ ತುಸು ಮೆತ್ತಗಾಗಿದ್ದಾನೆ. ಆದರೆ ಬಾಯಿ ಬಡುಕತನದಲ್ಲಿ ಮಂಜನಿಗೇ ಕಾಂಪಿಟೇಷನ್ ಕೊಡಲು ಗಾನವಿ ಅವರು ಬಿಗ್​​ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ.

ಗಾನವಿ ಗಲಾಟೆಯಿಂದ ರೋಸಿ ಹೋದ ಮನೆ ಮಂದಿ: ಮಂಜನಿಗೂ ಕಾಂಪಿಟೇಶನ್ನು
Bigg Boss Ganhvi
ಮಂಜುನಾಥ ಸಿ.
| Edited By: |

Updated on:Oct 03, 2026 | 1:11 PM

Share

ಮುಖ್ಯಾಂಶಗಳು

  • ಬಿಗ್​​ಬಾಸ್ ಕನ್ನಡ ಸೀಸನ್ 13ರ ವೈಲ್ಡ್ ಕಾರ್ಡ್ ಎಂಟ್ರಿ ಗಾನವಿ
  • ಗಾನವಿಯ ಗಲಾಟೆಗೆ ಸಹ ಸ್ಪರ್ಧಿಗಳು ಕಂಗಾಲಾಗಿದ್ದಾರೆ
  • ಎಲ್ಲರೂ ಸೇರಿ ಗಾನವಿಗೆ ಕಳಪೆ ನೀಡಿದ್ದಾರೆ

ಬಿಗ್​​ಬಾಸ್ ಕನ್ನಡ ಸೀಸನ್ 13ರಲ್ಲಿ ಮಂಜನ ಹಾವಳಿ ಮೊದಲ ವಾರದಿಂದಲೂ ನಡೆದುಕೊಂಡು ಬಂದಿದೆ. ಮೊದಲೆರಡು ವಾರವಂತೂ ಮಂಜನ ರೌದ್ರಾವತಾರ ತಾಳಿದ್ದ, ಕಾಲು ಕೆರೆದುಕೊಂಡು ಜಗಳ ಮಾಡುವುದು, ಸುಖಾ-ಸುಮ್ಮನೆ ಇನ್ನೊಬ್ಬರ ವಿಷಯದಲ್ಲಿ ಮೂಗು ತೂರಿಸುವುದು, ತೀರಾ ವೈಯಕ್ತಿಕ ದಾಳಿ ಮಾಡುವುದು ಹೀಗೆ ನಾನಾ ರೀತಿಯ ದುರ್ವರ್ತನೆಗಳನ್ನು ತೋರಿದ್ದ. ಆದರೆ ಸುದೀಪ್ ಅವರು ಖಡಕ್ ಆಗಿ ವಾರ್ನಿಂಗ್ ಕೊಟ್ಟ ಬಳಿಕ ತುಸು ಮೆತ್ತಗಾಗಿದ್ದಾನೆ. ಆದರೆ ಬಾಯಿ ಬಡುಕತನದಲ್ಲಿ ಮಂಜನಿಗೇ ಕಾಂಪಿಟೇಷನ್ ಕೊಡಲು ಗಾನವಿ ಅವರು ಬಿಗ್​​ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ.

ಮೊದಲ ದಿನ ತುಸು ಗಾಂಭೀರ್ಯದಿಂದ ಇದ್ದ ಗಾನವಿ ಆ ನಂತರ ತಮ್ಮ ನಿಜ ಮುಖ ತೋರಿದರು. ಯಾವ ಮಟ್ಟಿಗೆಂದರೆ ಗಾನವಿ ಮುಂದೆ ಮಂಜ ‘ಜಂಟಲ್​​ಮ್ಯಾನ್’ ಎನಿಸುವಷ್ಟರ ಮಟ್ಟಿಗೆ ಗಾನವಿ ತಮ್ಮ ನಾಲಗೆ ಹರಿಬಿಟ್ಟರು. ಶುಕ್ರವಾರದ ಎಪಿಸೋಡಿನಲ್ಲಿ ಮನೆ ಮಂದಿ ಎಲ್ಲ ಸೇರಿ ಕಳಪೆ ಆಯ್ಕೆ ಮಾಡಬೇಕಿತ್ತು. ಮಂಜ ಮತ್ತು ಲಿಖಿತ್ ಉಸ್ತುವಾರಿಯಾಗಿ ತಪ್ಪು ಮಾಡಿ ಕ್ಯಾಪ್ಟೆನ್ಸಿ ಓಟವೇ ಇಲ್ಲದ ಹಾಗೆ ಮಾಡಿದ್ದರಿಂದ ಸಹಜವಾಗಿಯೇ ಹಲವರು ಮಂಜನ ಹೆಸರನ್ನು ಕಳಪೆಗೆ ತೆಗೆದುಕೊಂಡರು. ಅದರ ಜೊತೆಗೆ ಯಶಸ್, ಗಗನ್, ಶಾಸ್ತ್ರಿ ಇನ್ನೂ ಕೆಲವರು ಗಾನವಿಯ ಹೆಸರನ್ನು ಸಹ ಕಳಪೆಗೆ ತೆಗೆದುಕೊಂಡರು.

