Video: ಯುವಕರು ನಾಚುವಂತೆ ಕಾರ್ ಡ್ರೈವ್ ಮಾಡಿದ ಅಜ್ಜಿ, ವೈರಲ್ ಆಯ್ತು ದೃಶ್ಯ
ವಯಸ್ಸು ಏರಿದಾಗಲೂ ಕೆಲವರ ಉತ್ಸಾಹ ಮಾತ್ರ ಕುಂದಲ್ಲ. ಹೌದು, ಇಳಿ ವಯಸ್ಸಿನಲ್ಲೂ ಜೀವನೋತ್ಸಾಹದಿಂದ ನಮ್ಮೆಲ್ಲರ ಗಮನ ಸೆಳೆದಂತಹ ಅದೆಷ್ಟೋ ವೃದ್ಧರಿದ್ದಾರೆ. ಇದೀಗ ಅಜ್ಜಿಯೊಬ್ಬರು ಸ್ಟೈಲಿಶ್ ಆಗಿ ಕಾರ್ ಡ್ರೈವಿಂಗ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ದೃಶ್ಯವು ನೆಟ್ಟಿಗರ ಗಮನ ಸೆಳೆಯುತ್ತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ

ಏಜ್ ಇಸ್ ಎ ಜಸ್ಟ್ ನಂಬರ್ ಅಂತಾರೆ. ಹೌದು, ದೇಹಕ್ಕಷ್ಟೇ ವಯಸ್ಸಾಗುವುದು ಹೊರತು ಮನಸ್ಸಿಗಲ್ಲ, ಜೀವನೋತ್ಸಾಹಕ್ಕಲ್ಲ ಎಂದು ವೃದ್ಧರನ್ನು ಕಂಡಾಗ ಈ ಮಾತು ನಿಜವೆನಿಸುತ್ತದೆ. ಇದೀಗ ಅಜ್ಜಿಯೊಬ್ಬರು (grandmother) ಯಾವುದೇ ಭಯವಿಲ್ಲದೇ ಸಲೀಸಾಗಿ ಕಾರ್ ಡ್ರೈವಿಂಗ್ ಮಾಡಿದ್ದಾರೆ. ಇಳಿವಯಸ್ಸಿನಲ್ಲಿ ಯುವಕರನ್ನು ನಾಚುವಂತೆ ಕಾರು ಡ್ರೈವಿಂಗ್ ಮಾಡುವ ಅಜ್ಜಿಯ ಜೀವನೋತ್ಸಾಹಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಮಣಿಅಮ್ಮ (Maniamma) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಇಳಿವಯಸ್ಸಿನಲ್ಲಿ ವೃದ್ಧ ಮಹಿಳೆ ಕಾರ್ ಡ್ರೈವ್ ಮಾಡಿದ್ದಾರೆ. ಹೌದು, ಯುವಕರನ್ನು ಮೀರಿಸುವಂತೆ ಸಲೀಸಾಗಿ ಕಾರು ಓಡಿಸುವ ಅಜ್ಜಿಯನ್ನು ನೀವಿಲ್ಲಿ ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ: ಅಜ್ಜ ಅಜ್ಜಿಯ ಜತೆಗೆ ಮೊದಲ ವಿಮಾನ ಪ್ರಯಾಣ; ಹಿರಿಜೀವಗಳ ಕನಸನ್ನು ನನಸಾಗಿಸಿದ ಮೊಮ್ಮಗ
ಈ ವಿಡಿಯೋ 1.8 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನೀವು ನಿಜಕ್ಕೂ ಮಾದರಿ ಎಂದಿದ್ದಾರೆ. ಇನ್ನೊಬ್ಬರು, ಸೂಪರ್ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅದ್ಭುತ ಅಜ್ಜಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:24 pm, Tue, 18 August 26




