AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವನದಲ್ಲಿ ಶುಭಾ ಪೂಂಜಾ ಕಳೆದುಕೊಂಡಿದ್ದ ಅಮೂಲ್ಯ ವ್ಯಕ್ತಿಗಳನ್ನು ಮರಳಿ ಕೊಡಿಸಿದ ಬಿಗ್​ ಬಾಸ್​; ಯಾರವರು?

Bigg Boss Kannada: ಬಿಗ್​ ಬಾಸ್​ನಲ್ಲಿ ಭಾಗವಹಿಸಿದ್ದಕ್ಕಾಗಿ ಶುಭಾ ಪೂಂಜಾ ಬದುಕಿನಲ್ಲಿ ಅನೇಕ ಬದಲಾವಣೆಗಳಾಗಿವೆ. ಆ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

ಜೀವನದಲ್ಲಿ ಶುಭಾ ಪೂಂಜಾ ಕಳೆದುಕೊಂಡಿದ್ದ ಅಮೂಲ್ಯ ವ್ಯಕ್ತಿಗಳನ್ನು ಮರಳಿ ಕೊಡಿಸಿದ ಬಿಗ್​ ಬಾಸ್​; ಯಾರವರು?
ನಟಿ ಶುಭಾ ಪೂಂಜಾ
ಮದನ್​ ಕುಮಾರ್​
|

Updated on: May 24, 2021 | 12:21 PM

Share

‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ಅರ್ಧಕ್ಕೆ ನಿಂತಿದ್ದರಿಂದ ಕಿರುತೆರೆ ವೀಕ್ಷಕರಿಗೆ ಬೇಜಾರಾಯಿತು. ಕೊವಿಡ್​-19 ಮಿತಿ ಮೀರಿ ಹರಡುತ್ತಿರುವುದರಿಂದ ಗಡಿಬಿಡಿಯಲ್ಲಿ ಶೋ ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾಯಿತು. ಮನೆಯಿಂದ ಹೊರಬಂದ ಸ್ಪರ್ಧಿಗಳಿಗೆ ಕೊನೇ ಕ್ಷಣದಲ್ಲಿ ಸುದೀಪ್ ಜೊತೆ​ ಮಾತನಾಡಲು ಕೂಡ ಸಾಧ್ಯವಾಗಿರಲಿಲ್ಲ. ಹಾಗಾಗಿ ಅವರೆಲ್ಲರಿಗೂ ಮತ್ತೆ ಕಿಚ್ಚಿನ ಜೊತೆ ಮಾತನಾಡಲು ಕಲರ್ಸ್​ ಕನ್ನಡ ವಾಹಿನಿ ಒಂದು ಅವಕಾಶ ಮಾಡಿಕೊಟ್ಟಿದೆ. ವರ್ಚುವಲ್​ ಮೀಟ್​ ಮೂಲಕ ಸುದೀಪ್​ ಜೊತೆ ಬಿಗ್​ ಬಾಸ್​ ಸ್ಪರ್ಧಿಗಳು ಮಾತನಾಡಿದ್ದಾರೆ. ಈ ವೇಳೆ ನಟಿ ಶುಭಾ ಪೂಂಜಾ ಕೆಲವು ವಿಚಾರಗಳನ್ನು ಹಂಚಿಕೊಂಡರು.

ಬಿಗ್​ ಬಾಸ್​ನಲ್ಲಿ ಭಾಗವಹಿಸಿದ್ದಕ್ಕಾಗಿ ಶುಭಾ ಪೂಂಜಾ ಬದುಕಿನಲ್ಲಿ ಅನೇಕ ಬದಲಾವಣೆಗಳಾಗಿವೆ. ಆ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ‘ಇದು ನನ್ನ ಜೀವನದಲ್ಲಿ ನಾನು ತೆಗೆದುಕೊಂಡು ಬೆಸ್ಟ್​ ನಿರ್ಧಾರವಾಗಿತ್ತು. ಬಿಗ್​ ಬಾಸ್​ನಲ್ಲಿ ಭಾಗವಹಿಸಿ ಬಂದ ಬಳಿಕ ನನ್ನ ಇಮೇಜ್​ ಬದಲಾಗಿದೆ. ನಿನ್ನ ಬಗ್ಗೆ ಹೆಮ್ಮೆ ಇದೆ ಎಂದು ನನ್ನ ಹುಡುಗ (ಫಿಯಾನ್ಸೆ ಸುಮಂತ್​) ಹೇಳಿದ. ಜನರು ನನ್ನನ್ನು ಮತ್ತೆ ಇಷ್ಟಪಡಲು ಆರಂಭಿಸಿದ್ದಾರೆ’ ಎಂದು ಶುಭಾ ಪೂಂಜಾ ಮಾತು ಆರಂಭಿಸಿದರು.

‘ಮೊಗ್ಗಿನ ಮನಸು ಸಿನಿಮಾ ಆದ ಬಳಿಕ ನನಗೆ ಹೆಚ್ಚು ಮಹಿಳಾಭಿಮಾನಿಗಳು ಇದ್ದರು. ಆದರೆ ನಂತರ ಎಲ್ಲೋ ಒಂದು ಕಡೆ ಆ ಫೀಮೇಲ್​ ಫ್ಯಾನ್​ ಫಾಲೋಯಿಂಗ್​ ಸಂಪೂರ್ಣ ಕುಸಿದು ಹೋಗಿತ್ತು. ಈ ವಿಚಾರದಲ್ಲಿ ನಾನು ಸುಳ್ಳು ಹೇಳಬಾರದು. ಬರೀ ಪಡ್ಡೆ ಹುಡುಗರ ಫ್ಯಾನ್​ ಫಾಲೋಯಿಂಗ್​ ಇತ್ತು. ಆದರೆ ಇವತ್ತು ನಂಬಲಾರದ ರೀತಿಯಲ್ಲಿ ಮಹಿಳಾಭಿಮಾನಿಗಳು ಮತ್ತೆ ಸಿಕ್ಕಿದ್ದಾರೆ. ದಿನಕ್ಕೆ ಸಾವಿರಾರು ಮೆಸೇಜ್​ಗಳು ಬರುತ್ತಿವೆ’ ಎಂದು ಶುಭಾ ಪೂಂಜಾ ಖುಷಿ ವ್ಯಕ್ತಪಡಿಸಿದ್ದಾರೆ.

‘ಮಹಿಳಾಭಿಮಾನಿಗಳ ಮನೆಯಲ್ಲಿ ಇರುವ ತಂದೆ-ತಾಯಿ, ಚಿಕ್ಕ ಮಕ್ಕಳು ಕೂಡ ನನಗೆ ಅಭಿಮಾನಿಗಳಾಗಿದ್ದಾರಂತೆ. ಅದನ್ನು ಕೇಳಿ ನನಗೆ ಅಪಾರ ಖುಷಿ ಆಯಿತು. ಭಾವುಕಳಾಗಿ ಅತ್ತುಬಿಟ್ಟೆ. ಮತ್ತೆ ಇಷ್ಟೊಂದು ಫ್ಯಾನ್​ ಫಾಲೋಯಿಂಗ್​ ಸಿಕ್ಕಿದ್ದು ಬಿಗ್​ ಬಾಸ್​ನಿಂದಾಗಿ. ಈ ಶೋನಿಂದ ಯಾರಿಗೆ ಏನು ಸಿಕ್ಕಿದೆಯೋ ಗೊತ್ತಿಲ್ಲ. ಇಷ್ಟು ವರ್ಷ ಕಷ್ಟಪಟ್ಟಿದ್ದಕ್ಕೆ ಇಂದು ಬಿಗ್​ ಬಾಸ್​ ನನಗೆ ಖುಷಿ ನೀಡಿದೆ’ ಎಂದು ಶುಭಾ ಪೂಂಜಾ ಹೇಳಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಇದ್ದಾಗಲೂ ಕೂಡ ಶುಭಾ ಪೂಂಜಾ ತಮ್ಮ ವೃತ್ತಿಜೀವನದ ಏರಿಳಿತಗಳ ಬಗ್ಗೆ ಮಾತನಾಡಿದ್ದರು. ಅಪಾರ ಯಶಸ್ಸು ಕಂಡ ಬಳಿಕ ಬ್ಯಾಂಕ್​ ಬ್ಯಾಲೆನ್ಸ್​ ಸೊನ್ನೆ ಆಗಿದ್ದ ಕಾಲದ ಬಗ್ಗೆಯೂ ಅವರು ಹೇಳಿಕೊಂಡಿದ್ದರು.

ಇದನ್ನೂ ಓದಿ:

ಬಿಗ್​ ಬಾಸ್​ನಿಂದ ಹೊರಬಂದು ನುಡಿದಂತೆ ನಡೆದ ಶುಭಾ ಪೂಂಜಾ; ಬಡವರಿಗೆ ಫುಡ್​ ಕಿಟ್​ ನೀಡಿದ ನಟಿ

Shubha Poonja: ನನ್ನ ಹುಡುಗನಿಗೆ ಪ್ರಪೋಸ್​​ ಮಾಡಿದ್ದು ನಾನಲ್ಲ, ನನ್ನ ಅಮ್ಮ; ಶುಭಾ ಪೂಂಜಾ ಪ್ರೇಮಕಥೆ ಕೇಳಿ ಬಿಗ್​ ಬಾಸ್​ ಮಂದಿ ಶಾಕ್

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!