ತಮ್ಮ ಹೆಸರು ತೆಗೆದುಕೊಂಡವರ ವಿರುದ್ಧವೆಲ್ಲಾ ಗಾನವಿ ಜೋರು ದನಿಯಲ್ಲಿ ಜಗಳ ಆಡಿದರು. ಗಾನವಿಯ ಹೆಸರು ತೆಗೆದುಕೊಂಡವರು ಸೂಕ್ತವಾದ ಕಾರಣಗಳನ್ನು ನೀಡಿದ್ದರೂ ಸಹ ಗಾನವಿ ತಮ್ಮ ವಿತಂಡ ವಾದವನ್ನು ಮಂಡಿಸದೇ ಬಿಡಲಿಲ್ಲ. ಶಾಸ್ತ್ರಿಗೆ ಹೇಳಿದ ಮಾತಿಗಂತೂ ಇಡೀ ಮನೆ ಮಂದಿ ಗಾನವಿಯ ವಿರುದ್ಧ ತಿರುಗಿ ಬಿದ್ದರು. ಸ್ಪರ್ಧಿಗಳು ಗಾನವಿಯ ಹೆಸರು ಹೇಳಿದಾಗಲೆಲ್ಲ ಇತರೆ ಸ್ಪರ್ಧಿಗಳು ಚಪ್ಪಾಳೆ ತಟ್ಟಲು ಆರಂಭಿಸಿದರು. ಒಂದೇ ವಾರಕ್ಕೆ ಅಷ್ಟು ರೋಸಿ ಹೋಗಿದ್ದಾರೆ ಸ್ಪರ್ಧಿಗಳು. ಜಗಳ ಆಡುವುದು ಬಿಗ್​​ಬಾಸ್ ಮನೆಯ ಮೂಲ ನಿಯಮ ಎಂದುಕೊಂಡೇ ಗಾನವಿ ಅವರು ಮನೆಗೆ ಎಂಟ್ರಿ ಕೊಟ್ಟಂತಿದೆ. ಮಂಜ ಮತ್ತು ಜಾನವಿ ಇಬ್ಬರೂ ಸಮಾನ ಓಟು ಪಡೆದುಕೊಂಡಿರುವ ಕಾರಣ ಗಾನವಿ ಮತ್ತು ಮಂಜ ಇಬ್ಬರನ್ನೂ ಸಹ ಜೈಲಿಗೆ ಕಳಿಸಲಾಯ್ತು.

ಇದನ್ನೂ ಓದಿ:ಮನೆಗೆ ಮರಳಿದ ತಾಂಡವ್​​ ವಿರುದ್ಧ ಧಿಕ್ಕಾರ ಕೂಗಿದ ಸ್ಪರ್ಧಿಗಳು: ಕಾರಣ?

ಒಟ್ಟಾರೆ, ಇಷ್ಟು ದಿನ ಮಂಜನ ವಿತಂಡ ವಾದ, ಅನವಶ್ಯಕ ಚುಚ್ಚುಮಾತು, ದೊಡ್ಡ ಗಂಟಲಿನಿಂದ ತಲೆ ಚಿಟ್ಟುಹಿಡಿಸಿಕೊಂಡಿದ್ದ ಪ್ರೇಕ್ಷಕರಿಗೆ ಈಗ ಮಂಜನ ಜೊತೆಗೆ ಗಾನವಿ ಸಹ ಸಿಕ್ಕಿದ್ದಾರೆ. ಇನ್ನು ಮುಂದೆ ಯಾರು ಹೆಚ್ಚು ಪಾಯಿಂಟ್​ ಲೆಸ್ ಜಗಳ ಆಡುತ್ತಾರೆಂದು ಇಬ್ಬರ ನಡುವೆ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ. ಮುಂದಿನ ವಾರಗಳಲ್ಲಿ ಗಾನವಿ ಅವರನ್ನು ಮನೆ ಮಂದಿ ಹೇಗೆ ಸಹಿಸಿಕೊಳ್ಳುತ್ತಾರೋ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:26 pm, Fri, 2 October 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ವಿ. ಸೋಮಣ್ಣ ಕಾರು ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಯತ್ನ
ವಿ. ಸೋಮಣ್ಣ ಕಾರು ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಯತ್ನ