ಬಿಗ್​ ಬಾಸ್​ನಿಂದ ಹೊರಬಂದು ನುಡಿದಂತೆ ನಡೆದ ಶುಭಾ ಪೂಂಜಾ; ಬಡವರಿಗೆ ಫುಡ್​ ಕಿಟ್​ ನೀಡಿದ ನಟಿ

Shubha Poonja: 71 ದಿನಗಳ ಕಾಲ ಬಿಗ್​ ಬಾಸ್​ ಮನೆಯಲ್ಲಿ ಇದ್ದ ಶುಭಾ ಪೂಂಜಾ ಅವರು ತಮ್ಮದೇ ವ್ಯಕ್ತಿತ್ವದ ಕಾರಣದಿಂದ ಗಮನ ಸೆಳೆದಿದ್ದರು. ಈಗ ಬಿಗ್​ ಬಾಸ್​ನಿಂದ ಹೊರಬಂದು, ಲಾಕ್​ಡೌನ್​ನ ಕಷ್ಟಕಾಲದಲ್ಲಿ ಜನಮೆಚ್ಚುವ ಕೆಲಸಗಳನ್ನು ಅವರು ಮಾಡುತ್ತಿದ್ದಾರೆ.

ಬಿಗ್​ ಬಾಸ್​ನಿಂದ ಹೊರಬಂದು ನುಡಿದಂತೆ ನಡೆದ ಶುಭಾ ಪೂಂಜಾ; ಬಡವರಿಗೆ ಫುಡ್​ ಕಿಟ್​ ನೀಡಿದ ನಟಿ
ಶುಭಾ ಪೂಂಜಾ - ಫುಡ್ ಕಿಟ್
Follow us
ಮದನ್​ ಕುಮಾರ್​
| Updated By: Digi Tech Desk

Updated on:May 15, 2021 | 10:39 AM

ಅನಿರೀಕ್ಷಿತವಾಗಿ ‘ಬಿಗ್​ ಬಾಸ್ ಕನ್ನಡ​ ಸೀಸನ್​ 8’ ಕಾರ್ಯಕ್ರಮ ಕೊನೆಯಾಯಿತು. ಹೊರಜಗತ್ತಿನಲ್ಲಿ ಏನಾಗುತ್ತಿದೆ ಎಂದು ಗೊತ್ತಾದ ಬಳಿಕ ಮನೆಯೊಳಗಿದ್ದ ಸ್ಪರ್ಧಿಗಳೆಲ್ಲ ಕಂಗಾಲಾದರು. ಕೊರೊನಾ ವೈರಸ್​ ಹಾವಳಿಯಿಂದ ಇಡೀ ದೇಶವೇ ತತ್ತರಿಸಿರುವುದನ್ನು ಕಂಡು ದೊಡ್ಮನೆ ಸದಸ್ಯರು ಬೆಚ್ಚಿ ಬಿದ್ದರು. ಅಲ್ಲದೆ, ತಾವು ರಿಯಾಲಿಟಿ ಶೋನಿಂದ ಹೊರಹೋದ ಬಳಿಕ ಕೊರೊನಾ ವಾರಿಯರ್​ ಆಗಿ ಕೆಲಸ ಮಾಡೋಣ ಎಂದು ಶಪಥ ಮಾಡಿದ್ದರು. ನಟಿ ಶುಭಾ ಪೂಂಜಾ ಕೂಡ ಇದೇ ನಿರ್ಣಯ ಕೈಗೊಂಡಿದ್ದರು. ಈಗ ಅವರು ತಮ್ಮ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ. ತಮ್ಮ ಕೈಲಾದ ಸಹಾಯ ಮಾಡುವಲ್ಲಿ ಅವರು ತೊಡಗಿಕೊಂಡಿದ್ದಾರೆ.

ಸದ್ಯ ಲಾಕ್​ಡೌನ್​ ಜಾರಿಯಲ್ಲಿ ಇರುವುದರಿಂದ ಅನೇಕರಿಗೆ ಕೆಲಸ ಇಲ್ಲದಂತಾಗಿದೆ. ಹಾಗಾಗಿ ಕೂಲಿ ಕಾರ್ಮಿಕರು, ಬಡವರು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿರುವಂತಹ ಪರಿಸ್ಥಿತಿ ಇದೆ. ಅಂಥವರ ಸಹಾಯಕ್ಕೆ ಶುಭಾ ಪೂಂಜಾ ನಿಂತಿದ್ದಾರೆ. ತಮ್ಮ ಏರಿಯಾ ಸುತ್ತ ಮುತ್ತ ಇರುವ ಬಡವರಿಗೆ ಅವರು ಫುಡ್​ ಕಿಟ್​ಗಳನ್ನು ವಿತರಿಸಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಇತರರನ್ನೂ ಪ್ರೇರೇಪಿಸು ಪ್ರಯತ್ನವನ್ನು ಅವರು ಮಾಡಿದ್ದಾರೆ. ಶುಭಾ ಮಾಡುತ್ತಿರುವ ಈ ಕಾಯಕಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

