AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಒಬ್ಬ ಮಾಡಿದ ತಪ್ಪಿಗೆ ಭಾರೀ ಬೆಲೆ ತೆತ್ತ ಇಂಗ್ಲೆಂಡ್

India vs England Semi Final: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 253 ರನ್​ ಕಲೆಹಾಕಿದರೆ, ಇಂಗ್ಲೆಂಡ್ ತಂಡವು 246 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಭಾರತ ತಂಡ 7 ರನ್​ಗಳ ಗೆಲುವು ದಾಖಲಿಸಿದೆ.

IND vs ENG: ಒಬ್ಬ ಮಾಡಿದ ತಪ್ಪಿಗೆ ಭಾರೀ ಬೆಲೆ ತೆತ್ತ ಇಂಗ್ಲೆಂಡ್
England
ಝಾಹಿರ್ ಯೂಸುಫ್
|

Updated on: Mar 06, 2026 | 7:11 AM

Share

ಕ್ರಿಕೆಟ್ ಅಂಗಳಲ್ಲಿ ಕ್ಯಾಚಸ್ ವಿನ್ ಮ್ಯಾಚಸ್ ಎಂಬ ಮಾತೊಂದಿದೆ. ಈ ಮಾತು ಇಂಗ್ಲೆಂಡ್ ಪಾಲಿಗೆ ಅಕ್ಷರಶಃ ನಿಜವಾಗಿದೆ. ಏಕೆಂದರೆ ಟೀಮ್ ಇಂಡಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಬಿಟ್ಟಂತಹ ಒಂದೇ ಒಂದು ಕ್ಯಾಚ್​ನಿಂದಾಗಿ ಇದೀಗ ಆಂಗ್ಲರು ಟಿ20 ವಿಶ್ವಕಪ್​ನಿಂದ ಹೊರಬಿದ್ದಿದ್ದಾರೆ. ಇತ್ತ ಅಕ್ಷರ್ ಪಟೇಲ್ ಹಿಡಿದಂತಹ ಎರಡು ಅದ್ಭುತ ಕ್ಯಾಚ್​ಗಳಿಂದಾಗಿ ಭಾರತ ತಂಡವು ಫೈನಲ್​ಗೇರಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ಆರಂಭಿಕ ಆಘಾತ ನೀಡುವಲ್ಲಿ ವಿಲ್ ಜ್ಯಾಕ್ಸ್ ಯಶಸ್ವಿಯಾದರು.

2ನೇ ಓವರ್​ನ ಕೊನೆಯ ಎಸೆತದಲ್ಲಿ ಅಭಿಷೇಕ್ ಶರ್ಮಾ (6) ವಿಕೆಟ್ ಪಡೆಯುವ ಮೂಲಕ ಜ್ಯಾಕ್ಸ್​ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಕೂಡ ಔಟಾಗಿ ಪೆವಿಲಿಯನ್ ಸೇರಬೇಕಿದ್ದರು. ಆದರೆ ಇಂಗ್ಲೆಂಡ್ ತಂಡದ ಹ್ಯಾರಿ ಬ್ರೂಕ್ ನೀಡಿದ ಜೀವದಾನ ಇಡೀ ಪಂದ್ಯದ ಚಿತ್ರಣ ಬದಲಿಸಿತು.

ಜೋಫ್ರಾ ಆರ್ಚರ್ ಎಸೆದ ಈ ಪಂದ್ಯದ ಮೂರನೇ ಓವರ್​ನ 2ನೇ ಎಸೆತದಲ್ಲಿ ಸಂಜು ಸ್ಯಾಮ್ಸನ್ ಸುಲಭ ಕ್ಯಾಚ್ ನೀಡಿದ್ದರು. ಆದರೆ  ಮಿಡ್ ಆನ್​ನಲ್ಲಿದ್ದ ಹ್ಯಾರಿ ಬ್ರೂಕ್ ಚೆಂಡನ್ನು ಹಿಡಿಯುವಲ್ಲಿ ವಿಫಲರಾದರು.

ಈ ವೇಳೆ ಸಂಜು ಸ್ಯಾಮ್ಸನ್ ಕಲೆಹಾಕಿದ್ದ ಸ್ಕೋರ್ 7 ಎಸೆತಗಳಲ್ಲಿ 15 ರನ್​ಗಳು ಮಾತ್ರ. 15 ರನ್​ಗಳ ವೇಳೆಗೆ ಸಿಕ್ಕ ಜೀವದಾನವನ್ನು ಬಳಸಿಕೊಂಡ ಸ್ಯಾಮ್ಸನ್ ಅಬ್ಬರಿಸಲಾರಂಭಿಸಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ಮೊತ್ತ 67 ಕ್ಕೆ ಬಂದು ನಿಂತಿತು.

