AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kichcha Sudeep: ಬಿಗ್​ ಬಾಸ್​ ಸ್ಪರ್ಧಿಗಳಿಗೆ ಸರ್​ಪ್ರೈಸ್​; ಮನೆಯಲ್ಲಿ ಕೊನೆಗೂ ಕೇಳ್ತು ಸುದೀಪ್​ ಧ್ವನಿ!

ಅಂತೆಯೇ ಈ ವಾರ ಸಂಪೂರ್ಣ ಭಿನ್ನವಾಗಿ ಮೂಡಿ ಬಂದಿತ್ತು. ಅಲ್ಲದೆ, ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳಿಗೆ ಸುದೀಪ್​ ಧ್ವನಿ ಕೇಳಿದೆ.

Kichcha Sudeep: ಬಿಗ್​ ಬಾಸ್​ ಸ್ಪರ್ಧಿಗಳಿಗೆ ಸರ್​ಪ್ರೈಸ್​; ಮನೆಯಲ್ಲಿ ಕೊನೆಗೂ ಕೇಳ್ತು ಸುದೀಪ್​ ಧ್ವನಿ!
ಬಿಗ್ ಬಾಸ್ ಕನ್ನಡ
ರಾಜೇಶ್ ದುಗ್ಗುಮನೆ
|

Updated on:Apr 18, 2021 | 11:21 PM

Share

ಕನ್ನಡ ಬಿಗ್​ ಬಾಸ್​ನ 7 ಸೀಸನ್​ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಕಿಚ್ಚ ಸುದೀಪ್​ 8ನೇ ಸೀಸನ್​ಗೆ ಕಾಲಿಟ್ಟಿದ್ದಾರೆ. ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ ಕೂಡ. ಒಂದೇ ಒಂದು ವಾರ ಕೂಡ ಅವರು ಬಿಗ್​ ಬಾಸ್​ ತಪ್ಪಿಸಿರಲಿಲ್ಲ. ಆದರೆ,ಎಂಟನೇ ಸೀಸನ್​ನ ಏಳನೆವಾರ ಬಿಗ್​ ಬಾಸ್​ನಿಂದ ದೂರ ಉಳಿದಿದ್ದಾರೆ. ಆದಾಗ್ಯೂ ಬಿಗ್​ ಬಾಸ್​ ಮನೆಯಲ್ಲಿ ಸುದೀಪ್​ ಧ್ವನಿ ಕೇಳಿದೆ! ಈ ಮೂಲಕ ಸ್ಪರ್ಧಿಗಳಿಗೆ ಸರ್​ಪ್ರೈಸ್​ ಸಿಕ್ಕಿದೆ. ಈ ವಾರ ಬಿಗ್​ ಬಾಸ್​ ನಡೆಸಿಕೊಡುವುದಿಲ್ಲ ಎಂದು ಹೇಳಿದ್ದ ಸುದೀಪ್​, ನನಗೆ ಅನಾರೋಗ್ಯ ಕಾಡುತ್ತಿದೆ. ಈ ವಾರಾಂತ್ಯಕ್ಕೆ ನಾನು ಗುಣಮುಖನಾಗುವ ನಿರೀಕ್ಷೆ ಇದೆ. ಆದರೆ, ವೈದ್ಯರ ಸೂಚನೆಯಂತೆ ನಾನು ಕೆಲ ದಿನ ರೆಸ್ಟ್​ ಮಾಡುತ್ತಿದ್ದೇನೆ. ಹೀಗಾಗಿ, ಈ ವಾರದ ಬಿಗ್​ ಬಾಸ್​ ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಈ ವಾರದ ಎಲಿಮಿನೇಷನ್​ಗೆ ಯಾವ ಪ್ಲ್ಯಾನ್​ ಮೂಲಕ ತಂಡ ಬರುತ್ತದೆ ಎನ್ನುವ ಕುತೂಹಲ ನನ್ನದು ಎಂದು ಸುದೀಪ್ ಹೇಳಿದ್ದರು.

