AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Poonam Pandey: ಪಡ್ಡೆಗಳ ದುಡ್ಡು ಕಬಳಿಸಲು ಹೊಸ ಐಡಿಯಾ ಮಾಡಿದ ಹಾಟ್​ ಬೆಡಗಿ ಪೂನಂ ಪಾಂಡೆ

ಪೂನಂ ಪಾಂಡೆ ತಮ್ಮದೇ ಆ್ಯಪ್​ ಹೊಂದಿದ್ದಾರೆ. ಅಲ್ಲಿ ಅನೇಕ ಹಸಿಬಿಸಿ ವಿಡಿಯೋಗಳನ್ನು, ಮಾದಕ ಫೋಟೋಗಳನ್ನು ಅಪ್​ಲೋಡ್​ ಮಾಡುತ್ತಾರೆ. ಜೊತೆಗೆ ‘ಓನ್ಲಿಫ್ಯಾನ್ಸ್​’ ಜಾಲತಾಣದ ಮೂಲಕವೂ ಅವರು ಹಣ ಗಳಿಸಲು ಶುರುಮಾಡಿದ್ದಾರೆ.

Poonam Pandey: ಪಡ್ಡೆಗಳ ದುಡ್ಡು ಕಬಳಿಸಲು ಹೊಸ ಐಡಿಯಾ ಮಾಡಿದ ಹಾಟ್​ ಬೆಡಗಿ ಪೂನಂ ಪಾಂಡೆ
ಪೂನಂ ಪಾಂಡೆ
ಮದನ್​ ಕುಮಾರ್​
| Edited By: |

Updated on: May 24, 2021 | 3:15 PM

Share

ತಮ್ಮ ಮಾದಕತೆಯಿಂದಲೇ ಫೇಮಸ್​ ಆಗಿದ್ದಾರೆ ನಟಿ ಪೂನಂ ಪಾಂಡೆ. ಅದರ ಜೊತೆಗೆ ಅವರು ಆಗಾಗ ಕಾಂಟ್ರವರ್ಸಿ ಮೂಲಕವೂ ಸುದ್ದಿ ಆಗುತ್ತಾರೆ. ಕಳೆದ ವರ್ಷ ಅವರಿಗೆ ಸ್ಯಾಮ್​ ಬಾಂಬೆ ಎಂಬುವವರ ಜೊತೆ ಮದುವೆ ಆಗಿತ್ತು. ಆದರೆ ಕೆಲವೇ ದಿನಗಳಲ್ಲಿ ಆ ಮದುವೆ ಮುರಿದುಬಿತ್ತು. ಸೋಶಿಯಲ್​ ಮೀಡಿಯಾದಲ್ಲಿ ಅವರಿಗೆ ಸಿಕ್ಕಾಪಟ್ಟೆ ಫ್ಯಾನ್​ ಫಾಲೋಯಿಂಗ್​ ಇದೆ. ಲಕ್ಷಾಂತರ ಜನರು ಅವರನ್ನು ಫಾಲೋ ಮಾಡುತ್ತಿದ್ದಾರೆ. ಅದರಲ್ಲಿ ಪಡ್ಡೆ ಹುಡುಗರ ಸಂಖ್ಯೆಯೇ ಜಾಸ್ತಿ. ಅದಕ್ಕೆ ಕಾರಣ ಬೇರೆಯೇ ಇದೆ.

ಬೇರೆಲ್ಲ ಸೆಲೆಬ್ರಿಟಿಗಳು ತಮ್ಮ ಸಿನಿಮಾ, ವೆಬ್​ ಸಿರೀಸ್​ ಮುಂತಾದ ಕಂಟೆಂಟ್​ಗಳನ್ನು ಪ್ರಚಾರ ಮಾಡಲು ಹೆಚ್ಚಾಗಿ ಸೋಶಿಯಲ್​ ಮೀಡಿಯಾ ಬಳಸುತ್ತಾರೆ. ಆದರೆ ಪೂನಂ ಪಾಂಡೆ ಕೈಯಲ್ಲಿ ಕೇಳಿಕೊಳ್ಳುವಂತಹ ಯಾವುದೇ ಆಫರ್​ ಇಲ್ಲ. ಅದರ ಬದಲಾಗಿ ಅವರು ತಮ್ಮ ಮೈಮಾಟ ಪ್ರದರ್ಶಿಸಿ ಪಡ್ಡೆಗಳ ನಿದ್ದೆ ಕೆಡಿಸುತ್ತಾರೆ. ಅದರಿಂದ ಅವರಿಗೆ ಸಿಕ್ಕಾಪಟ್ಟೆ ಕಮಾಯಿ ಆಗಲಿದೆ ಎಂಬುದು ಅಚ್ಚರಿಯ ವಿಷಯ.

