ಸಕ್ಸಸ್​​​ ಕಂಡಮೇಲೂ ಬ್ಯಾಂಕ್​ ಬ್ಯಾಲೆನ್ಸ್​ ಜೀರೋ ಆಗಿತ್ತು; ಚಿತ್ರರಂಗದಲ್ಲಿ ಅನುಭವಿಸಿದ ಕಷ್ಟದ ಬಗ್ಗೆ ಹೇಳಿಕೊಂಡ ಶುಭಾ

ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​​ನಲ್ಲಿ ತಾವು ಜೀವನದಲ್ಲಿ ಕಂಡ ಏಳುಬೀಳುಗಳ ಬಗ್ಗೆ ಸ್ಪರ್ಧಿಗಳು ಹೇಳಬೇಕಿತ್ತು. ಆಗ ತಮ್ಮ ಕೆರಿಯರ್​ ಬಗ್ಗೆ ಹೇಳಿಕೊಂಡರು ಶುಭಾ.

ಸಕ್ಸಸ್​​​ ಕಂಡಮೇಲೂ ಬ್ಯಾಂಕ್​ ಬ್ಯಾಲೆನ್ಸ್​ ಜೀರೋ ಆಗಿತ್ತು; ಚಿತ್ರರಂಗದಲ್ಲಿ ಅನುಭವಿಸಿದ ಕಷ್ಟದ ಬಗ್ಗೆ ಹೇಳಿಕೊಂಡ ಶುಭಾ
ಶುಭಾ ಪೂಂಜಾ
Rajesh Duggumane

| Edited By: Madan Kumar

Apr 29, 2021 | 2:57 PM

ಯಶ್​ ಹಾಗೂ ರಾಧಿಕಾ ಪಂಡಿತ್​ ನಟನೆಯ ಮೊಗ್ಗಿನ ಮನಸು ಸಿನಿಮಾದಲ್ಲಿ ಶುಭಾ ಪೂಂಜಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಸೂಪರ್​-ಡೂಪರ್​ ಹಿಟ್​ ಆಗಿತ್ತು. ದುನಿಯಾ ವಿಜಯ್​ ನಟನೆಯ ಚಂಡ ಸಿನಿಮಾ ಮೂಲಕ ಶುಭಾ ಪೂಂಜಾ ಹೆಚ್ಚು ಗುರುತಿಸಿಕೊಂಡರು. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಉತ್ತಂಗಕ್ಕೇರಿದ್ದ ಶುಭಾ ಪೂಂಜಾ ನಂತರ ಜೀರೋಗೆ ಬಂದು ಬಿಟ್ಟಿದ್ದರಂತೆ. ಈ ಬಗ್ಗೆ ಶುಭಾ ಅವರೇ ಬಿಗ್​ ಬಾಸ್​ ಮನೆಯಲ್ಲಿ ಹೇಳಿಕೊಂಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​​ನಲ್ಲಿ ತಾವು ಜೀವನದಲ್ಲಿ ಕಂಡ ಏಳುಬೀಳುಗಳ ಬಗ್ಗೆ ಸ್ಪರ್ಧಿಗಳು ಹೇಳಬೇಕಿತ್ತು. ಆಗ ತಮ್ಮ ಕೆರಿಯರ್​ ಬಗ್ಗೆ ಹೇಳಿಕೊಂಡರು ಶುಭಾ. ನಾನು ಚಿತ್ರರಂಗಕ್ಕೆ ಬರುವುದಕ್ಕೂ ಮೊದಲು ಎರಡುವರೆ ವರ್ಷ ಕಷ್ಟಪಟ್ಟಿದ್ದೆ. ನನ್ನ ನಟನೆಯ ಚಂಡ ಹಾಗೂ ಮೊಗ್ಗಿನ ಮನಸು ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಆಗ ನನಗೆ ನನ್ನ ಸ್ಟ್ರಗಲ್​ ಮರೆತೇ ಹೋಯಿತು. ಹಣ ಹಾಗೂ ಆಫರ್​ ಎರಡೂ ಹೆಚ್ಚೇ ಬಂದವು. ಆದರೆ, ದೊಡ್ಡ ಸಕ್ಸಸ್​ ನೋಡಿ ಜೀರೋಗೆ ಬರುವುದು ಇದೆಯಲ್ಲ ಅದು ಕಷ್ಟ ಎಂದು ಭಾವುಕರಾದರು ಶುಭಾ.

