AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kichcha Sudeep: ಕಿಚ್ಚ ಸುದೀಪ್ ಇಲ್ಲದೇ ಬಿಗ್ ಬಾಸ್ ವೀಕೆಂಡ್ ಶೋ ನಡೆಸಿಕೊಡುವ ಸ್ಟಾರ್ ಯಾರು?

ಈ ವಾರ ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುವುದಿಲ್ಲ ಎಂಬ ವಿಷಯ ಮನೆಯೊಳಗಿನ ಸ್ಪರ್ಧಿಗಳಿಗೂ ಗೊತ್ತಾಗಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆಯೇ ಎಲ್ಲರೂ ಶಾಕ್ ಆಗಿದ್ದಾರೆ.

Kichcha Sudeep: ಕಿಚ್ಚ ಸುದೀಪ್ ಇಲ್ಲದೇ ಬಿಗ್ ಬಾಸ್ ವೀಕೆಂಡ್ ಶೋ ನಡೆಸಿಕೊಡುವ ಸ್ಟಾರ್ ಯಾರು?
ಕಿಚ್ಚ ಸುದೀಪ್
ಮದನ್​ ಕುಮಾರ್​
| Edited By: |

Updated on:Apr 18, 2021 | 3:44 PM

Share

ಕನ್ನಡದ ಬಿಗ್​ ಬಾಸ್​ನಲ್ಲಿ  ಮೊದಲ ಬಾರಿಗೆ ಕಿಚ್ಚ ಸುದೀಪ್​ ಅವರು ವೀಕೆಂಡ್​ ಎಪಿಸೋಡ್​ ನಡೆಸಿಕೊಡಲು ಸಾಧ್ಯವಾಗುತ್ತಿಲ್ಲ. ಅನಾರೋಗ್ಯದ ಕಾರಣದಿಂದ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಸುದ್ದಿ ಕೇಳಿಬಂದಾಗಿನಿಂದ ಅಭಿಮಾನಿಗಳ ತಲೆಯಲ್ಲಿ ಒಂದು ಪ್ರಶ್ನೆ ಕಾಡುತ್ತಿತ್ತು. ಸುದೀಪ್​ ಬದಲಿಗೆ ವೀಕೆಂಡ್​ ಎಪಿಸೋಡ್​ ನಡೆಸಿಕೊಡುವುದು ಯಾರು? ಅದಕ್ಕೀಗ ಉತ್ತರ ಸಿಕ್ಕಿದೆ. ಸುದೀಪ್​ ಅನುಪಸ್ಥಿತಿಯಲ್ಲಿ ವಾರಾಂತ್ಯದ ಸಂಚಿಕೆಗಳ ಚಿತ್ರೀಕರಣ ನಡೆದಿದೆ.

ಈ ವಾರ ಸುದೀಪ್​ ಅವರು ಬಿಗ್​ ಬಾಸ್​ ನಡೆಸಿಕೊಡುವುದಿಲ್ಲ ಎಂಬ ವಿಷಯ ಮನೆಯೊಳಗಿನ ಸ್ಪರ್ಧಿಗಳಿಗೂ ಗೊತ್ತಾಗಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆಯೇ ಎಲ್ಲರೂ ಶಾಕ್​ ಆಗಿದ್ದಾರೆ. ಸುದೀಪ್​ ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಎಲ್ಲ ಸದಸ್ಯರೂ ಸೇರಿ ಕಿಚ್ಚನಿಗೆ ಪ್ರೀತಿಯ ಪತ್ರ ಬರೆದಿದ್ದಾರೆ. ಕೆಲವರಂತೂ ಕಣ್ಣೀರು ಹಾಕಿದ್ದಾರೆ. ಸುದೀಪ್​ ಇಲ್ಲದೇ ಇದ್ದರೂ ಈ ವಾರದ ಎಲಿಮಿನೇಷನ್​ ಖಂಡಿತವಾಗಿ ನಡೆದಿದೆ.

ಹೌದು, ಸುದೀಪ್​ ಅನುಪಸ್ಥಿತಿಯಲ್ಲಿಯೂ ಎಮಿಲಿನೇಷನ್​ ಪ್ರಕ್ರಿಯೆ ನಡೆಸಲಾಗಿದೆ. ಸ್ಪರ್ಧಿಗಳಿಗೆ ಪ್ರತಿ ಹಂತದಲ್ಲೂ ಬಿಗ್​ ಬಾಸ್​ ಬೇರೆ ಬೇರೆ ಸೂಚನೆಗಳನ್ನು ನೀಡುವ ಮೂಲಕ ಎಲಿಮಿನೇಷನ್​ ಮತ್ತು ಮುಂದಿನ ವಾರಕ್ಕೆ ನಾಮಿನೇಷನ್​ ಪ್ರಕ್ರಿಯೆಯನ್ನು ಮುಗಿಸಿದ್ದಾರೆ. ಸುದೀಪ್​ ಇಲ್ಲ ಎಂದ ಮಾತ್ರಕ್ಕೆ ಬೇರೆ ಯಾವುದೇ ಸ್ಟಾರ್​ ಕಲಾವಿದರಿಗೂ ಕಲರ್ಸ್​ ಕನ್ನಡ ವಾಹಿನಿ ಮಣೆ ಹಾಕಿಲ್ಲ. ಬದಲಿಗೆ ಕೇವಲ ಟಾಸ್ಕ್​ಗಳನ್ನು ನೀಡುವ ಮೂಲಕ ವಾರಾಂತ್ಯದ ಎಪಿಸೋಡ್​ಗಳನ್ನು ​ಮುಗಿಸಲಾಗಿದೆ.

ಈ ಎಂಟು ಸೀಸನ್​ಗಳಲ್ಲಿ ಸುದೀಪ್​ ಇಲ್ಲದೇ ವಾರಾಂತ್ಯದ ಎಪಿಸೋಡ್​ ನಡೆದಿರುವುದು ಇದೇ ಮೊದಲು. ತಮಿಳು, ತೆಲುಗು, ಹಿಂದಿ ಬಿಗ್​ ಬಾಸ್​ ಶೋಗಳಲ್ಲಿ ಇಂಥ ಸಮಸ್ಯೆ ಎದುರಾದಾಗ ಪರ್ಯಾಯವಾಗಿ ಬೇರೆ ಕಲಾವಿದರಿಂದ ನಿರೂಪಣೆ ಮಾಡಿಸಲಾಗಿತ್ತು. ಸಲ್ಮಾನ್​ ಖಾನ್​ ಬದಲಿಗೆ ಸಿದ್ಧಾರ್ಥ್​ ಶುಕ್ಲಾ, ಅಕ್ಕಿನೇನಿ ನಾಗಾರ್ಜುನ ಬದಲಿಗೆ ಸಮಂತಾ ಅವರು ಶೋ ನಡೆಸಿಕೊಟ್ಟಿದ್ದರು. ಆದರೆ ಕನ್ನಡದಲ್ಲಿ ಸುದೀಪ್​ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: Kichcha Sudep: ಕಿಚ್ಚ ಸುದೀಪ್‌ಗೆ ಕೊರೊನಾ ಸೋಂಕು? ಊಹಾಪೋಹಗಳಿಗೆ ಬಿತ್ತು ತೆರೆ

Published On - 3:39 pm, Sun, 18 April 21

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More