AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

100 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಪ್ರೇಮದ ಊರಲಿ’ ಸಿನಿಮಾ; ಹೊಸ ದಾಖಲೆ

ಸ್ಯಾಂಡಲ್‌ವುಡ್‌ನ ಕಡಿಮೆ ಬಜೆಟ್‌ನ ಜನಪ್ರಿಯ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದು, ಈಗಾಗಲೇ ವಿಶ್ವಾದ್ಯಂತ ನೂರು ಕೋಟಿ ರೂಪಾಯಿಗಳಿಗೂ ಅಧಿಕ ಭರ್ಜರಿ ಕಲೆಕ್ಷನ್ ಗಡಿ ದಾಟಿದೆ. ಪ್ರೇಕ್ಷಕರ ನಿರಂತರ ಮೆಚ್ಚುಗೆ ಹಾಗೂ ಅದ್ಭುತ ಮೌಖಿಕ ಪ್ರಚಾರದಿಂದ ಈ ಚಿತ್ರವು ಅಪಾರ ಯಶಸ್ಸು ಸಾಧಿಸಿ ನಿರ್ಮಾಪಕರಿಗೆ ಅತ್ಯಂತ ದೊಡ್ಡ ಮಟ್ಟದ ಲಾಭ ತಂದುಕೊಟ್ಟಿದೆ.

100 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಪ್ರೇಮದ ಊರಲಿ’ ಸಿನಿಮಾ; ಹೊಸ ದಾಖಲೆ
ಪ್ರೇಮದ ಊರಲಿ
ರಾಜೇಶ್ ದುಗ್ಗುಮನೆ
|

Updated on: Oct 22, 2026 | 9:03 AM

Share

ಮುಖ್ಯಾಂಶಗಳು

  • ಸಂಚಲನ ಸೃಷ್ಟಿಸಿದ 'ಪ್ರೇಮದ ಊರಲಿ' ಸಿನಿಮಾ
  • 100 ಕೋಟಿ ಕ್ಲಬ್ ಸೇರಿ ದಾಖಲೆ
  • ಕಡಿಮೆ ಬಜೆಟ್‌ನ ಚಿತ್ರಕ್ಕೆ ಒಲಿದ ಭರ್ಜರಿ ಯಶಸ್ಸು

ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಮೂಡಿಸಿರುವ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಬಿಡುಗಡೆಯಾದ ದಿನದಿಂದಲೂ ಪ್ರೇಕ್ಷಕರ ಪ್ರೀತಿ ಹಾಗೂ ಮೆಚ್ಚುಗೆಯನ್ನು ಗಳಿಸುತ್ತ ಬಂದಿರುವ ಈ ಚಿತ್ರ, ಒಟ್ಟು ವಿಶ್ವಾದ್ಯಂತ ಗಳಿಕೆಯಲ್ಲಿ 100 ಕೋಟಿ ರೂಪಾಯಿ ಭರ್ಜರಿ ಕಲೆಕ್ಷನ್ ಗಡಿ ದಾಟಿದೆ. ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರಿಸಿದೆ. ಪ್ರೇಕ್ಷಕರ ಭರ್ಜರಿ ಬೆಂಬಲದಿಂದ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಸಿನಿಮಾದ ಇಲ್ಲಿಯವರೆಗಿನ ವಾರದವಾರು ಗಳಿಕೆಯ ವಿವರ ಈ ಕೆಳಗಿನಂತಿದೆ:

ಮೊದಲ ವಾರ: 5.32 ಕೋಟಿ ರೂಪಾಯಿ ಎರಡನೇ ವಾರ: 23.65 ಕೋಟಿ ರೂಪಾಯಿ ಮೂರನೇ ವಾರ : 36.40 ಕೋಟಿ ರೂಪಾಯಿ

ಕೊನೆಯ ಮೂರು ದಿನಗಳ ಕಲೆಕ್ಷನ್ ವಿಶೇಷ ವಿವರ:

ಚಿತ್ರದ ನಾಲ್ಕನೇ ವಾರದ ಕೊನೆಯ ದಿನಗಳಲ್ಲಿಯೂ ಪ್ರದರ್ಶನ ಗಟ್ಟಿಯಾಗಿದೆ. ಸೋಮವಾರ (ಅಕ್ಟೋಬರ್ 19- ದಿನ 25): 3.25 ಕೋಟಿ ರೂ ಮಂಗಳವಾರ (ಅಕ್ಟೋಬರ್ 20 – ದಿನ 26): 4.25 ಕೋಟಿ ರೂ ಬುಧವಾರ (ಅಕ್ಟೋಬರ್ 21 – ದಿನ 27): 946 ಶೋಗಳ ಮೂಲಕ ಒಟ್ಟು 4.50 ಕೋಟಿ ರೂ ಬಾಚಿಕೊಳ್ಳುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ತನ್ನ ಓಟವನ್ನು ಮುಂದುವರಿಸಿದೆ.

ಇದನ್ನೂ ಓದಿ: 93 ಕೋಟಿ ರೂಪಾಯಿ ಗಳಿಸಿದ ‘ಪ್ರೇಮದ ಊರಲಿ’ ಸಿನಿಮಾ; ನೂರು ಕೋಟಿ ಗಳಿಕೆ ಫಿಕ್ಸ್

ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದರೂ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಸಾಧಾರಣ ಯಶಸ್ಸು ಸಾಧಿಸುವ ಮೂಲಕ ದೊಡ್ಡ ಮಟ್ಟದ ಲಾಭವನ್ನು ಗಳಿಸಿದೆ. ಬಿಡುಗಡೆಯಾದ ದಿನಗಳಲ್ಲಿ ಕಡಿಮೆ ಪ್ರದರ್ಶನಗಳೊಂದಿಗೆ ಆರಂಭವಾದ ಈ ಚಿತ್ರ, ಪ್ರೇಕ್ಷಕರ ಅದ್ಭುತ ಮೌಖಿಕ ಪ್ರಚಾರದಿಂದ ದಿನದಿಂದ ದಿನಕ್ಕೆ ಶೋಗಳು ಮತ್ತು ಕಲೆಕ್ಷನ್ ಹೆಚ್ಚಿಸಿಕೊಳ್ಳುತ್ತಾ ಸಾಗಿತು. ಪ್ರಸ್ತುತ ಭಾರತ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ಭರ್ಜರಿ ಪ್ರದರ್ಶನ ಕಾಣುವ ಮೂಲಕ ಒಟ್ಟು 100 ಕೋಟಿ ರೂಪಾಯಿಗಳಿಗೂ ಅಧಿಕ ಗ್ರಾಸ್ ಕಲೆಕ್ಷನ್ ಗಡಿ ದಾಟಿ, ಸಣ್ಣ ಬಜೆಟ್‌ನ ಸಿನಿಮಾವೊಂದು ಸ್ಯಾಂಡಲ್‌ವುಡ್‌ನಲ್ಲಿ ಬಿಗ್ ಹಿಟ್ ಆಗಿ ಹೊರಹೊಮ್ಮಿದೆ ಮತ್ತು ಬಂಡವಾಳ ಹಾಕಿದ ನಿರ್ಮಾಪಕರಿಗೆ ಕೋಟ್ಯಂತರ ರೂ. ಲಾಭ ತಂದುಕೊಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More