ರಾಷ್ಟ್ರೀಯ ಸೆಲ್ಫೀ ದಿನ; ಇದನ್ನು ಸರಿಯಾಗಿ ಸೆಲೆಬ್ರೇಟ್​ ಮಾಡೋದು ಹೇಗೆ? ಪ್ರಿಯಾಂಕಾ ಚೋಪ್ರಾ ಹೇಳ್ತಾರೆ ಕೇಳಿ

National Selfie Day: ಅಮೆರಿಕದಲ್ಲಿ ಇಂದು ‘ನ್ಯಾಷನಲ್​ ಸೆಲ್ಫೀ ಡೇ’ ಆಚರಿಸಲಾಗುತ್ತಿದೆ. ಅದರಲ್ಲಿ ಬಾಲಿವುಡ್​-ಹಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಕೂಡ ಭಾಗಿಯಾಗಿ ಸಂಭ್ರಮಿಸಿದ್ದಾರೆ.

ರಾಷ್ಟ್ರೀಯ ಸೆಲ್ಫೀ ದಿನ; ಇದನ್ನು ಸರಿಯಾಗಿ ಸೆಲೆಬ್ರೇಟ್​ ಮಾಡೋದು ಹೇಗೆ? ಪ್ರಿಯಾಂಕಾ ಚೋಪ್ರಾ ಹೇಳ್ತಾರೆ ಕೇಳಿ
ಪ್ರಿಯಾಂಕಾ ಚೋಪ್ರಾ
Follow us
TV9 Web
| Updated By: ಮದನ್​ ಕುಮಾರ್​

Updated on: Jun 22, 2021 | 12:06 PM

ಪ್ರತಿ ದಿನವೂ ಒಂದಲ್ಲ ಒಂದು ವಿಷಯವನ್ನು ಜನರು ಸೆಲೆಬ್ರೇಟ್​ ಮಾಡುತ್ತಾರೆ. ಇತ್ತೀಚೆಗೆ ಅಪ್ಪಂದಿರ ದಿನ, ಯೋಗ ದಿನ ಮುಗಿಯಿತು. ಅದರ ಬೆನ್ನಲ್ಲೇ ಸೆಲ್ಫೀ ದಿನ ಬಂದಿದೆ! ಹೌದು, ಇಂದು (ಜೂ.22) ರಾಷ್ಟ್ರೀಯ ಸೆಲ್ಫೀ ದಿನ. ಅಮೆರಿಕದಲ್ಲಿ ಇದನ್ನು ಆಚರಿಸಲಾಗುತ್ತಿದೆ. ಅಲ್ಲಿನ ಜನರು ಇಂದು ಬಗೆಬಗೆಯ ಸೆಲ್ಫೀಗಳನ್ನು ಕ್ಲಿಕ್ಕಿಸಿಕೊಂಡು ಅವುಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡುವ ಮೂಲಕ ಈ ದಿನವನ್ನು ಆಚರಿಸುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಕೂಡ ಇದರಲ್ಲಿ ಭಾಗಿ ಆಗಿದ್ದಾರೆ.

ಅಮೆರಿಕದ ಗಾಯಕ ನಿಕ್​ ಜೋನಸ್​ ಅವರನ್ನು ಮದುವೆ ಆದ ಬಳಿಕ ಪ್ರಿಯಾಂಕಾ ಚೋಪ್ರಾ ಕೂಡ ಅಮೆರಿಕದಲ್ಲೇ ಸೆಟ್ಲ್​ ಆಗಿದ್ದಾರೆ. ಭಾರತಕ್ಕಿಂತಲೂ ಅವರು ಅಲ್ಲಿಯೇ ಹೆಚ್ಚು ಸಮಯ ಕಳೆಯುತ್ತಾರೆ. ಬಾಲಿವುಡ್​ಗಿಂತಲೂ ಹೆಚ್ಚಾಗಿ ಹಾಲಿವುಡ್​ ಮಂದಿಯ ಜೊತೆ ಅವರ ಒಡನಾಟ ಬೆಳೆದಿದೆ. ಹಾಗೆಯೇ ಅಮೆರಿಕದ ಜನರ ಜೊತೆಗೆ ಅವರು ಬೆರೆತುಹೋಗಿದ್ದಾರೆ. ಹಾಗಾಗಿ, ಅಮೆರಿಕದಲ್ಲಿ ಇಂದು ಆಚರಿಸಲಾಗುತ್ತಿರುವ ‘ನ್ಯಾಷನಲ್​ ಸೆಲ್ಫೀ ಡೇ’ ಅನ್ನು ಪಿಗ್ಗಿ ಕೂಡ ಸಂಭ್ರಮಿಸಿದ್ದಾರೆ.

ನೀಲಿ ಮತ್ತು ಬಿಳಿ ಬಣ್ಣದ ಡ್ರೆಸ್​ ತೊಟ್ಟು, ಕೂಲಿಂಗ್​ ಗ್ಲಾಸ್​ ಧರಿಸಿ, ನಸು ನಗು ಬೀರುತ್ತಿರುವ ಭಂಗಿಯಲ್ಲಿ ಪ್ರಿಯಾಂಕಾ ಚೋಪ್ರಾ ಸೆಲ್ಫೀ ಕ್ಲಿಕ್​ ಮಾಡಿಕೊಂಡಿದ್ದಾರೆ. ಅದನ್ನು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ‘ರಾಷ್ಟ್ರೀಯ ಸೆಲ್ಫೀ ದಿನವನ್ನು ಸರಿಯಾಗಿ ಆಚರಿಸುವ ಸರಿಯಾದ ಏಕೈಕ ಮಾರ್ಗ ಇದು’ ಎಂದು ಅವರು ಆ ಫೋಟೋಗೆ ಕ್ಯಾಪ್ಷನ್​ ನೀಡಿದ್ದಾರೆ. ಇದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ಪ್ರಿಯಾಂಕಾ ಚೋಪ್ರಾಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಬರೋಬ್ಬರಿ 64.6 ಮಿಲಿಯನ್​ (6.46 ಕೋಟಿ) ಮಂದಿ ಫಾಲೋ ಮಾಡುತ್ತಾರೆ. ಪ್ರಿಯಾಂಕಾ ಈ ಫೋಟೋವನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಅದನ್ನು 6 ಲಕ್ಷಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ. ಸಾವಿರಾರು ಜನರು ಕಮೆಂಟ್​ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಇದನ್ನೂ ಓದಿ:

ನಾನು ಮಾಡಿರುವ ಹಲವು ಸಿನಿಮಾಗಳನ್ನು ಜನರು ನೋಡಿಯೇ ಇಲ್ಲ; ಪ್ರಿಯಾಂಕಾ ಚೋಪ್ರಾ

Billboard Music Awards 2021: ಬಿಲ್​ಬೋರ್ಡ್​ ಮ್ಯೂಸಿಕ್​ ಅವಾರ್ಡ್​ ಸಮಾರಂಭದಲ್ಲಿ ಗ್ಲಾಮರಸ್​ ಡ್ರೆಸ್​ ಧರಿಸಿ ಮಿಂಚಿದ ಪ್ರಿಯಾಂಕಾ ಚೋಪ್ರಾ

ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