AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಗಿದ್ದಾರೆ ನೋಡಿ ಕರ್ನಾಟಕದ ಶಿಲ್ಪಾ ಶೆಟ್ಟಿ ಮಕ್ಕಳು; ವೈರಲ್​ ಆಯ್ತು ಕ್ಯೂಟ್​ ವಿಡಿಯೋ

ಇಂದು (ಮೇ 24) ಸಹೋದರರ ದಿನ. ಪ್ರತಿಯೊಬ್ಬರೂ ತಮ್ಮ ಸಹೋದರರಿಗೆ ವಿಶ್​ ಮಾಡುತ್ತಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳು ಅಣ್ಣ-ತಮ್ಮಂದಿರ ಫೋಟೋಗಳನ್ನು ಹಾಕಿಕೊಂಡು ಸಂಭ್ರಮಿಸಿದ್ದಾರೆ.

ಹೇಗಿದ್ದಾರೆ ನೋಡಿ ಕರ್ನಾಟಕದ ಶಿಲ್ಪಾ ಶೆಟ್ಟಿ ಮಕ್ಕಳು; ವೈರಲ್​ ಆಯ್ತು ಕ್ಯೂಟ್​ ವಿಡಿಯೋ
ಶಿಲ್ಪಾ ಶೆಟ್ಟಿ ಮಕ್ಕಳು
ರಾಜೇಶ್ ದುಗ್ಗುಮನೆ
|

Updated on: May 24, 2021 | 3:20 PM

Share

ನಟಿ ಶಿಲ್ಪಾ ಶೆಟ್ಟಿ ಮಂಗಳೂರಿನವರು. ಅವರು ಬದುಕು ಕಟ್ಟಿಕೊಂಡಿದ್ದು ಮುಂಬೈನಲ್ಲಿ. ಚಿತ್ರರಂಗದಲ್ಲಿ ಮಿಂಚಿದ ನಂತರ ಅವರು ಮದುವೆ ಆದರು. ಈಗ ಮಕ್ಕಳನ್ನು ನೋಡಿಕೊಂಡು ಸುಖ ಸಂಸಾರ ನಡೆಸುತ್ತಿದ್ದಾರೆ. ಈಗ ಅವರ ಮಕ್ಕಳ ಕ್ಯೂಟ್​ ವಿಡಿಯೋ ಒಂದು ಸಾಕಷ್ಟು ವೈರಲ್​ ಆಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಸಾಕಷ್ಟು ಖುಷಿ ಪಟ್ಟಿದ್ದಾರೆ.  

ಇಂದು (ಮೇ 24) ಸಹೋದರರ ದಿನ. ಪ್ರತಿಯೊಬ್ಬರೂ ತಮ್ಮ ಸಹೋದರರಿಗೆ ವಿಶ್​ ಮಾಡುತ್ತಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳು ಅಣ್ಣ-ತಮ್ಮಂದಿರ ಫೋಟೋಗಳನ್ನು ಹಾಕಿಕೊಂಡು ಸಂಭ್ರಮಿಸಿದ್ದಾರೆ. ಈಗ ಶಿಲ್ಪಾ ಶೆಟ್ಟಿ ಕೂಡ ತಮ್ಮ ಮಕ್ಕಳ ವಿಡಿಯೋ ಒಂದನ್ನು ಹಾಕಿದ್ದಾರೆ. ಈ ವಿಡಿಯೋವನ್ನು ಅವರು ಬ್ರದರ್ಸ್​ ಡೇ ದಿನಕ್ಕೆ ಅರ್ಪಣೆ ಮಾಡಿದ್ದಾರೆ.

ಶಿಲ್ಪಾ ಶೆಟ್ಟಿಗೆ ವಿಯಾನ್​ ಮತ್ತು ಸಮೀಶಾ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ವಿಯಾನ್​ ಹಿರಿಯವನು. ಆತ ಗಾರ್ಡನ್​​ನಲ್ಲಿ ಕುಳಿತು ಎಳನೀರನ್ನು ಕುಡಿಯುತ್ತಾ ಕೂತಿದ್ದಾನೆ. ಈ ವೇಳೆ ಸಮೀಶಾ ತನಗೂ ಎಳನೀರು ಕೊಡುವಂತೆ ಕೇಳಿದ್ದಾಳೆ. ಆಗ, ವಿಯಾನ್​ ಎರಡು ಹನಿ ನೀರನ್ನು ಆಕೆಯ ಬಾಯಿಗೆ ಹಾಕಿರೋದು ವಿಡಿಯೋದಲ್ಲಿದೆ.

ಈ ವಿಡಿಯೋ ನೋಡಿದ ಅಭಿಮಾನಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ. ಇಬ್ಬರೂ ಸಾಕಷ್ಟು ಕ್ಯೂಟ್​ ಆಗಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ನಾನು ಈ ವಿಡಿಯೋವನ್ನು ಅದೆಷ್ಟು ಬಾರಿ ಕಣ್ತುಂಬಿಕೊಂಡೆನೋ ಎಂದು ಹೇಳಿದ್ದಾರೆ.

ಶಿಲ್ಪಾ ಶೆಟ್ಟಿ ಮಗ ವಿಯಾನ್​ (ಮೇ 21) ರಂದು 9ನೇ ವರ್ಷಕ್ಕೆ ಕಾಲಿಟ್ಟಿದ್ದ. ಈ ಸಂಭ್ರಮದಂದು ಆತನಿಗೆ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್​ ಕುಂದ್ರಾ ಪುಟಾಣಿ ನಾಯಿ ಮರಿಯನ್ನು ಉಡುಗರೆಯಾಗಿ ನೀಡಿದ್ದರು. ಈ ವಿಶೇಷ ಗಿಫ್ಟ್​ ನೋಡಿ ವಿಯಾನ್​ ಸಖತ್​ ಖುಷಿಯಾಗಿದ್ದ. ಈ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಕೂಡ ಸಾಕಷ್ಟು ವೈರಲ್​ ಆಗಿತ್ತು.

ನಟಿ ಶಿಲ್ಪಾ ಶೆಟ್ಟಿ ಸಿನಿಮಾ ರಂಗದಿಂದ ದೂರ ಉಳಿದರೂ ಸೋಶಿಯಲ್​ ಮೀಡಿಯಾದಲ್ಲಿ ತುಂಬಾನೇ ಆ್ಯಕ್ಟಿವ್​ ಆಗಿದ್ದಾರೆ. ಭಿನ್ನ ರೀತಿಯ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್​ ಮಾಡುವ ಮೂಲಕ ಅವರು ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. 2007ರಲ್ಲಿ ತೆರೆಗೆ ಬಂದ ‘ಅಪ್ನೆ’ ಸಿನಿಮಾ ಕೊನೆ. ನಂತರ ಮೂರು ಚಿತ್ರಗಳಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದು ಬಿಟ್ಟರೆ ಮತ್ತಾವುದೇ ಚಿತ್ರಗಳಲ್ಲಿ ಶಿಲ್ಪಾ ನಟಿಸಿಲ್ಲ. 2009ರಲ್ಲಿ ರಾಜ್ ಕುಂದ್ರಾ ಅವರನ್ನು ವಿವಾಹವಾದರು.

ಇದನ್ನೂ ಓದಿ: Shilpa Shetty: ಶಿಲ್ಪಾ ಶೆಟ್ಟಿ ಮನೆಗೆ ಹೊಸ ಸದಸ್ಯನ ಆಗಮನ; ಕುಟುಂಬದವರು ಫುಲ್ ಖುಷ್