AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬುದ್ಧಿ ಕಲಿಯದ ಪೃಥ್ವಿ ಶಾ; ಲಾಕ್​​ಡೌನ್ ನಿಯಮ ಉಲ್ಲಂಘನೆ, ಬೇಡಿಕೊಂಡರೂ ಬಿಡದ ಅಂಬೋಲಿ ಪೊಲೀಸರು

ಪೊಲೀಸರು ನಿಲ್ಲಿಸಿದಾಗ, ಶಾ ಅವರು ಪ್ರಯಾಣಕ್ಕೆ ಬೇಕಾದ ಇ-ಪಾಸ್ ಹೊಂದಿಲ್ಲ ಎಂದು ತಿಳಿದುಬಂದಿದೆ. ತಮ್ಮನ್ನು ಹೋಗಲು ಬಿಡುವಂತೆ ಶಾ ಪೊಲೀಸರಿಗೆ ಮನವಿ ಮಾಡಿದರೂ ಸಹ ಪೊಲೀಸರು ಅವಕಾಶ ನೀಡಿಲ್ಲ.

ಬುದ್ಧಿ ಕಲಿಯದ ಪೃಥ್ವಿ ಶಾ; ಲಾಕ್​​ಡೌನ್ ನಿಯಮ ಉಲ್ಲಂಘನೆ, ಬೇಡಿಕೊಂಡರೂ ಬಿಡದ ಅಂಬೋಲಿ ಪೊಲೀಸರು
ಪೃಥ್ವಿ ಶಾ
ಪೃಥ್ವಿಶಂಕರ
| Updated By: Skanda|

Updated on: May 15, 2021 | 12:40 PM

Share

ಭಾರತೀಯ ಕ್ರಿಕೆಟ್ ತಂಡದ ಯುವ ಓಪನರ್ ಪೃಥ್ವಿ ಶಾ ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ನಿಯಮವನ್ನು ಅನುಸರಿಸದ ಕಾರಣ ಪೊಲೀಸರೊಂದಿಗೆ ಜಟಾಪಟಿ ನಡೆಸಬೇಕಾಯಿತು. ಐಪಿಎಲ್ 2021 ಮಧ್ಯದಲ್ಲಿ ಮುಂದೂಡಲ್ಪಟ್ಟ ನಂತರ ಮುಂಬೈನ ತನ್ನ ಮನೆಗೆ ಮರಳಿದ ದೆಹಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ಶಾ, ರಜೆಗಾಗಿ ಗೋವಾಕ್ಕೆ ತೆರಳುತ್ತಿರುವಾಗ ಅಂಬೋಲಿಯಲ್ಲಿ ಪೊಲೀಸರು ಶಾ ಅವರನ್ನು ತಡೆದಿದ್ದಾರೆ. ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ ಮಾಡಿರುವ ಕಾರಣ, ಮನೆಯಿಂದ ಹೊರಗೆ ಹೋಗುವುದನ್ನು ನಿಷೇಧಿಸಲಾಗಿದೆ ಮತ್ತು ಯಾರಾದರೂ ಹೊರಗೆ ಹೋಗಲು ಬಯಸಿದರೆ, ಅವರು ಇ-ಪಾಸ್ ತೆಗೆದುಕೊಳ್ಳಬೇಕಾಗುತ್ತದೆ. ಪೃಥ್ವಿ ಶಾ ಅದೇ ತಪ್ಪನ್ನು ಮಾಡಿ ಇ-ಪಾಸ್ ಇಲ್ಲದೆ ಗೋವಾಕ್ಕೆ ತೆರಳಿದರು, ಇದರಿಂದಾಗಿ ಪೊಲೀಸರು ಅವರನ್ನು ಮಧ್ಯದಲ್ಲೇ ತಡೆದು ನಿಲ್ಲಿಸಿದ್ದಾರೆ.

