Bigg Boss Kannada: ಮಂಜು ಪಾವಗಡ ಅಲ್ಲ, ಬಿಗ್​ ಬಾಸ್​ ಗೆಲ್ಲೋದು ಇವರು!

ಮಂಜು ಅವರನ್ನು ಕುಗ್ಗಿಸಬೇಕು ಎಂದು ಪ್ರಶಾಂತ್​ ಸಂಬರಗಿ ಸಾಕಷ್ಟು ಪ್ಲ್ಯಾನ್​ ಮಾಡಿದ್ದಾರೆ. ಇದು ವರ್ಕ್​ ಆಗಿದೆ ಕೂಡ. ದಿವ್ಯಾ ಸುರೇಶ್​ ಕೂಡ ನಿಧಾನವಾಗಿ ಮಂಜು ಬಗ್ಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ.

Bigg Boss Kannada: ಮಂಜು ಪಾವಗಡ ಅಲ್ಲ, ಬಿಗ್​ ಬಾಸ್​ ಗೆಲ್ಲೋದು ಇವರು!
ಬಿಗ್​ ಬಾಸ್​ ಕನ್ನಡ
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Apr 18, 2021 | 8:22 AM

ಬಿಗ್​ ಬಾಸ್​ ಆರಂಭವಾದಾಗ ಮಂಜು ಪಾವಗಡ ಸ್ಟ್ರಾಂಗ್​ ಸ್ಪರ್ಧಿ​ ಎಂದು ಹೇಳಲಾಗಿತ್ತು. ಆದರೆ, ದಿನ ಕಳೆದಂತೆ ಅದು ಬದಲಾಗುತ್ತಾ ಬಂದಿದೆ. ಮಂಜುಗೆ ಕಾಂಪಿಟೇಷನ್​ ಕೊಡೋಕೆ ಮನೆಯಲ್ಲಿ ಸಾಕಷ್ಟು ಸ್ಪರ್ಧಿಗಳು ರೆಡಿ ಆಗಿದ್ದಾರೆ. ಹೀಗಾಗಿ ಈ ಬಾರಿ ಬಿಗ್​ ಬಾಸ್​ ಗೆಲ್ಲೋದು ಯಾರು ಎಂದು ಕೇಳಿದರೆ ಅದಕ್ಕೆ ಉತ್ತರ ಬೇರೆಯದೇ ಸಿಗುತ್ತದೆ. ಮಂಜು ಅವರನ್ನು ಕುಗ್ಗಿಸಬೇಕು ಎಂದು ಪ್ರಶಾಂತ್​ ಸಂಬರಗಿ ಸಾಕಷ್ಟು ಪ್ಲ್ಯಾನ್​ ಮಾಡಿದ್ದಾರೆ. ಇದು ವರ್ಕ್​ ಆಗಿದೆ ಕೂಡ. ದಿವ್ಯಾ ಸುರೇಶ್​ ಕೂಡ ನಿಧಾನವಾಗಿ ಮಂಜು ಬಗ್ಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇನ್ನು, ಅರವಿಂದ್ ಸಾಕಷ್ಟು ಶೈನ್​ ಆಗುತ್ತಿದ್ದಾರೆ. ಈ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ಚರ್ಚೆ ಆಗಿದೆ. ರಘು ಗೌಡ ಹೀಗೊಂದು ಅಭಿಪ್ರಾಯ ಹೊರ ಹಾಕಿದ್ದಾರೆ.

ಶಮಂತ್​ ಅವರ ಜತೆಗೆ ಮಾತನಾಡುತ್ತಾ ಬಿಗ್​ ಬಾಸ್​ ಮನೆಯಲ್ಲಿ ಟಫ್​ ಕಾಂಪಿಟೇಷನ್​ ಎಂದರೆ ಯಾರು ಎಂದು ನಿನಗೆ ಅನಿಸುತ್ತದೆ ಎಂಬ ಬಗ್ಗೆ ರಘು ಚರ್ಚೆ ಮಾಡಿದ್ದಾರೆ. ಆಗ ಇಬ್ಬರೂ ಅರವಿಂದ್​ ಕೆ.ಪಿ. ಹೆಸರು ಹೇಳಿದ್ದಾರೆ. ‘ನನಗೆ ಹಾಗೆ ಅನಿಸುತ್ತದೆ. ಅವನು ಸ್ಟ್ರಾಂಗ್​ ಇದಾನೆ. ಸುದೀಪ್​ ಅವರು ಏನಾದರೂ ತಪ್ಪು ಹೇಳಿದರೆ ಅದನ್ನು ತಿದ್ದಿಕೊಂಡು ಮುಂದಿನ ವಾರಕ್ಕೆ ಬದಲಾಗುತ್ತಾನೆ. ಸ್ಟ್ರಾಂಗ್​ ಕೂಡ ಇದಾನೆ. ಅರವಿಂದ್​ ಬಿಗ್​ ಬಾಸ್​ ಮನೆಯಲ್ಲಿ ಗೆಲ್ಲೋ ಚಾನ್ಸ್​ ಇದೆ’ ಎಂದು ರಘು ಹೇಳಿದ್ದಾರೆ.

ಅರವಿಂದ್ ಮನೆಯಲ್ಲಿ ತುಂಬಾನೇ ಹೈಲೈಟ್​ ಆಗುತ್ತಿದ್ದಾರೆ. ದಿವ್ಯಾ ಉರುಡುಗ ಜತೆಗಿನ ಪ್ರೀತಿ ವಿಚಾರ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಹಾಗಂತ ಇದೊಂದೇ ವಿಚಾರಕ್ಕೆ ಅವರು ಹೈಲೈಟ್​ ಆಗಿಲ್ಲ. ಆಟದಲ್ಲೂ ಅರವಿಂದ್​ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಎರಡನೇ ಬಾರಿ ಕ್ಯಾಪ್ಟನ್​ ಕೂಡ ಆಗಿದ್ದಾರೆ.

ಇದನ್ನೂ ಓದಿ: Kichcha Sudeep: ಬಿಗ್​ ಬಾಸ್​ ನಿರೂಪಣೆ ಬಗ್ಗೆ ಹರಡಿದ ಅಂತೆಕಂತೆಗೆ ಸುದೀಪ್​ ಸ್ಪಷ್ಟನೆ

Kannada Bigg Boss 8 Elimination: ಈ ವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವವರು ಇವರೇ?

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್