Billboard Music Awards 2021: ಬಿಲ್ಬೋರ್ಡ್ ಮ್ಯೂಸಿಕ್ ಅವಾರ್ಡ್ ಸಮಾರಂಭದಲ್ಲಿ ಗ್ಲಾಮರಸ್ ಡ್ರೆಸ್ ಧರಿಸಿ ಮಿಂಚಿದ ಪ್ರಿಯಾಂಕಾ ಚೋಪ್ರಾ
Priyanka Chopra - Nick Jonas: ಇಟಲಿಯ ಪ್ರತಿಷ್ಠಿತ ಫ್ಯಾಷನ್ ಡಿಸೈನಿಂಗ್ ಕಂಪನಿ ವಿನ್ಯಾಸಗೊಳಿಸಿದ ಕಾಸ್ಟ್ಯೂಮ್ ಧರಿಸಿ ಪ್ರಿಯಾಂಕಾ ಮಾಧ್ಯಮಗಳ ಕ್ಯಾಮರಾಗಳಿಗೆ ಪೋಸ್ ನೀಡಿದರು. ಥೈ ಹೈ ಸ್ಲಿಟ್ ಗೌನ್ನಲ್ಲಿ ಅವರು ಕಂಗೊಳಿಸಿದರು.
ಅಮೆರಿಕದ ಗಾಯಕ ನಿಕ್ ಜೋನಸ್ ಅವರನ್ನು ಮದುವೆ ಆದ ಬಳಿಕ ನಟಿ ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್ ಮಂದಿಗೆ ಹೆಚ್ಚು ಹತ್ತಿರ ಆಗಿದ್ದಾರೆ. ಬಾಲಿವುಡ್ಗಿಂತಲೂ ಹೆಚ್ಚಾಗಿ ಅವರು ಹಾಲಿವುಡ್ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲಿನ ಅನೇಕ ಸಮಾರಂಭಗಳಲ್ಲಿ ಅವರು ಮುಂಚೂಣಿಯಲ್ಲಿ ಭಾಗವಹಿಸುತ್ತಿದ್ದಾರೆ. ಈ ವರ್ಷ ಆಸ್ಕರ್ ನಾಮಿನೇಷನ್ ಘೋಷಣೆ ಮಾಡಿದ್ದ ಅವರು, ಈಗ ಬಿಲ್ಬೋರ್ಡ್ ಮ್ಯೂಸಿಕ್ ಅವಾರ್ಡ್ ಸಮಾರಂಭದಲ್ಲಿ ಮಿಂಚಿದ್ದಾರೆ. ಅವರು ಧರಿಸಿದ್ದ ಕಾಸ್ಟ್ಯೂಮ್ ಎಲ್ಲರ ಗಮನ ಸೆಳೆಯುತ್ತಿದೆ.
ಲಾಸ್ ಏಂಜಲೀಸ್ನ ಮೈಕ್ರೋಸಾಫ್ಟ್ ಥಿಯೇಟರ್ನಲ್ಲಿ ಭಾನುವಾರ (ಮೇ 23) ‘ಬಿಲ್ಬೋರ್ಡ್ ಮ್ಯೂಸಿಕ್ ಅವಾರ್ಡ್ಸ್ 2021’ ಕಾರ್ಯಕ್ರಮ ನೆರವೇರಿತು. ಪತಿ ನಿಕ್ ಜೋನಸ್ ಜೊತೆ ಬಂದು ರೆಡ್ ಕಾರ್ಪೆಟ್ನಲ್ಲಿ ಪ್ರಿಯಾಂಕಾ ಚೋಪ್ರಾ ಹೆಜ್ಜೆ ಹಾಕಿದರು. ಇಂಥ ಸಮಾರಂಭಗಳಲ್ಲಿ ಭಾಗವಹಿಸುವಾಗ ಫ್ಯಾಷನ್ ಬಗ್ಗೆ ಅವರು ಹೆಚ್ಚು ಕಾಳಜಿ ವಹಿಸುತ್ತಾರೆ. ಗ್ಲಾಮರಸ್ ಆದಂತಹ ಕಾಸ್ಟ್ಯೂಮ್ಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ. ಈ ಬಾರಿಯೂ ಅದು ಮುಂದುವರಿದಿದೆ. ಎಲ್ಲರ ಕಣ್ಣು ಕುಕ್ಕುವಂತಹ ಗ್ಲಾಮರಸ್ ಉಡುಗೆ ಧರಿಸಿ ಪ್ರಿಯಾಂಕಾ ಚೋಪ್ರಾ ಆಗಮಿಸಿದ್ದರು.