ಪೊಲೀಸರಿಗೆ ಮನವಿ ಮಾಡಿದರೂ ಅವಕಾಶ ನೀಡಿಲ್ಲ ಮರಾಠಿ ಪತ್ರಿಕೆ ಲೋಕಮತ್ ವರದಿಯ ಪ್ರಕಾರ, ಪೃಥ್ವಿ ಶಾ ಅವರು ಕೊಲ್ಹಾಪುರ ಮೂಲಕ ಶುಕ್ರವಾರ ಗೋವಾಕ್ಕೆ ಹೋಗುತ್ತಿದ್ದರು. ಅಷ್ಟರಲ್ಲಿ ಅಂಬೋಲಿ ಪೊಲೀಸರು ಆತನನ್ನು ದಾರಿಯಲ್ಲಿ ನಿಲ್ಲಿಸಿದರು. ಪೊಲೀಸರು ನಿಲ್ಲಿಸಿದಾಗ, ಶಾ ಅವರು ಪ್ರಯಾಣಕ್ಕೆ ಬೇಕಾದ ಇ-ಪಾಸ್ ಹೊಂದಿಲ್ಲ ಎಂದು ತಿಳಿದುಬಂದಿದೆ. ನಮ್ಮನ್ನು ಹೋಗಲು ಬಿಡುವಂತೆ ಶಾ ಪೊಲೀಸರಿಗೆ ಮನವಿ ಮಾಡಿದರೂ ಸಹ ಪೊಲೀಸರು ಅವಕಾಶ ನೀಡಿಲ್ಲ. ಆದರಿಂದ ಕೂಡಲೇ ಶಾ ಇ-ಪಾಸ್​ಗಾಗಿ ಅರ್ಜಿ ಸಲ್ಲಿಸಿ, ಸುಮಾರು ಒಂದು ಗಂಟೆ ಕಾಯ್ದ ನಂತರ ಪಾಸ್ ಪಡೆದರು. ಪಾಸ್ ಪಡೆದ ಬಳಿಕ ಪೊಲೀಸರು ಅವರನ್ನು ಗೋವಾಗೆ ತೆರಳಲು ಅನುಮತಿ ನೀಡಿದ್ದಾರೆ.

ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆ ಇಲ್ಲ ಈ ವರ್ಷದ ಆರಂಭದಲ್ಲಿ ಕ್ರಿಕೆಟ್ ಮೈದಾನದಲ್ಲಿ ಕಳಪೆ ಪ್ರದರ್ಶನದಿಂದಾಗಿ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಶಾ, ಎರಡು ತಿಂಗಳ ಹಿಂದೆ ಉತ್ತಮ ಪುನರಾಗಮನ ಮಾಡಿದರು. ಮುಂಬೈ ಬ್ಯಾಟ್ಸ್‌ಮನ್ ತಮ್ಮ ತಂಡವನ್ನು ವಿಜಯ್ ಹಜಾರೆ ಟ್ರೋಫಿಗೆ ಕರೆದೊಯ್ದು ಪ್ರಶಸ್ತಿಯನ್ನು ಗೆದ್ದರು. ಈ ಸಮಯದಲ್ಲಿ, ಶಾ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು ಮತ್ತು ಟೂರ್ನಮೆಂಟ್‌ನಲ್ಲಿ ದಾಖಲೆಯೊಂದಿಗೆ ಹೆಚ್ಚು ರನ್ ಗಳಿಸಿದರು. ಅದೇ ಸಮಯದಲ್ಲಿ, ಕೊರೊನಾ ವೈರಸ್ ಕಾರಣದಿಂದಾಗಿ ಐಪಿಎಲ್ 2021 ಅನ್ನು ಮುಂದೂಡುವುದಕ್ಕೂ ಮುಂಚೆಯೇ, 22 ವರ್ಷದ ಯುವ ಬ್ಯಾಟ್ಸ್‌ಮನ್ ಅತ್ಯುತ್ತಮ ಫಾರ್ಮ್ ತೋರಿಸಿದರು ಮತ್ತು 300 ಕ್ಕೂ ಹೆಚ್ಚು ರನ್ ಗಳಿಸಿದ್ದರು.

ಆದರೆ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾದ ಭಾರತೀಯ ತಂಡದಲ್ಲಿ ಶಾ ಅವರಿಗೆ ಸ್ಥಾನ ಸಿಗಲಿಲ್ಲ. ಇದರ ಹೊರತಾಗಿಯೂ, ಶ್ರೀಲಂಕಾ ಪ್ರವಾಸದಲ್ಲಿ ಏಕದಿನ ಮತ್ತು ಟಿ 20 ಸರಣಿಗೆ ಭಾರತ ತಂಡದಲ್ಲಿ ಅವರ ಆಯ್ಕೆ ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ: ದಯವಿಟ್ಟು ನನ್ನ ಕೊರೊನಾ ವರದಿಯ ಬಗ್ಗೆ ಯಾವುದೇ ವದಂತಿಗಳನ್ನು ಹರಡಬೇಡಿ; ವೃದ್ಧಿಮಾನ್ ಸಹಾ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