AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kichcha Sudeep Health update: ಆರೋಗ್ಯ ಮತ್ತು ಬಿಗ್​ ಬಾಸ್​ ಬಗ್ಗೆ ಗುಡ್​ ನ್ಯೂಸ್​ ಕೊಟ್ಟ ಕಿಚ್ಚ ಸುದೀಪ್​

Bigg Boss Kannada: ಅನೇಕ ಊರುಗಳ ದೇವಸ್ಥಾನದಲ್ಲಿ ಕಿಚ್ಚ ಸುದೀಪ್​ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತು. ಎಲ್ಲರ ಪ್ರಾರ್ಥನೆಯ ಫಲವಾಗಿ ಅವರು​ ಚೇತರಿಸಿಕೊಂಡಿದ್ದಾರೆ.

Kichcha Sudeep Health update: ಆರೋಗ್ಯ ಮತ್ತು ಬಿಗ್​ ಬಾಸ್​ ಬಗ್ಗೆ ಗುಡ್​ ನ್ಯೂಸ್​ ಕೊಟ್ಟ ಕಿಚ್ಚ ಸುದೀಪ್​
ಕಿಚ್ಚ ಸುದೀಪ್​
ಮದನ್​ ಕುಮಾರ್​
|

Updated on: Apr 29, 2021 | 12:52 PM

Share

ನಟ ಕಿಚ್ಚ ಸುದೀಪ್​ ಆರೋಗ್ಯದ ಬಗ್ಗೆ ಖುಷಿ ಸುದ್ದಿ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಈಗ ಚೇತರಿಸಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಸುದೀಪ್​ ಮಾಹಿತಿ ನೀಡಿದ್ದು ಅಭಿಮಾನಿಗಳ ಮೊಗದಲ್ಲಿ ನಗು ಮೂಡಿವಂತಾಗಿದೆ. ಸುದೀಪ್​ ಅನಾರೋಗ್ಯದ ಕಾರಣದಿಂದ ಎರಡು ವಾರಗಳ ಕಾಲ ಅವರು ಬಿಗ್​ ಬಾಸ್​ ಕಾರ್ಯಕ್ರಮವನ್ನು ನಡೆಸಿಕೊಡಲು ಸಾಧ್ಯವಾಗಿರಲಿಲ್ಲ. ಆದರೆ ಈ ವಾರ ಸುದೀಪ್​ ಅವರ ನಿರೂಪಣೆಯಲ್ಲೇ ಬಿಗ್​ ಬಾಸ್​ ವೀಕೆಂಡ್​ ಎಪಿಸೋಡ್​ ನಡೆಯಲಿದೆ.

‘ನಿಮ್ಮೆಲ್ಲರ ಪ್ರಾರ್ಥನೆ ಮತ್ತು ಹಾರೈಕೆಗೆ ಧನ್ಯವಾದಗಳು. ನಾನೀಗ ಉತ್ತಮವಾಗಿದ್ದೇನೆ. ಈ ವಾರ ಬಿಗ್​ ಬಾಸ್​ನಲ್ಲಿ ಭಾಗವಹಿಸಲು ಕಾಯುತ್ತಿದ್ದೇನೆ. ತುಂಬಾ ಕಾಳಜಿ ತೋರಿಸಿದ್ದಕ್ಕಾಗಿ ಡಾ. ವೆಂಕಟೇಶ್​, ಡಾ. ವಿನಯ್​ ಅವರಿಗೆ ಧನ್ಯವಾದಗಳು. ದೇವಸ್ಥಾನಗಳಲ್ಲಿ ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿರುವ ಅನೇಕ ವಿಡಿಯೋಗಳನ್ನು ನೋಡಿದೆ. ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ ಎಂದಷ್ಟೇ ಹೇಳಬಲ್ಲೆ’ ಎಂದು ಸುದೀಪ್​ ಟ್ವೀಟ್​ ಮಾಡಿದ್ದಾರೆ.