ಇದಾದ ಬಳಿಕ ಕೂಡ ಸಿಡಿಲಬ್ಬರ ಮುಂದುವರೆಸಿದ ಸಂಜು ಸ್ಯಾಮ್ಸನ್ 35 ಎಸೆತಗಳಲ್ಲಿ 74 ರನ್​ ಚಚ್ಚಿದರು. ಅಂದರೆ ಕ್ಯಾಚ್ ಡ್ರಾಪ್ ಆ ಬಳಿಕ ಸಂಜು ಸ್ಯಾಮ್ಸನ್ 200ರ ಸ್ಟ್ರೈಕ್ ರೇಟ್​ನಲ್ಲಿ ರನ್ ಕಲೆಹಾಕಿದರು. ಈ ಮೂಲಕ 42 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 89 ರನ್​ಗಳ ಕೊಡುಗೆ ನೀಡಿದರು.

ಇತ್ತ ಸಂಜು ಸ್ಯಾಮ್ಸನ್ 89 ರನ್​ಗಳಿಸುತ್ತಿದ್ದಂತೆ 13 ಓವರ್​ಗಳಲ್ಲಿ ಟೀಮ್ ಇಂಡಿಯಾ ಸ್ಕೋರ್ 160 ರನ್​​ಗೆ ಬಂದು ನಿಂತಿತು. ಇನ್ನುಳಿದ 7 ಓವರ್​ಗಳಲ್ಲಿ ಅಬ್ಬರಿಸಿದ ಟೀಮ್ ಇಂಡಿಯಾ ಬ್ಯಾಟರ್​ಗಳು ಅಂತಿಮವಾಗಿ 253 ರನ್​ಗಳಿಸುವಲ್ಲಿ ಯಶಸ್ವಿಯಾದರು.  ಈ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು 20 ಓವರ್​ಗಳಲ್ಲಿ 246 ರನ್​ಗಳಿಸಿ 7 ರನ್​ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿತು.

ಅಂದರೆ ಸಂಜು ಸ್ಯಾಮ್ಸನ್ ಅವರ ಕ್ಯಾಚ್​ ಅನ್ನು ಹ್ಯಾರಿ ಬ್ರೂಕ್ ಕೈ ಚೆಲ್ಲಿದ್ದು ಇಂಗ್ಲೆಂಡ್ ಪಾಲಿಗೆ ಅತ್ಯಂತ ದುಬಾರಿಯಾಯಿತು. ಅದು ಕೂಡ 74 ರನ್​​ಗಳ ದುಬಾರಿ. ಅಂದರೆ ಕ್ಯಾಚ್ ಕೈ ಬಿಟ್ಟ ಬಳಿಕ ಸ್ಯಾಮ್ಸನ್ ಬರೋಬ್ಬರಿ 74 ರನ್​ಗಳನ್ನು ಕಲೆಹಾಕಿದ್ದರು. ಈ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದರು.

ಇದನ್ನೂ ಓದಿ: T20 World Cup 2028: ಮುಂದಿನ ಟಿ20 ವಿಶ್ವಕಪ್​ಗೆ 12 ತಂಡಗಳು ಆಯ್ಕೆ

ಒಂದು ವೇಳೆ ಸಂಜು ಸ್ಯಾಮ್ಸನ್ ಅವರ ಕ್ಯಾಚ್ ಹಿಡಿದಿದ್ದರೆ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಗಿ ಎಚ್ಚರಿಕೆಯ ಬ್ಯಾಟಿಂಗ್​ಗೆ ಒತ್ತು ನೀಡಿದ್ದರು. ಆದರೆ ಬ್ರೂಕ್ ಮಾಡಿದ ತಪ್ಪಿನಿಂದಾಗಿ ಇಂಗ್ಲೆಂಡ್ 7 ರನ್​ಗಳ ಸೋಲೊಪ್ಪಿಕೊಳ್ಳಬೇಕಾಯಿತು. ಈ ಸೋಲಿನೊಂದಿಗೆ ಆಂಗ್ಲರು ಗಂಟು ಮೂಟೆ ಕಟ್ಟಿದರೆ, ಟೀಮ್ ಇಂಡಿಯಾ ಫೈನಲ್​ಗೆ ಎಂಟ್ರಿ ಕೊಟ್ಟಿದೆ.

Follow Us
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!