ಆನ್‌ಲೈನ್ ಚೆಸ್ ಆಡಿ ಕೊರೊನಾ ರಿಲೀಫ್ ಫಂಡ್​ಗೆ 37 ಲಕ್ಷ ರೂ. ದೇಣಿಗೆ ಸಂಗ್ರಹಿಸಿದ ವಿಶ್ವನಾಥನ್ ಆನಂದ್

ಈ ಆನ್‌ಲೈನ್ ಪಂದ್ಯದಿಂದ ಆನಂದ್ 50 ಸಾವಿರ ಡಾಲರ್‌ಗಳನ್ನು ಅಂದರೆ ಸುಮಾರು 37 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದರು.

1/5
ಕೊರೊನಾ ರಿಲೀಫ್ ಫಂಡ್‌ಗಾಗಿ ಹಣ ಸಂಗ್ರಹಿಸಲು ಐದು ಬಾರಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಮತ್ತು ಇತರ ನಾಲ್ಕು ಗ್ರಾಂಡ್‌ಮಾಸ್ಟರ್‌ಗಳು ಇತರ ಚೆಸ್ ಆಟಗಾರರೊಂದಿಗೆ ಗುರುವಾರ ಆನ್‌ಲೈನ್ ಚೆಸ್ ಪಂದ್ಯಗಳನ್ನು ಆಡಿದ್ದಾರೆ. ಚೇಸ್ ಡಾಟ್ ಕಾಮ್ ಬ್ಲಿಟ್ಜ್ ಹೊಂದಿರುವವರು ಅಥವಾ 2000 ಕ್ಕಿಂತ ಕಡಿಮೆ ಫಿಡಾ ರೇಟಿಂಗ್ ಹೊಂದಿರುವ ಆಟಗಾರರು ಸುಮಾರು 11000 ರೂಪಾಯಿಗಳನ್ನು ದಾನ ಮಾಡಬಹುದಾಗಿದೆ.
2/5
ಈ ಆನ್‌ಲೈನ್ ಪಂದ್ಯದಿಂದ ಆನಂದ್ 50 ಸಾವಿರ ಡಾಲರ್‌ಗಳನ್ನು ಅಂದರೆ ಸುಮಾರು 37 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದರು. ಈ ಕಾರ್ಯಕ್ರಮವನ್ನು ಚೆಸ್ ಡಾಟ್ ಕಾಮ್ ಆಯೋಜಿಸಿದೆ. ಅವರಲ್ಲದೆ ಗ್ರ್ಯಾಂಡ್ ಮಾಸ್ಟರ್ ಕೊನೇರು ಹಂಪಿ, ಹರಿಕಾ ದ್ರೋಣವಾಲಿ, ನಿಹಾಲ್ ಸೈನಿ ಮತ್ತು ಪ್ರಜ್ಞಾ ರಮೇಶಬಾಬು ಮುಂತಾದ ಅನೇಕ ಆಟಗಾರರು ಭಾಗವಹಿಸಿದ್ದರು.
3/5
ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಭಾರತೀಯ ಟೇಬಲ್ ಟೆನಿಸ್ ಆಟಗಾರ ಜಿ. ಸತ್ಯನ್ ಶುಕ್ರವಾರ ಹೇಳಿದ್ದಾರೆ.
4/5
ದೇಶದಲ್ಲಿ ನಡೆಯುತ್ತಿರುವುದನ್ನು ನೋಡಿ ಹೃದಯ ಆಘಾತಕ್ಕೊಳಗಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಜನರು ತುಂಬಾ ತೊಂದರೆಯಲ್ಲಿದ್ದಾರೆ ಮತ್ತು ಪ್ರತಿದಿನ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುತ್ತಿದ್ದಾರೆ. ಪರಸ್ಪರ ಸಹಾಯ ಮಾಡುವ ಸಮಯ ಇದು. ನಾನು ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದೇನೆ ಎಂದು ಟ್ವಿಟ್ ಮಾಡಿದ್ದಾರೆ.
5/5
ಕೊರೊನಾದ ಎರಡನೇ ಅಲೆಯ ವಿರುದ್ಧದ ಯುದ್ಧದಲ್ಲಿ ನಾವು ಗೆಲ್ಲುತ್ತೇವೆ ಎಂದು ನನಗೆ ಖಾತ್ರಿಯಿದೆ ಎಂದು ಅವರು ಹೇಳಿದರು. ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದ ಸತ್ಯನ್ ಕಳೆದ ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ 1.25 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದ್ದರು.