ಬಾಲ್ ಟೆಂಪರಿಂಗ್ ಕಳ್ಳಾಟ ನಮ್ಮ ತಂಡದ ಬೌಲರ್​ಗಳಿಗೆ ಮುಂಚೆಯೇ ಗೊತ್ತಿತ್ತು; ಆಸಿಸ್ ಆಟಗಾರನ ಶಾಕಿಂಗ್ ಹೇಳಿಕೆ

ಅಂದು ಮೈದಾನದಲ್ಲಿ ಏನು ನಡೆದಿತ್ತೋ ಅದರ ಬಗ್ಗೆ ಆಸ್ಟ್ರೇಲಿಯಾದ ಬೌಲರ್‌ಗಳಿಗೆ ಮುಂಚೆಯೇ ತಿಳಿದಿತ್ತು ಎಂದು ಅವರು ಹೇಳಿದರು.

ಬಾಲ್ ಟೆಂಪರಿಂಗ್ ಕಳ್ಳಾಟ ನಮ್ಮ ತಂಡದ ಬೌಲರ್​ಗಳಿಗೆ ಮುಂಚೆಯೇ ಗೊತ್ತಿತ್ತು; ಆಸಿಸ್ ಆಟಗಾರನ ಶಾಕಿಂಗ್ ಹೇಳಿಕೆ
ಬಾಲ್ ಟೆಂಪರಿಂಗ್ ಕಳ್ಳಾಟದಲ್ಲಿ ಬಾಗಿಯಾಗಿದ್ದ ಆಸಿಸ್ ಆಟಗಾರರು
Follow us
ಪೃಥ್ವಿಶಂಕರ
|

Updated on: May 15, 2021 | 4:53 PM

2018ರ ಕೇಪ್ ಟೌನ್ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಟೆಸ್ಟ್ ಪಂದ್ಯ. ಈ ಟೆಸ್ಟ್ ಸಮಯದಲ್ಲಿ ಏನಾಯಿತು ಎಂಬುದು ಇಡೀ ವಿಶ್ವ ಕ್ರಿಕೆಟ್‌ನಲ್ಲಿ ಕಲಹ ಸೃಷ್ಟಿಸಿತ್ತು. ಆಸ್ಟ್ರೇಲಿಯಾ ಕ್ರಿಕೆಟ್ ಜಗತ್ತಿನ ಮುಂದೆ ತಲೆ ಬಾಗಿತು. ಈ ಘಟನೆಯು ಪಂದ್ಯದ ಸಮಯದಲ್ಲಿ ಬಾಲ್-ಟೆಂಪರಿಂಗ್​ಗೆ ಸಂಬಂಧಿಸಿದಾಗಿತ್ತು. ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ಅವರ ಆಜ್ಞೆಯ ಮೇರೆಗೆ ಆಗಿನ ಯುವ ಆಟಗಾರ ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್ ಈ ಕೆಲಸವನ್ನು ಮಾಡಿದ್ದ. ಈ ಘಟನೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಮೂವರು ಆಟಗಾರರಿಗೆ ಕಠಿಣ ಶಿಕ್ಷೆ ವಿಧಿಸಲಾಯಿತು.ಸ್ಮಿತ್ ಅವರನ್ನು ನಾಯಕತ್ವದಿಂದ ಹಾಗೂ ವಾರ್ನರ್ ಅವರಿಂದ ಉಪನಾಯಕ ಪಟ್ಟವನ್ನು ಕಿತ್ತುಕೊಳ್ಳಲಾಯಿತು. ಜೊತೆಗೆ ಇಬ್ಬರನ್ನೂ 12 ತಿಂಗಳ ಕಾಲ ನಿಷೇಧಿಸಲಾಯಿತು. ಅದೇ ಸಮಯದಲ್ಲಿ, ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್‌ನನ್ನು 9 ತಿಂಗಳು ನಿಷೇಧಿಸಲಾಯಿತು.