ಹೌದು, ಪೂನಂ ಪಾಂಡೆ ತಮ್ಮದೇ ಆ್ಯಪ್​ ಹೊಂದಿದ್ದಾರೆ. ಅಲ್ಲಿ ಅನೇಕ ಹಸಿಬಿಸಿ ವಿಡಿಯೋಗಳನ್ನು, ಮಾದಕ ಫೋಟೋಗಳನ್ನು ಅಪ್​ಲೋಡ್​ ಮಾಡುತ್ತಾರೆ. ಆ್ಯಪ್​ ಡೌನ್​ಲೋಡ್​ ಮಾಡಿಕೊಂಡು ಚಂದದಾರಾರಾದವರಿಗೆ ಆ ವಿಡಿಯೋ ಮತ್ತು ಫೋಟೋಗಳು ಲಭ್ಯ ಆಗುತ್ತವೆ. ಚಂದದಾರರು ಹೆಚ್ಚಿದಷ್ಟೂ ಪೂನಂ ಪಾಂಡೆಗೆ ಹಣ ಹೆಚ್ಚುತ್ತದೆ. ಅದೇ ರೀತಿ ಅವರು ಇನ್ನೊಂದು ಮಾರ್ಗವನ್ನೂ ಕಂಡುಕೊಂಡಿದ್ದಾರೆ. ‘ಓನ್ಲಿಫ್ಯಾನ್ಸ್​’ ಎಂಬ ಜಾಲತಾಣದ ಮೂಲಕವೂ ಅವರು ಹಣ ಗಳಿಸಲು ಶುರುಮಾಡಿದ್ದಾರೆ.

ಇಂಗ್ಲೆಂಡ್​ ಮೂಲದ ಓನ್ಲಿಫ್ಯಾನ್ಸ್​ ಜಾಲತಾಣದಲ್ಲಿ ಪೂನಂ ಪಾಂಡೆ ಖಾತೆ ಹೊಂದಿದ್ದಾರೆ. ಅಲ್ಲಿ ಅವರು ಹಾಕುವ ವಿಡಿಯೋಗಳನ್ನು ನೋಡಬೇಕು ಎಂದರೆ ಜನರು ಹಣ ನೀಡಬೇಕು. ‘ಇಂದು ರಾತ್ರಿ ಓನ್ಲಿಫ್ಯಾನ್ಸ್​ನಲ್ಲಿ ನನ್ನ ಪೇಜ್​ ನೋಡುತ್ತಿರಿ. ಅಲ್ಲಿ ತುಂಬ ಆಸಕ್ತಿಕರವಾಗಿ ಏನನ್ನೋ ಪೋಸ್ಟ್​ ಮಾಡುತ್ತೇನೆ’ ಎಂದು ಅವರು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಆ ಮೂಲಕ ಪಡ್ಡೆ ಹುಡುಗರನ್ನು ಓನ್ಲಿಫ್ಯಾನ್ಸ್​ ಜಾಲತಾಣದತ್ತ ಸೆಳೆದುಕೊಳ್ಳಲು ಪೂನಂ ಪಾಂಡೆ ಸ್ಕೆಜ್​ ಹಾಕಿದ್ದಾರೆ. ವಿಷಯ ಹೀಗಿದೆ ಎಂದಮೇಲೆ ಆ ಜಾಲತಾಣಕ್ಕೆ ಚಂದದಾರರಾಗುವುದು ಬಿಡುವುದು ಜನರ ಆಯ್ಕೆಗೆ ಬಿಟ್ಟ ವಿಚಾರ.

ಇದನ್ನೂ ಓದಿ:

ಗೋವಾದಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ: ನಟಿ ಪೂನಂ ಪಾಂಡೆ ಅಂದರ್

ಲೈಂಗಿಕ ಕಿರುಕುಳ: ಮದುವೆಯಾದ ಎರಡೇ ವಾರಕ್ಕೆ ಪತಿಯನ್ನ ಅರೆಸ್ಟ್ ಮಾಡಿಸಿದ ಪೂನಂ ಪಾಂಡೆ

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More