AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: 193 ರನ್​ಗಳಿಗೆ ಭಾರತ ಆಲೌಟ್; ಶ್ರೀಲಂಕಾಕ್ಕೆ 372 ರನ್​ಗಳ ಕಠಿಣ ಗುರಿ

India vs Sri Lanka Test: ಗಾಲೆಯಲ್ಲಿ ನಡೆದ ಭಾರತ-ಶ್ರೀಲಂಕಾ ಮೊದಲ ಟೆಸ್ಟ್ ಪಂದ್ಯದಲ್ಲಿ, ಭಾರತ ತನ್ನ ಎರಡನೇ ಇನ್ನಿಂಗ್ಸ್ ಅನ್ನು 193 ರನ್‌ಗಳಿಗೆ ಮುಕ್ತಾಯಗೊಳಿಸಿದೆ. ಇದರೊಂದಿಗೆ ಆತಿಥೇಯ ಶ್ರೀಲಂಕಾ ತಂಡಕ್ಕೆ 371 ರನ್‌ಗಳ ಕಠಿಣ ಗುರಿಯನ್ನು ನೀಡಿದೆ. ರಿಷಭ್ ಪಂತ್ (66), ದೇವದತ್ ಪಡಿಕ್ಕಲ್ (44) ಮತ್ತು ಕೆಎಲ್ ರಾಹುಲ್ (35) ಪ್ರಮುಖ ರನ್ ಗಳಿಸಿದರೆ, ಉಳಿದ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಮಟ್ಟದಲ್ಲಿ ಆಡಲಿಲ್ಲ.

IND vs SL: 193 ರನ್​ಗಳಿಗೆ ಭಾರತ ಆಲೌಟ್; ಶ್ರೀಲಂಕಾಕ್ಕೆ 372 ರನ್​ಗಳ ಕಠಿಣ ಗುರಿ
Team India
ಪೃಥ್ವಿಶಂಕರ
|

Updated on:Aug 18, 2026 | 3:05 PM

Share

ಗಾಲೆಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್ ಕೂಡ ಮುಗಿಸಿದೆ. 4ನೇ ದಿನದಾಟದಂದು ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಕೇವಲ 2 ಸೆಷನ್​ಗಳನ್ನು ಆಡಲಷ್ಟೇ ಶಕ್ತವಾಯಿತು. 4ನೇ ದಿನದಾಟದ ಎರಡನೇ ಸೆಷನ್ ಮುಗಿಯುವುದಕ್ಕೂ ಮುನ್ನವೇ ಟೀಂ ಇಂಡಿಯಾ ತನ್ನೇಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 193 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಇದರೊಂದಿಗೆ ಆತಿಥೇಯ ಶ್ರೀಲಂಕಾ ತಂಡಕ್ಕೆ 372 ರನ್​ಗಳ ಕಠಿಣ ಗುರಿ ನೀಡಿದೆ. ಎರಡನೇ ಇನ್ನಿಂಗ್ಸ್​ನಲ್ಲಿ ರಿಷಭ್ ಪಂತ್ (Rishabh Pant) 66 ರನ್, ದೇವದತ್ ಪಡಿಕ್ಕಲ್ 44 ರನ್ ಮತ್ತು ಕೆಎಲ್ ರಾಹುಲ್ 35 ರನ್ ಬಾರಿಸಿದ್ದನ್ನು ಬಿಟ್ಟರೆ ಉಳಿದವರಿಗೆ ಒಂದಂಕಿ ಮೊತ್ತವನ್ನು ದಾಟಲು ಸಾಧ್ಯವಾಗಲಿಲ್ಲ.

ಸೊನ್ನೆ ಸುತ್ತಿದ ಜೈಸ್ವಾಲ್

ಮೂರನೇ ದಿನದಾಟದ ಕೊನೆಯ ಸೆಷನ್​ನಲ್ಲಿ ಶ್ರೀಲಂಕಾ ತಂಡವನ್ನು ಟೀಂ ಇಂಡಿಯಾ 284 ರನ್​ಗಳಿಗೆ ಆಲೌಟ್ ಮಾಡಿತು. ಮಂದ ಬೆಳಕಿನಿಂದಾಗಿ ಮೂರನೇ ದಿನದಂದು ಟೀಂ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ನಾಲ್ಕನೇ ದಿನದಂದು ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಜೈಸ್ವಾಲ್ ಖಾತೆ ತೆರೆಯದೆ ಔಟಾದರು. ಆದರೆ ಆ ಬಳಿಕ ಜೊತೆಯಾದ ರಾಹುಲ್ ಹಾಗೂ ಪಡಿಕ್ಕಲ್ ಎರಡನೇ ವಿಕೆಟ್​ಗೆ 65 ರನ್​ಗಳ ಜೊತೆಯಾಟ ನೀಡಿದರು. 35 ರನ್​ಗಳಿಗೆ ರಾಹುಲ್ ಔಟಾಗುವ ಮೂಲಕ ಇವರಿಬ್ಬರ ಜೊತೆಯಾಟ ಮುರಿದುಬಿತ್ತು.

