‘ಇಂದಿನ ಜಗತ್ತು ಒಳ್ಳೆಯವರಿಗಲ್ಲ’; ಆಪ್ತನ ಮಗನ ಸಾವಿಗೆ ಜಗ್ಗೇಶ್ ಬೇಸರ, ಟ್ವಿಟರ್​​​ನಿಂದ ದೂರ ಸರಿದ ನಟ

ನಟ ಜಗ್ಗೇಶ್​ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟಿವ್​ ಆಗಿದ್ದಾರೆ. ಯಾರಾದರೂ ಕಷ್ಟ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡರೆ ಅದಕ್ಕೆ ಅವರು ಸ್ಪಂದಿಸುತ್ತಾರೆ. ಈಗ ಆಪ್ತನ ಮಗನನ್ನು ಕೊರೊನಾ ನುಂಗಿ ಹಾಕಿದೆ.

‘ಇಂದಿನ ಜಗತ್ತು ಒಳ್ಳೆಯವರಿಗಲ್ಲ’; ಆಪ್ತನ ಮಗನ ಸಾವಿಗೆ ಜಗ್ಗೇಶ್ ಬೇಸರ, ಟ್ವಿಟರ್​​​ನಿಂದ ದೂರ ಸರಿದ ನಟ
ಜಗ್ಗೇಶ್​
Follow us
ರಾಜೇಶ್ ದುಗ್ಗುಮನೆ
|

Updated on:May 14, 2021 | 8:52 PM

ಕೊರೊನಾ ಕಾಲದಲ್ಲಿ ನಟ ಜಗ್ಗೇಶ್​ ಎಲ್ಲರ ಸಹಾಯಕ್ಕೆ ನಿಂತಿದ್ದರು. ಅಗತ್ಯ ಇರುವ ಕೊರೊನಾ ರೋಗಿಗಳಿಗೆ ವೈದ್ಯಕೀಯ ಆಮ್ಲಜನಕ ಸಿಲಿಂಡರ್​ ಪೂರೈಕೆ ಮಾಡುವ ಕೆಲಸದಲ್ಲಿ ತೊಡಗಿದ್ದರು. ಆದರೆ, ಈಗ ಕೊರೊನಾ ಅವರ ಆಪ್ತರನ್ನೇ ಬಲಿ ತೆಗೆದುಕೊಂಡಿದೆ. ಈ ಕಾರಣದಿಂದ ಕೆಲ ಸಮಯದವರೆಗೆ ಸಾಮಾಜಿಕ ಜಾಲತಾಣದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ.

ನಟ ಜಗ್ಗೇಶ್​ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟಿವ್​ ಆಗಿದ್ದಾರೆ. ಯಾರಾದರೂ ಕಷ್ಟ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡರೆ ಅದಕ್ಕೆ ಅವರು ಸ್ಪಂದಿಸುತ್ತಾರೆ. ಈಗ ಆಪ್ತನ ಮಗನನ್ನು ಕೊರೊನಾ ನುಂಗಿ ಹಾಕಿದೆ. ‘ದುಃಖ ತಡೆಯಲು ಆಗುತ್ತಿಲ್ಲ. ಹಾಗಾಗಿ ಇಲ್ಲಿಂದ ಕೆಲ ದಿನಗಳ ಕಾಲ ದೂರ ಉಳಿಯುವೆ’ ಎಂದು ಟ್ವಿಟರ್​​ನಲ್ಲಿ ಅವರು ಬರೆದುಕೊಂಡಿದ್ದಾರೆ.

‘ನನ್ನಉಸಿರಿನಂತೆ ಬೆನ್ನಿಗೆ ನಿಂತು ನನ್ನ ಬದುಕಿನ ಬಹು ಭಾಗ ಒಡಹುಟ್ಟಿದವನಂತೆ ಬಾಳಿದವ ಮಾದೇಗೌಡ. ಅವನ ಮಗನನ್ನು ಈ ಪೀಡೆರೋಗ ನುಂಗಿಹಾಕಿತು. ಇದ್ದವನು ಒಬ್ಬನೇ ಮಗ ಮಸಣಸೇರಿಬಿಟ್ಟ. ಬಹಳ ನೊಂದು ಹೋಗಿರುವೆ. ನನ್ನ ಮಗನಿಗಿಂತ 1ವರ್ಷ ಕಿರಿಯ. ಅವನಿಗೆ ಮಗಳು ಹುಟ್ಟಿ 6 ತಿಂಗಳು ಆಗಿದೆ. ಮಾದೆಗೌಡ ಈ ದುಃಖವನ್ನು ಹೇಗೆ ಸಹಿಸುತ್ತಾನೆ? ನನ್ನ ದೇಹವೇ ಸುಟ್ಟಂತೆ ಆಗಿದೆ, ಕ್ರೂರವಿಧಿ’ ಎಂದು ಜಗ್ಗೇಶ್​ ಬರೆದುಕೊಂಡಿದ್ದಾರೆ.

‘ಕೆಲದಿನ ನಾ ಇಲ್ಲಿಂದ ದೂರ ಉಳಿಯುವೆ. ಮಾದೇಗೌಡನ ಮಗನ ಸಾವಿನಿಂದ ನನ್ನ ಮನಸ್ಸು ಒಡೆದು ಚೂರಾಗಿದೆ. ಏನು ಮಾಡಿದರೂ ಸಮಾಧಾನ ಆಗುತ್ತಿಲ್ಲ. ಬಂಗಾರದಂತ ನನ್ನ ಆತ್ಮೀಯ ಹೃದಯಗಳೇ ನಿಮ್ಮ ನೀವು ಕಾಪಾಡಿಕೊಳ್ಳಿ. ಇಂದಿನ ಯಾಂತ್ರಿಕ ಚಿಂತನೆ ಜಗದಲ್ಲಿ ಯಾರು ನಮಗಾಗಿ ಬರರು. ಸ್ವಾರ್ಥ, ಮೋಸ, ಧನದಾಹಿ ಜಗತ್ತು. ಒಳ್ಳೆಯವರಿಗಲ್ಲ ಇಂದಿನ ಜಗತ್ತು, ಕ್ಷಮೆಯಿರಲಿ’ ಎಂದು ಜಗ್ಗೇಶ್​ ಬೇಸರ ಹೊರ ಹಾಕಿದ್ದಾರೆ.

ಇದನ್ನೂ ಓದಿ: ರಿಯಲ್​ ಹೀರೋ ಆದ ಜಗ್ಗೇಶ್​; 20 ದಿನಗಳಿಂದ ಕೊರೊನಾ ರೋಗಿಗಳ ಸೇವೆಯಲ್ಲಿ ನಟ

Published On - 8:46 pm, Fri, 14 May 21