ಸುದೀಪ್​ಗೆ ಅನಾರೋಗ್ಯ ಎಂದು ಗೊತ್ತಾಗುತ್ತಿದ್ದಂತೆಯೇ ಎಲ್ಲರೂ ಆತಂಕಗೊಂಡಿದ್ದರು. ಅವರು ಬೇಗ ಗುಣಮುಖರಾಗಲಿ ಎಂದು ಸೋಶಿಯಲ್​ ಮೀಡಿಯಾ ಮೂಲಕ ಸಾವಿರಾರು ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಅನೇಕ ಊರುಗಳ ದೇವಸ್ಥಾನದಲ್ಲಿ ಸುದೀಪ್​ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತು. ಆ ಎಲ್ಲ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ ಕೂಡ. ಎಲ್ಲರ ಪ್ರಾರ್ಥನೆಯ ಫಲವಾಗಿ ಕಿಚ್ಚ ಸುದೀಪ್​ ಚೇತರಿಸಿಕೊಂಡಿದ್ದಾರೆ.

ವಿಶೇಷವೆಂದರೆ, ಜಪಾನಿನ ಮಹಿಳೆಯೊಬ್ಬರು ಸುದೀಪ್​ಗಾಗಿ ಪ್ರಾರ್ಥಿಸಿಕೊಂಡಿದ್ದರು. ಆ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ‘ನಮಸ್ಕಾರ ಸುದೀಪ್​ ಸರ್​. ಈಗ ಹೇಗಿದ್ದೀರಿ? ನೀವು ಬೇಗ ಗುಣಮುಖರಾಗಿ ಎಂದು ಪ್ರಾರ್ಥನೆ ಮಾಡುತ್ತಿದ್ದೇನೆ. ನನ್ನ ಹೃದಯದಾಳದಿಂದ ಈ ಮಾತು ಹೇಳುತ್ತಿದ್ದೇನೆ. ದಯವಿಟ್ಟು ನಿಮ್ಮ ಕಾಳಜಿ ವಹಿಸಿ. ಜಪಾನ್​ನಿಂದ ನಿಮಗಿದು ಪ್ರೀತಿಯ ಸಂದೇಶ’ ಎಂದು ಆ​ ಮಹಿಳೆ ವಿಡಿಯೋದಲ್ಲಿ ಮಾತನಾಡಿದ್ದರು.

ಒಟ್ಟಿನಲ್ಲಿ ಸುದೀಪ್​ ಅವರು ಗುಣಮುಖರಾಗಿರುವ ಸುದ್ದಿ ಕೇಳಿ ಎಲ್ಲರಿಗೂ ಸಂತಸ ಆಗಿದೆ. ಕಿಚ್ಚನ ಟ್ವೀಟ್​ಗೆ ಅಭಿಮಾನಿಗಳು ಖುಷಿಯಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಎರಡು ವಾರಗಳ ಕಾಲ ಅವರನ್ನು ಮಿಸ್​ ಮಾಡಿಕೊಂಡಿದ್ದ ಬಿಗ್​ ಬಾಸ್​ ಪ್ರೇಕ್ಷಕರಿಗೆ ಈ ವಾರ ಸಂತಸ ಆಗಲಿದೆ. ಬಿಗ್​ ಬಾಸ್​ ಸ್ಪರ್ಧಿಗಳು ಕೂಡ ಸುದೀಪ್​ ಆಗಮನಕ್ಕಾಗಿ ಕಾಯುತ್ತಿದ್ದರು. ಅವರಿಗೂ ಈ ವೀಕೆಂಡ್​ನಲ್ಲಿ ಕಿಚ್ಚ ಅಚ್ಚರಿ ನೀಡಲಿದ್ದಾರೆ.

ಇದನ್ನೂ ಓದಿ: Kichcha Sudeep Salary: ಬಿಗ್​ ಬಾಸ್​ ಸೀಸನ್​ 8ಗೆ ಕಿಚ್ಚ ಸುದೀಪ್​ ಪಡೆದ ಸಂಭಾವನೆ ಎಷ್ಟು?

Kichcha Sudeep: ಬಿಗ್​ ಬಾಸ್​ ಸ್ಪರ್ಧಿಗಳಿಗೆ ಸರ್​ಪ್ರೈಸ್​; ಮನೆಯಲ್ಲಿ ಕೊನೆಗೂ ಕೇಳ್ತು ಸುದೀಪ್​ ಧ್ವನಿ!

Follow Us
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