ಪಂತ್ ಅರ್ಧಶತಕ

ರಾಹುಲ್ ವಿಕೆಟ್ ಪತನದ ಬಳಿಕ ಬಂದ ನಾಯಕ ಶುಭ್​ಮನ್ ಗಿಲ್ ಕೇವಲ 8 ರನ್​ಗಳಿಗೆ ಔಟಾದರೆ, ದೇವದತ್ ಪಡಿಕ್ಕಲ್ 44 ರನ್​ಗಳಿಗೆ ಔಟಾಗುವ ಮೂಲಕ ಅರ್ಧಶತಕ ವಂಚಿತರಾದರು. ಪಡಿಕ್ಕಲ್ ವಿಕೆಟ್ ಬಳಿಕ ತಂಡ ಇನ್ನಿಂಗ್ಸ್ ಜವಾಬ್ದಾರಿ ಹೊತ್ತ ರಿಷಭ್ ಪಂತ್ ಅರ್ಧಶತಕದ ಇನ್ನಿಂಗ್ಸ್ ಕೂಡ ಆಡಿದರು. ಆದರೆ ಪಂತ್​ಗೆ ಬೇರೆ ಬ್ಯಾಟರ್​ಗಳಿಂದ ಬೆಂಬಲ ಸಿಗಲಿಲ್ಲ. ಪಂತ್ ಹೊರತುಪಡಿಸಿ ಉಳಿದ ಯಾವುದೇ ಕೆಳಕ್ರಮಾಂಕದ ಬ್ಯಾಟ್ಸ್​ಮನ್​ಗಳು 10 ರನ್​ಗಳ ಗಡಿ ದಾಟಲಿಲ್ಲ. ಹೀಗಾಗಿ 111 ರನ್​ಗಳಿಗೆ ತನ್ನ 4 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ 193 ರನ್​ಗಳೊಳಗೆ ಉಳಿದ 6 ವಿಕೆಟ್​ಗಳನ್ನು ಕಳೆದುಕೊಂಡಿತು.

IND vs SL: 3ನೇ ದಿನವೂ ಮಳೆ..! ಮೊದಲ ಟೆಸ್ಟ್ ರದ್ದಾದರೆ ಟೀಂ ಇಂಡಿಯಾಕ್ಕೆ ಭಾರಿ ನಷ್ಟ

19 ರನ್​ಗೆ 4 ವಿಕೆಟ್

ರಿಷಭ್ ಪಂತ್ 69 ಎಸೆತಗಳಲ್ಲಿ 66 ರನ್ ಗಳಿಸಿ ಔಟಾದಾಗ ತಂಡದ ಮೊತ್ತ 174 ರನ್​ ಆಗಿತ್ತು. ಆ ಹಂತದಲ್ಲಿ ಟೀಂ ಇಂಡಿಯಾ 6 ವಿಕೆಟ್​ಗಳನ್ನು ಕಳೆದುಕೊಂಡಿತ್ತು. ಪಂತ್ ವಿಕೆಟ್ ಬಳಿಕ ಉಳಿದ 4 ವಿಕೆಟ್​ಗಳು 19 ರನ್​ಗಳಿಗೆ ಪತನಗೊಂಡವು. ಇದರಿಂದಾಗಿ ಟೀಂ ಇಂಡಿಯಾಕ್ಕೆ 200 ರನ್​ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಇತ್ತ ಶ್ರೀಲಂಕಾ ಪರ ಎರಡನೇ ಇನ್ನಿಂಗ್ಸ್‌ನಲ್ಲಿ, ಅಸಿತಾ ಫೆರ್ನಾಂಡೊ ನಾಲ್ಕು ವಿಕೆಟ್‌ಗಳನ್ನು ಪಡೆದರೆ, ಪ್ರಭಾತ್ ಜಯಸೂರ್ಯ ಮೂರು ವಿಕೆಟ್‌ಗಳನ್ನು ಪಡೆದರು. ಲಹಿರು ಕುಮಾರ ಎರಡು ಮತ್ತು ಕುಶಾರ ನುವಂತ ಒಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:36 pm, Tue, 18 August 26

Follow Us