AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lunar Eclipse: ಆಗಸ್ಟ್ 28 ರಂದು ಚಂದ್ರಗ್ರಹಣ; ಈ 3 ರಾಶಿಯವರು ಎಚ್ಚರದಿಂದಿರುವುದು ಅಗತ್ಯ!

ಆಗಸ್ಟ್ 28 ರಂದು ಕನ್ಯಾ ರಾಶಿಯಲ್ಲಿ ಚಂದ್ರಗ್ರಹಣ ಸಂಭವಿಸಲಿದೆ. ಇದು ಭಾರತದಲ್ಲಿ ಗೋಚರಿಸದಿದ್ದರೂ, ಜ್ಯೋತಿಷ್ಯದ ಪ್ರಕಾರ ಧನು, ಕನ್ಯಾ, ಸಿಂಹ ರಾಶಿಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರಲಿದೆ. ಆರ್ಥಿಕ ಸಂಕಷ್ಟಗಳು, ಮಾನಸಿಕ ನೆಮ್ಮದಿ ಭಂಗ ಮತ್ತು ಸಂಬಂಧಗಳಲ್ಲಿ ಸಮಸ್ಯೆಗಳು ಉಂಟಾಗಬಹುದು. ಗ್ರಹಣದ ಪರಿಣಾಮಗಳನ್ನು ತಪ್ಪಿಸಲು ಈ ರಾಶಿಗಳು ಹಣಕಾಸು ಮತ್ತು ಪ್ರಮುಖ ನಿರ್ಧಾರಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು.

Lunar Eclipse: ಆಗಸ್ಟ್ 28 ರಂದು ಚಂದ್ರಗ್ರಹಣ; ಈ 3 ರಾಶಿಯವರು ಎಚ್ಚರದಿಂದಿರುವುದು ಅಗತ್ಯ!
ಚಂದ್ರಗ್ರಹಣ
ಅಕ್ಷತಾ ವರ್ಕಾಡಿ
|

Updated on: Aug 23, 2026 | 7:42 AM

Share

ಶ್ರಾವಣ ಮಾಸದ ಹುಣ್ಣಿಮೆಯ ದಿನವಾದ ಆಗಸ್ಟ್ 28 ರಂದು ಕನ್ಯಾರಾಶಿಯಲ್ಲಿ ಚಂದ್ರಗ್ರಹಣ ಸಂಭವಿಸಲಿದೆ. ಈ ಗ್ರಹಣವು ಬೆಳಿಗ್ಗೆ 8:04 ಕ್ಕೆ ಪ್ರಾರಂಭವಾಗಿ 9:44 ಕ್ಕೆ ಮುಕ್ತಾಯಗೊಳ್ಳಲಿದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲವಾದ್ದರಿಂದ ಸೂತಕದ ನಿಯಮಗಳು ಅನ್ವಯಿಸುವುದಿಲ್ಲ. ಆದಾಗ್ಯೂ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಗ್ರಹಣವು ಕೆಲ ರಾಶಿಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರಲಿದೆ.

ಈ ರಾಶಿಯವರು ಜಾಗರೂಕರಾಗಿರಬೇಕು:

ಧನು ರಾಶಿ:

ಕನ್ಯಾರಾಶಿಯಲ್ಲಿ ಗ್ರಹಣ ಸಂಭವಿಸುತ್ತಿರುವುದರಿಂದ ಧನು ರಾಶಿಯವರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಈ ಅವಧಿಯಲ್ಲಿ ಆರ್ಥಿಕ ಸಂಕಷ್ಟಗಳು ಹಾಗೂ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗಬಹುದು. ಗ್ರಹಣ ಮುಗಿದ ಮರುದಿನದವರೆಗೆ ಹಣಕಾಸಿನ ವಿಷಯಗಳಲ್ಲಿ ಬಹಳ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ.

ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಅಷ್ಟಲಕ್ಷ್ಮಿ ರಾಜಯೋಗ; ಈ 4 ರಾಶಿಗೆ ಒಲಿಯಲಿದೆ ಅಪಾರ ಧನಸಂಪತ್ತು!

ಕನ್ಯಾ ರಾಶಿ:

ಕನ್ಯಾರಾಶಿಯಲ್ಲೇ ಗ್ರಹಣ ನಡೆಯುತ್ತಿರುವುದರಿಂದ ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆಗಳು ಹೆಚ್ಚಾಗಬಹುದು. ಅನಗತ್ಯ ಖರ್ಚುಗಳು ಹೆಚ್ಚಿ, ಮಾನಸಿಕ ಶಾಂತಿ ಭಂಗವಾಗುವ ಸಾಧ್ಯತೆ ಇದೆ. ಆದ್ದರಿಂದ ಹಣದ ವಹಿವಾಟು ನಡೆಸುವಾಗ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಕನ್ಯಾ ರಾಶಿಯವರು ಹೆಚ್ಚಿನ ಜಾಗ್ರತೆ ವಹಿಸಬೇಕು.

ಸಿಂಹ ರಾಶಿ:

ಸಿಂಹ ರಾಶಿಯವರಿಗೆ ಈ ಅವಧಿಯಲ್ಲಿ ನಿಂದನೆಗಳು ಮತ್ತು ಅಪವಾದಗಳು ಎದುರಾಗುವ ಸಾಧ್ಯತೆ ಇದೆ. ಕುಟುಂಬದ ಸದಸ್ಯರೊಂದಿಗೆ ವಾದ-ವಿವಾದಗಳು ಉಂಟಾಗಬಹುದು ಹಾಗೂ ನ್ಯಾಯಾಲಯ ಅಥವಾ ಕಾನೂನು ಸಂಬಂಧಿತ ವ್ಯವಹಾರಗಳು ನಿರೀಕ್ಷೆಗೆ ವಿರುದ್ಧವಾಗಿ ಹೋಗಬಹುದು. ಪ್ರತಿಯೊಂದು ಕೆಲಸದಲ್ಲೂ ಜಾಗರೂಕರಾಗಿರುವುದು ಒಳಿತು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us