ಘಟನೆಯ ಬಗ್ಗೆ ಶಾಕಿಂಗ್ ಹೇಳಿಕೆ ಆ ಘಟನೆಯ 3 ವರ್ಷಗಳ ನಂತರ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್ ಈಗ ತಮ್ಮ ಮೌನವನ್ನು ಮುರಿದಿದ್ದಾರೆ ಮತ್ತು ಇಡೀ ಘಟನೆಯನ್ನು ವಿವರಿಸಿದ್ದಾರೆ. ಆ ಘಟನೆಯಲ್ಲಿ ಬ್ಯಾನ್‌ಕ್ರಾಫ್ಟ್ ಈ ಹಿಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದರು. ಜೊತೆಗೆ ಅಂದು ನಡೆದಿದ್ದ ಘಟನೆಯ ಬಗ್ಗೆ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. ಅಂದು ಮೈದಾನದಲ್ಲಿ ಏನು ನಡೆದಿತ್ತೋ ಅದರ ಬಗ್ಗೆ ಆಸ್ಟ್ರೇಲಿಯಾದ ಬೌಲರ್‌ಗಳಿಗೆ ಮುಂಚೆಯೇ ತಿಳಿದಿತ್ತು ಎಂದು ಅವರು ಹೇಳಿದರು. ವಾಸ್ತವವಾಗಿ, ಪಂದ್ಯದ ಸಮಯದಲ್ಲಿ, ಬ್ಯಾನ್‌ಕ್ರಾಫ್ಟ್ ಚೆಂಡನ್ನು ವಿರೋಪಗೊಳಿಸಿ ಮರಳು ಮಿಶ್ರಿತ ಕಾಗದವನ್ನು ತನ್ನ ಪ್ಯಾಂಟ್‌ನಲ್ಲಿ ಇಟ್ಟುಕೊಂಡಿದ್ದರು, ಅದರ ಚಿತ್ರಗಳನ್ನು ಮೈದಾನದಲ್ಲಿದ್ದ ಕ್ಯಾಮೆರಾದಿಂದ ಸೆರೆಹಿಡಿಯಲಾಗಿತ್ತು.

ಬಾಲ್ ಟೆಂಪರಿಂಗ್ ನಂತರ 2019 ರ ಆಶಸ್‌ನಲ್ಲಿ ಕಳೆದುಹೋದ ಅವಕಾಶ ಬಾಲ್-ಟೆಂಪರಿಂಗ್ ಘಟನೆಯ ನಂತರ, 2019 ರಲ್ಲಿ ಇಂಗ್ಲೆಂಡ್ ವಿರುದ್ಧದ ಆಶಸ್ ಸರಣಿಗೆ ಮರಳಲು ಬ್ಯಾನ್‌ಕ್ರಾಫ್ಟ್‌ಗೆ ಅವಕಾಶ ಸಿಕ್ಕಿತು. ಆ ಸರಣಿಯ 2 ಪಂದ್ಯಗಳಲ್ಲಿ ಕೇವಲ 44 ರನ್ ಗಳಿಸಲಷ್ಟೇ ಅವರಿಗೆ ಸಾಧ್ಯವಾಯಿತು. ಅಂದಿನಿಂದ, ಅವರು ಮತ್ತೆ ತಂಡದಲ್ಲಿ ತಮ್ಮ ಸ್ಥಾನವನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಅವರು ಬಿಗ್ ಬ್ಯಾಷ್‌ನಲ್ಲಿ ಪರ್ತ್ ಸ್ಕಾರ್ಚರ್ಸ್ ಪರ ಆಡುತ್ತಲೇ ಇದ್ದರು.

ನಾನು ತಂಡಕ್ಕೆ ಮರಳುವ ಬಾಗಿಲುಗಳನ್ನು ಮುಚ್ಚಿದೆ – ಬ್ಯಾನ್‌ಕ್ರಾಫ್ಟ್ ಬ್ಯಾನ್‌ಕ್ರಾಫ್ಟ್ ಪ್ರಸ್ತುತ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕೌಂಟಿ ಕ್ರಿಕೆಟ್‌ನಲ್ಲಿ ಡರ್ಹಾಮ್ ಪರ ಆಡುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಪುನರಾಗಮನದ ಬಗ್ಗೆ, ಇನ್ನು ಮುಂದೆ ಇದರ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ ಎಂದು ಬ್ಯಾನ್‌ಕ್ರಾಫ್ಟ್ ಹೇಳಿದರು. ನಾನು ಟಾರ್ಗೆಟ್ ಆಗಿದ್ದೇನೆ, ತಂಡದ ಬಾಗಿಲು ತೆರೆದಿದೆ, ಆದರೆ ಅದನ್ನು ನಾನೇ ಮುಚ್ಚಿದ್ದೇನೆ ಎಂದರು. ಜೊತೆಗೆ ಅದರ ಬಗ್ಗೆ ಯೋಚಿಸುವುದರಿಂದ ನಾನು ಮಾನಸಿಕ ಒತ್ತಡಕ್ಕೆ ಸಿಲುಕಲು ಬಯಸುವುದಿಲ್ಲ. ನಾನು ಉತ್ತಮವಾಗಿ ಆಡುವುದನ್ನು ಮುಂದುವರಿಸಿದರೆ, ನನ್ನ ಬ್ಯಾಟ್‌ನೊಂದಿಗೆ ನಾನು ರನ್ ಗಳಿಸುತ್ತಿದ್ದರೆ, ಖಂಡಿತವಾಗಿಯೂ ನನಗೆ ಮತ್ತೆ ಅವಕಾಶಗಳು ಸಿಗಲಿವೆ ಎಂದು ಬ್ಯಾನ್‌ಕ್ರಾಫ್ಟ್ ಹೇಳಿದರು.

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