ಅಂತೆಯೇ ಈ ವಾರ ಸಂಪೂರ್ಣ ಭಿನ್ನವಾಗಿ ಮೂಡಿ ಬಂದಿತ್ತು. ಅಲ್ಲದೆ, ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳಿಗೆ ಸುದೀಪ್​ ಧ್ವನಿ ಕೇಳಿದೆ. ನೀವು ಬರೆದ ಲೆಟರ್​ ಓದಿದೆ. ಎಲ್ಲಾ ಶಬ್ದಗಳು ಮನಸ್ಸಿಗೆ ಮುಟ್ಟುವಂತಿದೆ. ಚೇತರಿಸಿಕೊಂಡು ಬೇಗ ಬರ್ತೀನಿ. ನೀವು ಮಾಡಿ ಕಳಿಸಿದ ಅಡುಗೆಯನ್ನು ಸವಿದೆ. ನೀವು ನನ್ನ ಮೇಲಿಟ್ಟಿರುವ ಪ್ರೀತಿ ಬಗ್ಗೆ ಖುಷಿ ಇದೆ. ನಾನು ಮಾಡಿದ್ದು ಸಾರ್ಥಕ ಅನಿಸುತ್ತದೆ ಎಂದು ಸುದೀಪ್​ ಹೇಳಿದರು.

ವೀಕೆಂಡ್​ ಮಿಸ್​ ಮಾಡಿಕೊಳ್ಳೋಕೆ ಇಷ್ಟ ಎಂದಿರುವ ಸುದೀಪ್​, ವೀಕೆಂಡ್​ನ ಮಿಸ್​ ಮಾಡಿಕೊಳ್ಳುವುದಕ್ಕೆ ನನಗೂ ಇಷ್ಟ ಇಲ್ಲ. ವೈದ್ಯರ ಸಲಹೆಯಂತೆ ನಾನು ರೆಸ್ಟ್​ ಮಾಡುತ್ತಿದ್ದೇನೆ. ನೀವು ಬರೆದ ಪತ್ರ ಹಾಗೂ ಕಳುಹಿಸಿದ ಊಟಕ್ಕೆ ಥ್ಯಾಂಕ್ಸ್ ಎಂದರು ಸುದೀಪ್​.

ಇದನ್ನೂ ಒದಿ: Kichcha Sudeep: ಬಿಗ್​ ಬಾಸ್​ ನಿರೂಪಣೆ ಬಗ್ಗೆ ಹರಡಿದ ಅಂತೆಕಂತೆಗೆ ಸುದೀಪ್​ ಸ್ಪಷ್ಟನೆ

Kichcha Sudeep: ಕಿಚ್ಚ ಸುದೀಪ್ ಇಲ್ಲದೇ ಬಿಗ್ ಬಾಸ್ ವೀಕೆಂಡ್ ಶೋ ನಡೆಸಿಕೊಡುವ ಸ್ಟಾರ್ ಯಾರು?

Published On - 10:25 pm, Sun, 18 April 21

Follow Us
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ
ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ
ಹಾಸನದಲ್ಲಿ ಬೆಚ್ಚಿಬೀಳಿಸಿದ ಸರಣಿ ಹೃದಯಘಾತ ಪ್ರಕರಣಗಳು
ಹಾಸನದಲ್ಲಿ ಬೆಚ್ಚಿಬೀಳಿಸಿದ ಸರಣಿ ಹೃದಯಘಾತ ಪ್ರಕರಣಗಳು
ಬಗೆದಷ್ಟೂ ಬಯಲಾಗ್ತಿದೆ ಮರಿ ವೀರಪ್ಪನ್‌ನ ಅಪರಾಧ ಚಟುವಟಿಕೆಗಳು
ಬಗೆದಷ್ಟೂ ಬಯಲಾಗ್ತಿದೆ ಮರಿ ವೀರಪ್ಪನ್‌ನ ಅಪರಾಧ ಚಟುವಟಿಕೆಗಳು