71 ದಿನಗಳ ಕಾಲ ಬಿಗ್​ ಬಾಸ್​ ಮನೆಯಲ್ಲಿ ಇದ್ದ ಶುಭಾ ಪೂಂಜಾ ಅವರು ತಮ್ಮದೇ ವ್ಯಕ್ತಿತ್ವದ ಕಾರಣದಿಂದ ಗಮನ ಸೆಳೆದಿದ್ದರು. ಹಲವು ಸಂದರ್ಭಗಳಲ್ಲಿ ಅವರು ಚಿಕ್ಕ ಮಗು ರೀತಿ ವರ್ತಿಸುತ್ತಿದ್ದರು. ಈಗ ಬಿಗ್​ ಬಾಸ್​ನಿಂದ ಹೊರಬಂದು ಜನಮೆಚ್ಚುವ ಕೆಲಸಗಳನ್ನು ಮಾಡುತ್ತಿದ್ದಾರೆ. ಶುಭಾ ಪೂಂಜಾ ಮಾತ್ರವಲ್ಲದೇ ಸ್ಯಾಂಡಲ್​ವುಡ್​ನ ಅನೇಕರು ಈ ಸಂದರ್ಭದಲ್ಲಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

5 ಸರ್ಕಾರಿ ಆಸ್ಪತ್ರೆಯ ವೈದ್ಯರು, ನರ್ಸ್​ಗಳು ಮತ್ತು ಸಿಬ್ಬಂದಿಗೆ ನಟ ಶ್ರೀಮುರಳಿ ಊಟದ ವ್ಯವಸ್ಥೆ ಮಾಡಿಸಿದ್ದಾರೆ. ಉಪೇಂದ್ರ ಕೂಡ ಸಾವಿರಾರು ಕುಟುಂಬದವರಿಗೆ ಅಗತ್ಯ ದಿನಸಿ ಸಾಮಗ್ರಿಗಳನ್ನು ನೀಡುತ್ತಿದ್ದಾರೆ. ಅವರ ಕಾರ್ಯಕ್ಕೆ ಕೈ ಜೋಡಿಸಿರುವ ಅನೇಕರು ದೇಣಿಗೆ ನೀಡುತ್ತಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್​ ಪೊನ್ನಣ್ಣ ತಮ್ಮದೇ ಹೆಲ್ಪ್​ಲೈನ್​ ಆರಂಭಿಸಿ, ಆ ಮೂಲಕ ಸಾವಿರಾರು ಜನರಿಗೆ ನೆರವು ನೀಡಿದ್ದಾರೆ. ನಟ ಅರ್ಜುನ್​ ಗೌಡ ಅವರು ಆ್ಯಂಬುಲೆನ್ಸ್​ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಕೂಡ ಬಡವರಿಗೆ ನೆರವಾಗುತ್ತಿದ್ದಾರೆ.

ಇದನ್ನೂ ಓದಿ:

Shubha Poonja: ನನ್ನ ಹುಡುಗನಿಗೆ ಪ್ರಪೋಸ್​​ ಮಾಡಿದ್ದು ನಾನಲ್ಲ, ನನ್ನ ಅಮ್ಮ; ಶುಭಾ ಪೂಂಜಾ ಪ್ರೇಮಕಥೆ ಕೇಳಿ ಬಿಗ್​ ಬಾಸ್​ ಮಂದಿ ಶಾಕ್

ಸಕ್ಸಸ್​​​ ಕಂಡಮೇಲೂ ಬ್ಯಾಂಕ್​ ಬ್ಯಾಲೆನ್ಸ್​ ಜೀರೋ ಆಗಿತ್ತು; ಚಿತ್ರರಂಗದಲ್ಲಿ ಅನುಭವಿಸಿದ ಕಷ್ಟದ ಬಗ್ಗೆ ಹೇಳಿಕೊಂಡ ಶುಭಾ

Published On - 8:47 am, Sat, 15 May 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