ಇಟಲಿಯ ಪ್ರತಿಷ್ಠಿತ ಫ್ಯಾಷನ್ ಡಿಸೈನಿಂಗ್ ಕಂಪನಿ ವಿನ್ಯಾಸಗೊಳಿಸಿದ ಕಾಸ್ಟ್ಯೂಮ್ ಧರಿಸಿ ಪ್ರಿಯಾಂಕಾ ಚೋಪ್ರಾ ಮಾಧ್ಯಮಗಳ ಕ್ಯಾಮರಾಗಳಿಗೆ ಪೋಸ್ ನೀಡಿದರು. ಥೈ ಹೈ ಸ್ಲಿಟ್ ಗೌನ್ನಲ್ಲಿ ಅವರು ಕಂಗೊಳಿಸಿದರು. ಅದಕ್ಕೊಪ್ಪುವ ಐಷಾರಾಮಿ ಆಭರಣಗಳನ್ನೂ ಪ್ರಿಯಾಂಕಾ ಧರಿಸಿದ್ದರು. ಈ ಸಂದರ್ಭದ ಫೋಟೋಗಳನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಅವರ ಫ್ಯಾಷನ್ ಅಭಿರುಚಿಗೆ ಅವರ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
View this post on Instagram
View this post on Instagram
ಅಮೆರಿಕದಲ್ಲಿ ನೆಲೆಸಿದ್ದರೂ ಕೂಡ ಭಾರತದ ಬಗ್ಗೆ ಪ್ರಿಯಾಂಕಾ ಕಾಳಜಿ ಹೊಂದಿದ್ದಾರೆ. ಕೊರೊನಾ ಎರಡನೇ ಅಲೆಯ ಹಾವಳಿಗೆ ಭಾರತದಲ್ಲಿ ಲಕ್ಷಾಂತರ ಜನರ ಸಾವು ಸಂಭವಿಸುತ್ತಿರುವಾಗ ಅವರು ಸುಮ್ಮನೆ ಕೂರಲಿಲ್ಲ. ತಾಯ್ನಾಡಿಗೆ ವ್ಯಾಕ್ಸಿನ್ ನೀಡುವಂತೆ ಅಮೆರಿಕದ ಅಧ್ಯಕ್ಷಕರಿಗೆ ‘ದೇಸಿ ಗರ್ಲ್’ ಮನವಿ ಮಾಡಿದ್ದರು. ಅಲ್ಲದೇ, ದೇಣಿಗೆ ಸಂಗ್ರಹಕ್ಕೆ ಕರೆ ನೀಡಿದ್ದರು. ಆ ಮೂಲಕ ಕೊವಿಡ್ ವಿರುದ್ಧದ ಭಾರತದ ಹೋರಾಟಕ್ಕೆ ಅವರು ಸಾಥ್ ನೀಡಿದ್ದರು.
ಇದನ್ನೂ ಓದಿ:
ಪ್ರಿಯಾಂಕಾ ಚೋಪ್ರಾ ನನ್ನ ಅವಕಾಶ ಕಿತ್ತುಕೊಂಡರು; ಮೀರಾ ಚೋಪ್ರಾ ಗಂಭೀರ ಆರೋಪ
ಎಲ್ಲೇ ಇದ್ದರೂ ಭಾರತೀಯ ಸಂಸ್ಕೃತಿ ಮರೆಯದ ಪ್ರಿಯಾಂಕಾ ಚೋಪ್ರಾ! ಲಂಡನ್ನಲ್ಲಿ ದೇಸಿ ಗರ್ಲ್ ಹೋಳಿ