ದೊಡ್ಡ ಸಕ್ಸಸ್​ ಕಂಡಿದ್ದ ನನ್ನ ಬ್ಯಾಂಕ್​ ಬ್ಯಾಲೆನ್ಸ್​ ಜೀರೋ ಆಗಿತ್ತು. ನಾನು ಅಪ್ಪ ಅಮ್ಮನ ಬಳಿ ಹಣ ತೆಗೆದುಕೊಳ್ಳಲಿಲ್ಲ. ಆಗ ನನಗೆ ಲೈಫ್​​ ಸಾಕಷ್ಟು ಕಲಿಸಿತ್ತು. ಈ ಟೈಮ್​​ನಲ್ಲಿ ನನಗೆ ಸಿಗಂಧೂರು ಚೌಡೇಶ್ವರಿ ಮಹಿಮೆ ಹೆಸರಿನ ಸಿನಿಮಾ ಆಫರ್​ ಬಂತು. ಮೇಡಂ ಇದು ದೇವರ ಸಿನಿಮಾ. ಹೀಗಾಗಿ 50 ಸಾವಿರ ರೂಪಾಯಿ ಮಾತ್ರ ಸಂಭಾವನೆ ಕೊಡ್ತೀವಿ ಅಂದ್ರು. ನಾನು ಅದನ್ನು ಒಪ್ಪಿಕೊಂಡೆ. ನನಗೆ ಬಂದ ಸಂಭಾವನೆ ಕಾರ್​ ಡ್ರೈವರ್​, ಮೇಕಪ್​ಮೆನ್​ಗೆ ಸಾಕಾಯ್ತು.

ಸಿಗಂದೂರಿನ ಬೆಟ್ಟದ ಮೇಲೆ ಕೂತಿದ್ದೆ. ಮುಂದೇನು ಎಂದು ಯೋಚನೆ ಮಾಡುತ್ತಿದ್ದೆ. ಸರಿಯಾಗಿ ಸಿಗ್ನಲ್​ ಸಿಗದ ಜಾಗದಲ್ಲೂ ನನಗೆ ಮೆಸೇಜ್​ ಬಂತು. ಹರ್ಷ ಮಾಸ್ಟರ್​ ಮೆಸೇಜ್​ ಆಗಿತ್ತು. ಕಾಲ್​ ಮಾಡಿ ಎಂದು ಮೆಸೇಜ್​ನಲ್ಲಿ ಬರೆದಿತ್ತು. ಕಾಲ್​ ಮಾಡಿದಾಗ, ‘ಜೈ ಮಾರುತಿ 800’ ಅಂತ ಸಿನಿಮಾ ಮಾಡುತ್ತಾ ಇದೀನಿ. ಅದರಲ್ಲಿ ಇಬ್ಬರು ನಾಯಕಿಯರು​ ಇರುತ್ತಾರೆ. ಒಂದು ಹೀರೋಯಿನ್​ ಆಗಿ ನಿಮ್ಮನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಕೊಂಡಿದ್ದೇವೆ ಎಂದರು. ಆ ಸಿನಿಮಾ ಮಾಡಿದ್ಮೇಲೆ ಮತ್ತೆ ಎದ್ದು ನಿಂತೆ. ಮತ್ತೆ ಮೊದಲಿನ ಸ್ಥಿತಿಗೆ ಬಂದೆ ಎಂದು ತಮ್ಮ ಏಳು ಬೀಳಿನ ಜೀವನದ ಬಗ್ಗೆ ಶುಭಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಎದುರು ಶುಭಾ ಪೂಂಜಾ ಇಟ್ಟ ಬೇಡಿಕೆ ನೋಡಿ ಮನೆಯವರಿಗೆ ಅಳಬೇಕೋ ನಗಬೇಕೋ ಗೊತ್ತಾಗ್ತಿಲ್ಲ

Kichcha Sudeep Health update: ಆರೋಗ್ಯ ಮತ್ತು ಬಿಗ್​ ಬಾಸ್​ ಬಗ್ಗೆ ಗುಡ್​ ನ್ಯೂಸ್​ ಕೊಟ್ಟ ಕಿಚ್ಚ ಸುದೀಪ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada