ನ್ಯೂಯಾರ್ಕ್ನಲ್ಲಿ ಪ್ರಿಯಾಂಕಾ ಚೋಪ್ರಾ ಆರಂಭಿಸಿದ ಐಷಾರಾಮಿ ರೆಸ್ಟೋರೆಂಟ್ ಹೇಗಿದೆ ನೋಡಿ
ಸಾಕಷ್ಟು ಸೆಲೆಬ್ರಿಟಿಗಳು ನಟನೆ ಜತೆಗೆ ಹೋಟೆಲ್ ಸೇರಿ ಮತ್ತಿತ್ಯಾದಿ ಉದ್ಯಮಗಳಲ್ಲಿ ತೊಡಗಿಕೊಳ್ಳುತ್ತಾರೆ. ನಟ ಸೋನು ಸೂದ್ ಸೇರಿ ಸಾಕಷ್ಟು ಸ್ಟಾರ್ಗಳು ಹೋಟೆಲ್ ಉದ್ಯಮ ಹೊಂದಿದ್ದಾರೆ. ಈ ಸಾಲಿಗೆ ಈಗ ಪ್ರಿಯಾಂಕಾ ಕೂಡ ಸೇರ್ಪಡೆಯಾಗಿದ್ದಾರೆ.

ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್ನಲ್ಲಿ ಗುರುತಿಸಿಕೊಂಡು ನಂತರ ಹಾಲಿವುಡ್ಗೆ ಪರಿಚಯಗೊಂಡರು. ಅಮೆರಿಕದ ಪಾಪ್ ಸಿಂಗರ್ ನಿಕ್ ಜೋನಸ್ ಅವರನ್ನು ವರಿಸಿದ ನಂತರದಲ್ಲಿ ಪ್ರಿಯಾಂಕಾ ಅಮೆರಿಕದಲ್ಲಿಯೇ ಸೆಟಲ್ ಆಗಿದ್ದಾರೆ. ವಿಶೇಷ ಎಂಬಂತೆ ಈಗ ಅವರು ಅಮೆರಿಕದ ಪ್ರಮುಖ ನಗರ ನ್ಯೂಯಾರ್ಕ್ನಲ್ಲಿ ರೆಸ್ಟೋರೆಂಟ್ ಒಂದನ್ನು ಆರಂಭಿಸಿದ್ದಾರೆ. ಇದರ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.
ಸಾಕಷ್ಟು ಸೆಲೆಬ್ರಿಟಿಗಳು ನಟನೆ ಜತೆಗೆ ಹೋಟೆಲ್ ಸೇರಿ ಮತ್ತಿತ್ಯಾದಿ ಉದ್ಯಮಗಳಲ್ಲಿ ತೊಡಗಿಕೊಳ್ಳುತ್ತಾರೆ. ನಟ ಸೋನು ಸೂದ್ ಸೇರಿ ಸಾಕಷ್ಟು ಸ್ಟಾರ್ಗಳು ಹೋಟೆಲ್ ಉದ್ಯಮ ಹೊಂದಿದ್ದಾರೆ. ಈ ಸಾಲಿಗೆ ಈಗ ಪ್ರಿಯಾಂಕಾ ಕೂಡ ಸೇರ್ಪಡೆಯಾಗಿದ್ದಾರೆ. ಅವರ ಈ ರೆಸ್ಟೋರೆಂಟ್ ಉದ್ಯಮ ಕನಸಾಗಿತ್ತಂತೆ.
View this post on Instagram
ಈ ಹೋಟೆಲ್ಗೆ ಸೋನಾ ಎಂದು ಪ್ರಿಯಾಂಕಾ ಹೆಸರು ಇಟ್ಟಿದ್ದಾರೆ. ಇದು ಕೇವಲ ರೆಸ್ಟೋರೆಂಟ್ ಮಾತ್ರವಲ್ಲ ಅವರ ಕನಸು ಕೂಡ ಹೌದಂತೆ. ಹೋಟೆಲ್ ಎದುರು ನಿಂತು ಫೋಟೋ ಹಾಕಿರುವ ಪ್ರಿಯಾಂಕಾ ಈ ಬಗ್ಗೆ ಬರೆದುಕೊಂಡಿದ್ದಾರೆ. ‘ನಾನು ಸೋನಾದಲ್ಲಿದ್ದೇನೆ ಎಂಬುದನ್ನು ನಂಬೋಕೆ ಸಾಧ್ಯವಾಗುತ್ತಿಲ್ಲ. 3 ವರ್ಷದ ಪ್ಲ್ಯಾನಿಂಗ್ನಿಂದ ಈ ರೆಸ್ಟೋರೆಂಟ್ ಸಿದ್ಧಗೊಂಡಿದೆ. ಕಿಚನ್ಗೆ ತೆರಳಿ ತಂಡವನ್ನು ಮೀಟ್ ಮಾಡೋಕೆ ನಾನು ಉತ್ಸುಕಳಾಗಿದ್ದೇನೆ. ಸೋನಾ ಒಂದು ಅದ್ಭುತ ಅನುಭವ. ನನಗಾಗಿ ವಿಶೇಷ ಡೈನಿಂಗ್ ಹಾಲ್ ಮಾಡಿಕೊಂಡಿದ್ದೇನೆ. ಇಲ್ಲಿ ಅದ್ಭುತ ಆಹಾರ ಸಿಗಲಿದೆ ಸೋನಾದ ಅನುಭವ ಭಿನ್ನವಾಗಿರಲಿದೆ’ ಎಂದು ಬರೆದುಕೊಂಡಿದ್ದಾರೆ.
View this post on Instagram
ಅಮೆರಿಕದ ಗಾಯಕ ನಿಕ್ ಜೋನಸ್ ಅವರನ್ನು ಮದುವೆ ಆದ ಬಳಿಕ ಪ್ರಿಯಾಂಕಾ ಚೋಪ್ರಾ ಕೂಡ ಅಮೆರಿಕದಲ್ಲೇ ಸೆಟ್ಲ್ ಆಗಿದ್ದಾರೆ. ಭಾರತಕ್ಕಿಂತಲೂ ಅವರು ಅಲ್ಲಿಯೇ ಹೆಚ್ಚು ಸಮಯ ಕಳೆಯುತ್ತಾರೆ. ಬಾಲಿವುಡ್ಗಿಂತಲೂ ಹೆಚ್ಚಾಗಿ ಹಾಲಿವುಡ್ ಮಂದಿಯ ಜೊತೆ ಅವರ ಒಡನಾಟ ಬೆಳೆದಿದೆ. ಹಾಗೆಯೇ ಅಮೆರಿಕದ ಜನರ ಜೊತೆಗೆ ಅವರು ಬೆರೆತುಹೋಗಿದ್ದಾರೆ. ಹಾಗಾಗಿ, ಅಮೆರಿಕದಲ್ಲಿ ಆಚರಿಸಿದ್ದ ‘ನ್ಯಾಷನಲ್ ಸೆಲ್ಫೀ ಡೇ’ ಪ್ರಿಯಾಂಕಾ ಸಂಭ್ರಮಿಸಿದ್ದರು. ಈಗ ಅವರು ಹೋಟೆಲ್ ಕೂಡ ಆರಂಭಿಸಿದ್ದಾರೆ.
ಇದನ್ನೂ ಓದಿ: ನಾನು ಮಾಡಿರುವ ಹಲವು ಸಿನಿಮಾಗಳನ್ನು ಜನರು ನೋಡಿಯೇ ಇಲ್ಲ; ಪ್ರಿಯಾಂಕಾ ಚೋಪ್ರಾ
ರಾಷ್ಟ್ರೀಯ ಸೆಲ್ಫೀ ದಿನ; ಇದನ್ನು ಸರಿಯಾಗಿ ಸೆಲೆಬ್ರೇಟ್ ಮಾಡೋದು ಹೇಗೆ? ಪ್ರಿಯಾಂಕಾ ಚೋಪ್ರಾ ಹೇಳ್ತಾರೆ ಕೇಳಿ